Rose petal powder for hair care : ಕೂದಲಿನ ಆರೈಕೆಗೂ ಬಳಕೆಯಾಗಲಿದೆ ಗುಲಾಬಿ ಹೂವು

ಗುಲಾಬಿ ಕೇವಲ ಹೂವು ಮಾತ್ರವಲ್ಲ. ಇದನ್ನು ಅಲಂಕಾರಕ್ಕೆ ಮಾತ್ರವಲ್ಲದೇ ಅಂದವನ್ನು ಹೆಚ್ಚಿಸಲೂ ಸಹ ಬಳಕೆ ಮಾಡಬಹುದು. ಚರ್ಮದ ಆರೈಕೆ ವಿಚಾರ ಬಂದಾಗ ಗುಲಾಬಿಯ ಪಕಳೆಗಳು(Rose petal powder for hair care) ಮಹಿಳೆಯರ ಮೊದಲ ಆಯ್ಕೆಯಾಗಿದೆ. ಇದು ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡಲು, ಕಾಂತಿಯನ್ನು ಹೆಚ್ಚಿಸಲು, ಸುಕ್ಕು ನಿವಾರಿಸಲು ಹೀಗೆ ಅನೇಕ ಕಾರಣಗಳಿಗಾಗಿ ಬಳಕೆ ಮಾಡಬಹುದಾಗಿದೆ. ಕೇವಲ ತ್ವಚೆಯ ಕಾಂತಿ ಹೆಚ್ಚಿಸುವುದು ಮಾತ್ರವಲ್ಲದೇ ಕೂದಲಿನ ಆರೋಗ್ಯಕ್ಕೂ ಗುಲಾಬಿ ಪಕಳೆಗಳು ಅತ್ಯಂತ ಸಹಕಾರಿಯಾಗಿವೆ.


ಗುಲಾಬಿಯ ಪಕಳೆಗಳಲ್ಲಿ ಆ್ಯಂಟಿಆಕ್ಸಿಡಂಟ್​ ಹಾಗೂ ಆ್ಯಂಟಿಮೈಕ್ರೋಬಿಯಲ್​ ಗುಣಲಕ್ಷಣಗಳಿವೆ. ಇದು ನೆತ್ತಿಯನ್ನು ರಕ್ಷಿಸುವುದು ಮಾತ್ರವಲ್ಲದೇ ನೆತ್ತಿಯನ್ನು ಸ್ವಚ್ಛವಾಗಿ ಇಡುತ್ತದೆ. ಗುಲಾಬಿ ದಳಗಳನ್ನು ಒಣಗಿಸಿ ಪುಡಿ ಮಾಡಿಕೊಂಡರೆ ಇದನ್ನು ನೀವು ಅನೇಕ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ. ಗುಲಾಬಿ ದಳದ ಪುಡಿ ಮಾತ್ರವಲ್ಲದೆ ನೇರವಾಗಿ ಗುಲಾಬಿ ದಳಗಳನ್ನೂ ನೀವು ಕೂದಲಿನ ಆರೈಕೆಗೆ ಬಳಕೆ ಮಾಡಬಹುದಾಗಿದೆ.


ಗುಲಾಬಿ ದಳಗಳನ್ನು ಬಳಸಿ ನೀವು ಎಣ್ಣೆ ತಯಾರಿಸಬಹುದಾಗಿದೆ. ಇದಕ್ಕಾಗಿ ನೀವು ಮೊದಲು ತೆಂಗಿನ ಎಣ್ಣೆಯನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಇದಕ್ಕೆ 10 ರಿಂದ 15 ಗುಲಾಬಿ ದಳಗಳನ್ನು ಮಿಶ್ರಣ ಮಾಡಿ. ಕೊನೆಯಲ್ಲಿ ಗುಲಾಬಿ ದಳಗಳನ್ನು ಸೇರಿಸಬೇಕು ಎಂಬುದು ನೆನಪಿನಲ್ಲಿರಲಿ. ಎಣ್ಣೆ ಉಗುರು ಬೆಚ್ಚ ಆದಾಗ ಅದನ್ನು ಚೆನ್ನಾಗಿ ನೆತ್ತಿಗೆ ಹಚ್ಚಿಕೊಂಡು ಮಸಾಜ್​ ಮಾಡಿ. ನೀವು ಗುಲಾಬಿ ದಳಗಳ ಬದಲು ಗುಲಾಬಿ ಪುಡಿಯನ್ನು ಬೇಕಿದ್ದರೂ ಬಳಕೆ ಮಾಡಬಹುದು. ಸ್ವಲ್ಪ ಸಮಯದ ಬಳಿಕ ತಲೆ ಸ್ನಾನ ಮಾಡಿ.


ಗುಲಾಬಿಯ ದಳಗಳಿಂದ ನೀವು ಅನೇಕ ರೀತಿಯಲ್ಲಿ ಹೇರ್​ ಮಾಸ್ಕ್​ ತಯಾರಿಸಬಹುದಾಗಿದೆ. ಸಾಕಷ್ಟು ಗುಲಾಬಿ ದಳಗಳನ್ನು ನೀವು ಬಿಸಿಲಿನಲ್ಲಿ ಒಣಗಿಸಿ ಬಳಿಕ ಅದನ್ನು ಪುಡಿ ಮಾಡಿಕೊಳ್ಳಿ. 2 ಚಮಚ ಮೊಸರಿಗೆ 1 ಚಮಚ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿ. ಇದಕ್ಕೆ 2 ಚಮಚ ಗುಲಾಬಿ ದಳದ ಪುಡಿ ಹಾಗೂ 1 ಚಮಚ ಜೇನುತುಪ್ಪ ಸೇರಿಸಿ. ಇದನ್ನು ನಿಮ್ಮ ತಲೆಗೆ ಹೆಚ್ಚಿ 1 ಗಂಟೆ ಬಿಟ್ಟು ತೊಳೆಯಿರಿ. ಇದರಿಂದ ಕೂದಲಿನಲ್ಲಿರುವ ಎಣ್ಣೆಯ ಅಂಶಗಳು ಸಂಪೂರ್ಣವಾಗಿ ತೊಲಗಲಿದೆ.


ಅನೇಕ ಬಾರಿ ಮಹಿಳೆಯರಿಗೆ ತಲೆ ಸ್ನಾನ ಮಾಡಲು ಅಥವಾ ಸರಿಯಾಗಿ ತಲೆ ಬಾಚಿಕೊಳ್ಳಲು ಸಹ ಸಮಯ ಇರೋದಿಲ್ಲ. ಇಂತಹ ಸಮಯದಲ್ಲಿ ಕೂದಲು ಹೆಚ್ಚು ಸಿಕ್ಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೀವು ಗುಲಾಬಿಯನ್ನು ಹೇರ್​ ಸೀರಂನಂತೆ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ನೀವು 2 ಕಪ್​ ನೀರಿಗೆ ತೊಳೆದ ಗುಲಾಬಿ ನೀರನ್ನು ಹಾಕಿ ಮಿಶ್ರಣ ಮಾಡಿ. ನೀರು ಅರ್ಧದಷ್ಟಾಗುವವರೆಗೆ ಕುದಿಸಿ. ಈ ವೇಳೆಯಲ್ಲಿ ಗುಲಾಬಿ ದಳದ ಬಣ್ಣ ಕೂಡ ಬದಲಾಗಲಿದೆ. ಇದನ್ನು ಸ್ಪ್ರೇ ಬಾಟಲಿ ಹಾಕಿಟ್ಟುಕೊಳ್ಳಿ. ಇದಕ್ಕೆ 1 ಅಥವಾ 2 ಚಮಚ ಗ್ಲಿಸರಿನ್​ ಮಿಶ್ರಣ ಮಾಡಿ. ಇದನ್ನು ನಿಮ್ಮ ಕೂದಲಿಗೆ ಬಳಸಿ

how to use rose petal powder for hair care

ಇದನ್ನು ನೋಡಿ : ಅಕ್ಕಿ ಹಿಟ್ಟಿನಿಂದಲೂ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳ ಬಹುದು

ಇದನ್ನೂ ನೋಡಿ : Turmeric lemon face pack : ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಬಳಸಿ ಅರಿಶಿನ – ನಿಂಬು ಫೇಸ್​ಪ್ಯಾಕ್​

Comments are closed.