ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ ವಿವಾದಕ್ಕೆ (Hijab controversy BC Nagesh ) ಕಾರಣವಾಗಿರೋ ವಿದ್ಯಾರ್ಥಿನಿಯರು ಏಕಾಂಗಿಯಾಗಿ ಇಷ್ಟು ದೊಡ್ಡ ಹೋರಾಟಕ್ಕೆ ಮುಂದಾಗಿರೋದಿಕ್ಕೇ ಸಾಧ್ಯವೇ ಇಲ್ಲ ಎಂಬ ಮಾತು ಎಲ್ಲೆಡೆಯಿಂದ ಕೇಳಿಬಂದಿದೆ. ಈ ವಿದ್ಯಾರ್ಥಿಗಳ ಹಿಂದಿನ ಶಕ್ತಿ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆದಿದ್ದು ಈ ವಿದ್ಯಾರ್ಥಿಗಳ ಹಿಂದೆ ಕ್ಯಾಂಪಸ್ ಫ್ರಂಟ್ ಇಂಡಿಯಾ ಕೈವಾಡವಿದೆ ಎಂದು ರಾಜ್ಯದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಸಿ.ನಾಗೇಶ್, ಈ ವಿದ್ಯಾರ್ಥಿನಿಯರ ಹಿಜಾಬ್ ವಿವಾದದ ಹಿಂದೆ ಕ್ಯಾಂಪಸ್ ಫ್ರಂಟ್ ಇಂಡಿಯಾ ಕೈವಾಡವಿದೆ. ಆ ಮುಸ್ಲಿಂ ವಿದ್ಯಾರ್ಥಿನಿಗಳು ಬಹಳ ಆ್ಯಕ್ಟಿವ್ ಇದ್ದರು.ಅವರ ಬ್ರೈನ್ ವಾಶ್ ಮಾಡಿ ಈ ರೀತಿ ಮಾಡಲಾಗುತ್ತಿದೆ ಎಂದಿದ್ದಾರೆ. ಈ ಬಗ್ಗೆ ನಾನು ಈ ಬಗ್ಗೆ ಗೃಹ ಇಲಾಖೆಗೆ ಮಾಹಿತಿ ಕೊಟ್ಟಿದ್ದೇನೆ ಎಂದಿರುವ ಬಿ.ಸಿ.ನಾಗೇಶ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿನಿಯರ ಹಿಂದಿದೆ.ವಿದ್ಯಾರ್ಥಿನಿಯರಿಗೆ ಕಾನೂನು ಹೋರಾಟಕ್ಕೆ ಕುಮ್ಮಕ್ಕು ಕೊಡುತ್ತಿದೆ ಈ ಮೂಲಕ ಸ್ವಾಸ್ಥ್ಯ ಕೆಡಿಸುವ ಕೆಲಸ ಸಿಎಫ್‌ಐ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಮೊದಲು ಹಿಬಾಜ್ ಬಿಟ್ಟು ಸಹಜವಾಗಿಯೇ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯರು ಏಕಾಏಕಿಯಾಗಿ ಹಿಜಾಬ್ ಧರಿಸಿಕೊಂಡು ಬಂದು ಸಂವಿಧಾನ ಬದ್ಧ ಹಕ್ಕು ಎಂದು ಪ್ರತಿಭಟನೆ ಮಾಡಿದ್ದಾರೆ. ಅವರ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅವರೇ ಕೆಲವು ಸುಳಿವು ಕೊಟ್ಟಿದ್ದಾರೆ. ಇದು ಪೂರ್ವ ನಿರ್ಧಾರಿತ ಹೋರಾಟ ಎಂಬುದರ ಸುಳಿವು ಎಂಬ ಮಾಹಿತಿ ಇದೆಡಿಸೆಂಬರ್ ನಲ್ಲಿ ಎಬಿವಿಪಿ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು ಇವರು ಎಂಬ ಮಾಹಿತಿ ಇದೆ.ಈ ಕಾರಣಕ್ಕೆ ಇವರ ಬ್ರೈನ್ ವಾಶ್ ನಡೆಸಲಾಗಿದ್ಯಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.
ಸಹಜವಾಗಿ ಕಾಲೇಜು ಪ್ರಾಂಶುಪಾಲರಾಗಿ ಈ ಬಗ್ಗೆ ಬೇಸರ ಆಗಿದೆಹಿಜಬ್ ಹಾಕಿಕೊಂಡು ಬಂದು ಇಷ್ಟೊಂದು ವಿವಾದ ಮಾಡಿದ್ದಾರೆ ಎಂದರೆ ಅವರಿಗೆ ನಿಜಕ್ಕೂ ಬೇಸರವಾಗಿರುತ್ತದೆ . ಈ ಬಗ್ಗೆ ನಾವು ಗುಪ್ತಚರ ಇಲಾಖೆಯಿಂದಲೂ ಮಾಹಿತಿ ಕಲೆಹಾಕುತ್ತಿದ್ದೇವೆ. ಆದರೆ ಇದರಿಂದ ಹಿಂದೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೈವಾಡವಿರುವುದು ಸ್ಪಷ್ಟ.ದೇಶದ ದುಬಾರಿ ವಕೀಲರನ್ನು ನೇಮಿಸಿ ವಾದ ಮಾಡಿಸುತ್ತಾರೆ ಎಂದರೆ ಅವರ ಹಿಂದಿರುವ ಶಕ್ತಿ ಎಷ್ಡು ದೊಡ್ಡದು ಎಂದು ಭಾವಿಸಿ ಇವರಿಗೆ ಎಲ್ಲಿಂದ ಇಷ್ಟೊಂದು ದುಡ್ಡು ಬಂತು ಎಂಬ ಅನುಮಾನ ಹುಟ್ಟಿದೆ ಎಂದು ನಾಗೇಶ್ ಹೇಳಿದ್ದಾರೆ.
ಇದನ್ನೂ ಓದಿ : Swapna Suresh : ಸ್ವಪ್ನ ಸುರೇಶ್ ಗೆ ಮತ್ತೆ ಸಂಕಷ್ಟ : 16 ಲಕ್ಷ ವೇತನ ಹಿಂತಿರುಗಿಸಲು ಕೇರಳ ಸರಕಾರದ ಆದೇಶ
ಇದನ್ನೂ ಓದಿ : ವಾಟ್ಸಾಪ್ ಸ್ಟೇಟಸ್ ಹಾಕೋ ಮುನ್ನ ಎಚ್ಚರ; ರೌಡಿ ಶೀಟರ್ ಕೇಸ್ ಬೀಳಬಹುದು ಹುಷಾರು
( Hijab controversy education minister BC Nagesh give Exclusive Detail)