ಬೆಂಗಳೂರು : ಕರುನಾಡಿನಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ನಿಯಂತ್ರಣ ತಪ್ಪಿದ್ದು ಓಮೈಕ್ರಾನ್ ಪ್ರಕರಣ ಈಗಾಗಲೇ ನೂರರ ಗಡಿಯಲ್ಲಿದ್ದರೇ, ಕೊರೋನಾ ಈಗಾಗಲೇ ಸಾವಿರದ ಗಡಿದಾಟಿದೆ.ಮಂಗಳವಾರ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಗುರುವಾರದ ವೇಳೆಗೆ ಸೆಮಿಲಾಕ್ ಡೌನ್ ಘೋಷಣೆಯಾಗೋ ಸಾಧ್ಯತೆ ದಟ್ಟವಾಗಿದೆ. ಈ ಮಧ್ಯೆ ರಾಜ್ಯದ ಲಕ್ಷಾಂತರ ಪೋಷಕರಿಗೆ ಶಾಲಾ ಕಾಲೇಜುಗಳ ( Karnataka schools colleges closed ) ಭವಿಷ್ಯ ಏನು ಎಂಬ ಆತಂಕ ಕಾಡಲಾರಂಭಿಸಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ದೇಶದಲ್ಲಿ ಕೊರೋನಾ ಮೂರನೇ ಅಲೆ ಭೀತಿ ದಟ್ಟವಾಗಿದೆ. ಹೀಗಾಗಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಹೆಚ್ಷಿರುವ ದೆಹಲಿ, ಪಶ್ಚಿಮಬಂಗಾಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಈಗಾಗಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹೀಗಾಗಿ ಕೊರೋನಾ ಮತ್ತು ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಕರ್ನಾಟಕದ ಪ್ರಾಥಮಿಕ ಸೇರಿದಂತೆ ಶಾಲಾ ಕಾಲೇಜುಗಳ ಕತೆಯೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಮಧ್ಯೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ವತಃ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಹೋಂ ಐಷೋಲೇಶನ್ ನಲ್ಲಿದ್ದಾರೆ. ಐಶೋಲೇಶನ್ ನಲ್ಲಿರುವ ಸಚಿವ ಬಿ.ಸಿ.ನಾಗೇಶ್ ಭಾನುವಾರ ರಾತ್ರಿ ಖಾಸಗಿ ಶಾಲಾಸಂಘಟನೆಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ಶಾಲೆ ಹಾಗೂ ಕಾಲೇಜುಗಳ ಸ್ಥಿತಿಗತಿ ಏನು, ಕರೋನಾ ಪ್ರಕರಣಗಳು ಹೆಚ್ಚಿದಲ್ಲಿ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಸಚಿವರು ಅಧಿಕಾರಗಳ ಜೊತೆ ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಶಾಲೆಗಳನ್ನು ಮುಚ್ಚುವ ಅಭಿಪ್ರಾಯ ವ್ಯಕ್ತವಾಗಿದ್ದು, ಹೆಚ್ಚು ಪ್ರಕರಣಗಳು ದಾಖಲಾಗುವ ಕಡೆಗಳಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲು ಸಲಹೆ ನೀಡಲಾಗಿದೆಯಂತೆ. ಆದರೆ ಒಂದೊಮ್ಮೆ ಕೊರೋನಾ ಪ್ರಕರಣಗಳು ಒಂದು ವಾರಕ್ಕೆ ಪಾಸಿಟಿವಿಟಿ ದರ ೫ ನ್ನು ದಾಟಿದರೇ ಸರ್ಕಾರ ಲಾಕ್ ಡೌನ್ ನಿರ್ಣಯ ಕೈಗೊಳ್ಳಲಿದ್ದು ಅವಾಗ ಶಾಲಾ ಕಾಲೇಜು ಬಂದ್ ಅನಿವಾರ್ಯವಾಗಲಿದೆ ಅನ್ನೋ ಮಾತು ಹಿರಿಯ ಅಧಿಕಾರಿಗಳಿಂದಲೇ ಕೇಳಿಬಂದಿದೆ.
ಇನ್ನೊಂದೆಡೆ ಖಾಸಗಿ ಶಾಲೆಗಳ ಒಕ್ಕೂಟ ಶಿಕ್ಷಣ ಸಚಿವರಿಗೆ ಸಭೆಯಲ್ಲಿ ಮನವಿ ಮಾಡಿದ್ದು, ತೀರಾ ಅನಿವಾರ್ಯವಾಗದೇ ಮಾತ್ರ ಶಾಲೆಗಳನ್ನು ಬಂದ್ ಮಾಡಿ. ಉಳಿದ ರಂಗಗಳಂತೆ ನಮ್ಮ ಸಮಸ್ಯೆಯನ್ನು ಪರಿಗಣಿಸಿ ಎಂದು ರುಪ್ಸಾ ಶಿಕ್ಷಣ ಸಚಿವರಿಗೆ ಮನವಿ ಮಾಡಿದೆ. ಮೂಲಗಳ ಮಾಹಿತಿ ಪ್ರಕಾರ ಶಿಕ್ಷಣ ಸಚಿವರು ಸದ್ಯ ಶಾಲಾ ಕಾಲೇಜುಗಳ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದ್ದು, ಕೊರೋನಾ ಪ್ರಕರಣಗಳು ಹೆಚ್ಚಿದಲ್ಲಿ ಶಾಲಾ ಕಾಲೇಜುಗಳ ವಿಚಾರದ ನಿರ್ಧಾರದ ಹೊಣೆಯನ್ನು ಸಿಎಂಗೆ ಬಿಟ್ಟು ಬಿಡಲು ನಿರ್ಧರಿಸಿದ್ದಾರಂತೆ. ಒಟ್ಟಿನಲ್ಲಿ ರಾಜ್ಯದಲ್ಲಿ ಶಾಲಾ ಕಾಲೇಜುಗಳ ಭವಿಷ್ಯ ಗುರುವಾರ ನಿರ್ಧಾರವಾಗಲಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಆರ್ಭಟಿಸಿದ ಕೊರೊನಾ : ಶಿಕ್ಷಣ ಸಚಿವರಿಗೆ ಸೋಂಕು : ಮತ್ತೆ ಶಾಲೆಗಳು ಬಂದ್ !
ಇದನ್ನೂ ಓದಿ : ಇಂದಿನಿಂದ 15- 18 ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ: ಲಸಿಕೆ ಪಡೆದ ಮಕ್ಕಳಿಗೆ ರಜೆ
(mumbai, west bengal, goa schools close, Maybe Karnataka schools colleges closed)