Tesla India and China: ಚೀನಾದಲ್ಲಿ ತಯಾರಿಸಿ ಭಾರತದಲ್ಲಿ ಮಾರಲು ಬಿಡೆವು; ಟೆಸ್ಲಾಕ್ಕೆ ನಿತಿನ್ ಗಡ್ಕರಿ ಎಚ್ಚರಿಕೆ

ತೆರಿಗೆ ಕಡಿಮೆ ಇರುವ ಮತ್ತು ಉದ್ಯಮ ಸ್ನೇಹಿ ನೀತಿಯನ್ನು ಹೊಂದಿರುವ ಚೀನಾದಲ್ಲಿನ ಘಟಕದಲ್ಲಿ ವಿದ್ಯುತ್‌ ಚಾಲಿನ (Tesla Electric Vehiclle China) ವಾಹನ ಉತ್ಪಾದಿಸಿ ಭಾರತದಲ್ಲಿ ಮಾರಾಟ ಮಾಡಲು ಟೆಸ್ಲಾ ಬಯಸಿದೆ. ಹೀಗಾಗಿಯೇ . ಟೆಸ್ಲಾಗೆ ಚೀನಾದ ಮೇಲೆ ಪ್ರೀತಿ ಹೆಚ್ಚು ಎಂದು ಸರ್ಕಾರ ಸಂಸತ್‌ನಲ್ಲಿ ಬುಧವಾರ ಹೇಳಿದೆ. ಎಲಾನ್‌ ಮಸ್ಕ್‌ ಅವರ ಟೆಸ್ಲಾ (Elon Musk Tesla) ಕಂಪನಿಯನ್ನು ಭಾರತ ಸ್ವಾಗತಿಸುತ್ತದೆ. ಆದರೆ, ಚೀನಾದಲ್ಲಿ ತಯಾರಿಸಿದ ವಾಹನಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕುರಿತು (Tesla India and China) ಟೆಸ್ಲಾ ತಳೆದಿರುವ ಧೋರಣೆಯನ್ನು ಭಾರತ ಒಪ್ಪುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ನಿತಿನ್‌ ಗಡ್ಕರಿ (Union Minister Nitin Gadkari) ಸ್ಪಷ್ಟಪಡಿಸಿದ್ದಾರೆ.

ಟೆಸ್ಲಾದ ಭಾರತದ ವಿಭಾಗದ ಮುಖ್ಯಸ್ಥರೊಂದಿಗೆ ಇತ್ತೀಚೆಗೆ ಮಾತುಕತೆ ನಡೆಸಿರುವುದಾಗಿ ಹೇಳಿದ ಗಡ್ಕರಿ, ಭಾರತದಲ್ಲೇ ತಯಾರಿಕಾ ಘಟಕ ಸ್ಥಾಪಿಸುವಂತೆ ಮತ್ತು ಇದರಿಂದ ದೇಶದಲ್ಲಿ ದೊಡ್ಡ ಮಾರುಕಟ್ಟೆ ಸಿಗಲಿದೆ ಎಂದಿದ್ದೆ ಎಂದು ನ್ಯೂಸ್‌ 18 ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಟೆಸ್ಲಾಗೆ ಅನುಕೂಲ ಬೇಕೋ ಅದನ್ನು ನಾವು ಕಲ್ಪಿಸುತ್ತೇವೆ. ಅದು ಕೈಗಾರಿಕೆಯನ್ನು ಸ್ಥಾಪಿಸಲಿ. ಭಾರತದ ಆಟೋಮೊಬೈಲ್‌ ಕ್ಷೇತ್ರದ ಪಟ್ಟು ವಹಿವಾಟು 7.50 ಲಕ್ಷ ಕೋಟಿ ರೂ. ಇದೆ. ವಿಶ್ವದ ಎಲ್ಲ ಪ್ರತಿಷ್ಠಿತ ಬ್ರ್ಯಾಂಡ್‌ ಕಾರುಗಳು ಇಲ್ಲೇ ಉತ್ಪಾದನೆ ಆಗುತ್ತದೆ. ಬಿಎಂಡಬ್ಲ್ಯೂ, ಮರ್ಸಿಡಿಸ್‌, ಹುಂಡೈ, ಟಯೋಟಾ, ವೊಲ್ವೊ, ಹೋಡಾಗಳ ಘಟಕ ಇಲ್ಲಿದೆ. ಇವರೆಗೆ ಎದುರಾಗದ ಸಮಸ್ಯೆ ಟೆಸ್ಲಾಗೆ ಹೇಗೆ ಆಗುತ್ತದೆ ಎಂದು ಗಡ್ಕರಿ ಪ್ರಶ್ನಿಸಿದ್ದಾರೆ.

ಟೆಸ್ಲಾ ಕಂಪನಿಗೆ ಅನೇಕ ರಾಜ್ಯಗಳು ರತ್ನಗಂಬಳಿ ಹಾಕಿವೆ. ತಮ್ಮಲ್ಲಿ ಘಟಕ ಸ್ಥಾಪನೆ ಮಾಡಿದರೆ ಮೂಲಸೌಕರ್ಯವನ್ನು ವಿನಾಯಿತಿ ದರದಲ್ಲಿ ಕಲ್ಪಿಸಲಾಗುವುದು. ತೆರಿಗೆಯನ್ನು ಕಡಿಮೆ ಮಾಡಲಾಗುವುದು, ಅಗತ್ಯ ಭೂಮಿಯನ್ನು ಕಲ್ಪಿಸಲಾಗುವುದು ಎಂದು ಹೇಳಿವೆ. ಆದರೆ, ಭಾರತದಲ್ಲಿ ಭೂಸ್ವಾಧೀನದ ತೊಡಕು ಮತ್ತು ವಿಪರೀತ ತೆರಿಗೆಯಿಂದ ಹಿಂದೇಟು ಹಾಕುತ್ತಿದೆ.

ಇದನ್ನೂ ಓದಿ: Elon Musk : ಕೆಲಸ ಬಿಡಲಿದ್ದಾರಂತೆ ಟೆಸ್ಲಾ ಸಿಇಒ ಎಲಾನ್ ಮಸ್ಕ್!

(Tesla welcome to India Made in China sell in India is not digestible says Union Minister Nitin Gadkari)

Comments are closed.