ಮಂಗಳವಾರ, ಮೇ 6, 2025
HomeeducationTuition Center Registration : ಮನೆ ಮನೆಯಲ್ಲಿ ಟ್ಯೂಶನ್ ಮಾಡುವಂತಿಲ್ಲ: ಹೊರಬಿತ್ತು ಶಿಕ್ಷಣ ಇಲಾಖೆ ಆದೇಶ

Tuition Center Registration : ಮನೆ ಮನೆಯಲ್ಲಿ ಟ್ಯೂಶನ್ ಮಾಡುವಂತಿಲ್ಲ: ಹೊರಬಿತ್ತು ಶಿಕ್ಷಣ ಇಲಾಖೆ ಆದೇಶ

- Advertisement -

ಬೆಂಗಳೂರು : Tuition Center Registration: ಸಿಲಿಕಾನ್‌ ಸಿಟಿಯಲ್ಲಿ ಶಿಕ್ಷಣ ಅನ್ನೋದು ಕೇವಲ ಕಲಿಕೆಯ ಮಾಧ್ಯಮವಾಗಿ ಉಳಿದಿಲ್ಲ.‌ ಬದಲಾಗಿ ಸುಲಿಗೆಯ ಅಡ್ಡವಾಗಿ ಬದಲಾಗಿದೆ. ಹೀಗಾಗಿ ದುಬಾರಿ ಡೊನೇಶನ್, ಸ್ಕೂಲ್ ಫೀಸ್ ಹಾಗೂ ಸ್ಕೂಲ್ ವ್ಯಾನ್ ಸುಲಿಗೆ ಬಳಿಕ ಪೋಷಕರನ್ನು ಟ್ಯೂಶನ್ ಹೆಸರಿನಲ್ಲಿ ಪೀಡಿಸಲಾಗುತ್ತಿತ್ತು.‌ ಟ್ಯೂಶನ್ ಗೆ ಹೋಗದ ಮಕ್ಕಳನ್ನು ನಿಷ್ಪಯೋಜಕರಂತೆ ಕಾಣುವ ಸ್ಥಿತಿಯೂ ನಗರದಲ್ಲಿತ್ತು.‌ನಾಯಿ ಕೊಡೆಗಳಂತೆ ಎದ್ದು ನಿಂತಿದ್ದ ಟ್ಯೂಶನ್ ಸೆಂಟರ್ ಗಳಿಗೆ ಈಗ ಕಡಿವಾಣ ಬೀಳುವ ಕಾಲ ಸನ್ನಿಹಿತವಾಗಿದೆ.

ಹೌದು ಸಿಲಿಕಾನ್ ಸಿಟಿಯ ಬಹುದೊಡ್ಡ ಮಾಫಿಯಾ ದಲ್ಲಿ ಟ್ಯೂಶನ್ ಕೂಡ ಒಂದಾಗಿತ್ತು. ಈಗ ಇದಕ್ಕೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಇದರ ಫಲವಾಗಿ ಶಿಕ್ಷಣ ಇಲಾಖೆ ಎಲ್ಲೆಂದರಲ್ಲಿ ನಡೆಯೋ ಟ್ಯೂಶನ್ ಗೆ ಮಾಫಿಯಾಗೆ ಕಡಿವಾಣ ಹಾಕಲು ನಿಯಮ ರೂಪಿಸಿದೆ. ಇದುವರೆಗೂ ನಗರದ ಗಲ್ಲಿ ಗಲ್ಲಿಯ ಮನೆ ಮನೆಗಳಲ್ಲಿ, ಟ್ಯೂಶನ್ ಸೆಂಟರ್ ನಲ್ಲಿ ಸೇರಿದಂತೆ ಹಲವೆಡೆ ಟ್ಯೂಶನ್ ನಡೆಯಿತ್ತಿತ್ತು. ಯಾವುದೇ ಮಾನದಂಡ, ನಿಯಮ, ಸುರಕ್ಷತೆ ಇಲ್ಲದಂತೆ ವಿದ್ಯಾರ್ಥಿಗಳನ್ನು ಒಂದೆಡೆ ಕೂಡಿಕೊಂಡು ಮನೆಪಾಠ ಹೇಳಿ ಕೊಡಲಾಗುತ್ತಿತ್ತು. ಇದನ್ನೂ ಓದಿ : SSLC exam: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ : ಏಪ್ರಿಲ್ 1ರಿಂದ ಎಕ್ಸಾಂ ಶುರು

ಇದಕ್ಕೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. 1 ರಿಂದ 7 ನೇ ತರಗತಿಯವರೆಗೆ ಹಾಗೂ 8 ರಿಂದ 10 ನೇ ತರಗತಿಯವರೆಗಿನ ಟ್ಯುಟೋರಿಯಲ್ ಗೆ ನೋಂದಣಿ ಕಡ್ಡಾಯ ಎಂದಿದೆ. ಒಂದೊಮ್ಮೆ ಈ ನಿಯಮವನ್ನು ಉಲ್ಲಂಘಿಸಿದ್ರೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಈ ನಿಯಮದ ಪ್ರಕಾರ, ಎಲ್ಲಿ ಟ್ಯುಟೋರಿಯಲ್ ನಡೆಸಲಾಗುತ್ತಿದೆ? ಎಷ್ಟು ಮಕ್ಕಳಿಗೆ ಪಾಠ ಹೇಳಿ ಕೊಡಲಾಗ್ತಿದೆ? ಎಷ್ಟು ಹಣವನ್ನು ಪಡೆಯಲಾಗ್ತಿದೆ ? ಎಂಬ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ನೀಡಬೇಕು. ಇದನ್ನು ಆಧರಿಸಿ ಇಲಾಖೆ ಅಂತಹವರಿಗೆ ನೋಂದಣಿ ನೀಡಲಿದೆ. ಇದನ್ನೂ ಓದಿ : NEET CET Exams:ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ನೀಟ್, ಸಿಇಟಿ ಪರೀಕ್ಷೆಗಳಿಗೆ ಆನ್‌ಲೈನ್ ತರಬೇತಿ

ಶಿಕ್ಷಣ ಇಲಾಖೆ ಈ ನಿಯಮವನ್ನು ಜಾರಿಗೆ ತರಲು ಸರ್ಕಸ್ ನಡೆಸುತ್ತಿದ್ದು, ಇದು ನಗರದ ಟ್ಯೂಶನ್ ನಡೆಸೋರಿಗೆ ಅಸಮಧಾನ ತಂದಿದೆ. ಇನ್ನೊಂದೆಡೆ ನಾವು ಹಲವು ಭಾರಿ ಮನವಿ ಮಾಡಿದ್ದರೂ ಶಿಕ್ಷಣ ಇಲಾಖೆ ಕ್ರಮಕೈಗೊಂಡಿಲ್ಲ. ಇದರಿಂದ ಶಿಕ್ಷಣ ಸಂಸ್ಥೆಗಳಿಗೆ ಹೊಡೆತ ಬೀಳ್ತಿದೆ. ಸರ್ಕಾರ ಈ ರೀತಿಯ ಕ್ರಮವನ್ನು ಕೇವಲ‌ ಕಣ್ಣೊರೆಸುವ ತಂತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಟೀಕೆಗೆ ಗುರಿಯಾಗಿರೋ ಶಿಕ್ಷಣ ಇಲಾಖೆ ಈಗ ಟ್ಯೂಶನ್ ನಿಯಂತ್ರಣಕ್ಕೆ ಮುಂದಾಗಿದ್ದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ : BBMP Target teachers : ಶಿಕ್ಷಕರಿಗೆ ಬಿಬಿಎಂಪಿ ಶಾಕ್ : ರಿಸಲ್ಟ್ ಹೆಚ್ಚಿಸದಿದ್ದರೇ ಕೆಲಸಕ್ಕೆ ಬೀಳಲಿದೆ ಕತ್ತರಿ

No home to home tuition education Department orders tuition center Registration Compulsory

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular