ಬೆಂಗಳೂರು: (KEA conducts KCET exam) ಕೆ-ಸೆಟ್ ಪರೀಕ್ಷೆಗಳನ್ನು ವಿಶ್ವವಿದ್ಯಾಲಯಗಳು ಮಾಡುವ ನಿಯಮವನ್ನು ಸರಕಾರ ಕೈಬಿಟ್ಟಿದ್ದು, ಇನ್ನು ಮುಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ನ ಮಧು ಮಾದೇಗೌಡ ಪ್ರಶ್ನೆ ಕೇಳಿದ್ದು, ಕೆ-ಸೆಟ್ ಪರೀಕ್ಷೆಯನ್ನು ವಿಶ್ವವಿದ್ಯಾಲಯಗಳು ಮಾಡುವ ನಿಯಮವನ್ನು ಸರಕಾರ ಕೈಬಿಟ್ಟಿದೆ. ಈ ನಿರ್ಧಾರವನ್ನು ಸರಕಾರ ವಾಪಾಸ್ ಪಡೆದು ಕೆ-ಸೆಟ್ ಪರೀಕ್ಷೆಗಳನ್ನು ವಿಶ್ವವಿದ್ಯಾಲಯಗಳೆ ನಡೆಸಲು ಅವಕಾಶ ಮಾಡಿಕೊಡಬೇಕು. ಕೆ-ಸೆಟ್ ಪರೀಕ್ಷೆ ಮೈಸೂರು ವಿವಿ ಮಾಡುತ್ತಿತ್ತು. ಈಗ ಅದನ್ನು ರದ್ದು ಮಾಡಿದೆ. ಮತ್ತೆ ವಿವಿಗಳ ಕೆ-ಸೆಟ್ ಪರೀಕ್ಷೆ ಮಾಡೋ ಅವಕಾಶ ಕೊಡಬೇಕು ಎಂದು ಒತ್ತಾಯ ಮಾಡಿದರು.
ಇದಕ್ಕೆ ಉತ್ತರ ನೀಡಿದ ಅಶ್ವಥ್ ನಾರಾಯಣ್ , ಕಳೆದ ಹನ್ನೊಂದು ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯ ಕೆ-ಸೆಟ್ ಪರೀಕ್ಷೆ ಮಾಡುತ್ತಿತ್ತು. ಈ ಪರೀಕ್ಷೆ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿತ್ತು. ಕೆ-ಸೆಟ್ ನಲ್ಲಿ ಪಾರದರ್ಶಕತೆ, ಗುಣಮಟ್ಟ ತರುವ ಹಿನ್ನಲೆಯಲ್ಲಿ ಈ ಪರೀಕ್ಷೆಯನ್ನು ಕೆಇಎಗೆ ಮಾಡಲು ನೀಡಲಾಗುತ್ತಿದೆ ಎಂದರು. ಯೂಜಿಸಿಯ ಗಮನಕ್ಕೂ ಕೂಡ ಇದನ್ನು ತರಲಾಗಿದೆ. ಕೆಇಎ ಅತ್ಯುತ್ತಮ ಸಂಸ್ಥೆಯಾಗಿದ್ದು, ಇದರ ಮೇಲೆ ಯಾವುದೇ ದೊಡ್ಡ ಆರೋಪವಿಲ್ಲ. ಪಾರದರ್ಶಕವಾಗಿ ಕೆಇಎ ಪರೀಕ್ಷೆ ಮಾಡುತ್ತದೆ. ಹೀಗಾಗಿ ಕೆ-ಸೆಟ್ ಪರೀಕ್ಷೆ ಕೆಇಎ ಮೂಲಕ ಇನ್ನು ಮುಂದೆ ಮಾಡುತ್ತೇವೆ ಎಂದು ಸಚಿವರು ಸ್ಪಷ್ಟನೆ ನೀಡಿದರು.
ಈ ಹಿಂದೆ ಕೆ-ಸೆಟ್ ಪರೀಕ್ಷೆಯನ್ನು ಮೈಸೂರು ವಿವಿ ನಡೆಸಿಕೊಂಡು ಬಂದಿತ್ತು. ಆದರೆ ಮೈಸೂರು ವಿವಿ ಪರೀಕ್ಷೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಹಲವಾರು ದೂರುಗಳು ಬಂದಿತ್ತು. ಕಳೆದ ಹನ್ನೊಂದು ವರ್ಷಗಳಿಂದ ನಡೆಯುತ್ತಿದ್ದ ಮೈಸೂರು ವಿವಿ ಪರೀಕ್ಷೆಯಲ್ಲಿ ಹಲವಾರುಇ ಲೋಪಗಳಾಗಿವೆ. ಮತ್ತೆ ಈ ರೀತಿ ಲೋಪಗಳು ಉಂಟಾಗದೇ ಇರುವಂತೆ ನೋಡಿಕೊಳ್ಳುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಆದ್ದರಿಂದ ಇನ್ನು ಮುಂದೆ ಕೆ-ಸೆಟ್ ಪರೀಕ್ಷೆಯನ್ನು ಕೆಇಎ ನಡೆಸಿಕೊಡುತ್ತದೆ. ಇದು ಈ ವರ್ಷದಿಂದಲೇ ಪ್ರಾರಂಭವಾಗಲಿದೆ.
ಇದನ್ನೂ ಓದಿ : ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ನಿರ್ದೇಶಕರ ವಿರುದ್ದ ನ್ಯಾಯಾಂಗ ನಿಂದನೆ: ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದ ಹೈಕೋರ್ಟ್
KEA conducts KCET exam: Government abandons decision to conduct K-CET exams in universities