ಭಾನುವಾರ, ಏಪ್ರಿಲ್ 27, 2025
Homeeducationಶಾಲೆಗಳ ಸುತ್ತಮುತ್ತ ಬಲೂನ್‌, ಐಸ್‌ ಕ್ರೀಂ, ಚಾಟ್ಸ್‌ ಮಾರಾಟ ನಿಷೇಧ : ಜಾರಿಯಾಯ್ತು ಹೊಸ ರೂಲ್ಸ್‌

ಶಾಲೆಗಳ ಸುತ್ತಮುತ್ತ ಬಲೂನ್‌, ಐಸ್‌ ಕ್ರೀಂ, ಚಾಟ್ಸ್‌ ಮಾರಾಟ ನಿಷೇಧ : ಜಾರಿಯಾಯ್ತು ಹೊಸ ರೂಲ್ಸ್‌

- Advertisement -

ಲಕ್ನೋ : (No Ice Creams Fast Food sale Outside Schools) ಶಾಲೆಗಳ ಮುಂಭಾಗದಲ್ಲಿ ಸಾಮಾನ್ಯವಾಗಿ ಅಂಗಡಿ, ಮುಂಗಟ್ಟುಗಳು ಇರುವುದು ಸರ್ವೇ ಸಾಮಾನ್ಯ. ಶಾಲೆ ಬಿಟ್ಟ ತಕ್ಷಣ ಮಕ್ಕಳು ತಮಗೆ ಬೇಕಾದ ತಿಂಡಿ, ವಸ್ತುಗಳನ್ನು ಖರೀದಿಸಲು ಅಂಗಡಿಗಳ ಮುಂದೆ ಹಾಜರಾಗುತ್ತಿದ್ದಾರೆ. ಆದ್ರೆ ಇನ್ಮುಂದೆ ಶಾಲೆಗಳ ಮುಂದೆ ಬಲೂನ್‌, ಐಸ್‌ಕ್ರೀಂ, ಫಾಸ್ಟ್‌ಪುಡ್‌ ಮಾರಾಟ ಮಾಡುವಂತಿಲ್ಲ. ಅಷ್ಟೇ ಯಾಕೆ ಪೋಷಕರು ತಮ್ಮ ವಾಹನಗಳನ್ನು ಶಾಲೆಗಳ ಬಳಿಕೆ ತರುವಂತಿಲ್ಲ. ಹೀಗಂತ ಸರಕಾರ (Lucknow) ಆದೇಶ ಹೊರಡಿಸಿದ್ದು, ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿದೆ.

ಲಕ್ನೋ ನಗರದಲ್ಲಿ ಸಂಚಾರ ನಿಯಂತ್ರಣ ಮಾಡುವುದು ಪೊಲೀಸರಿಗೆ ದುಸ್ಸಾಹಸವಾಗಿತ್ತು. ಅದ್ರಲ್ಲೂ ಶಾಲೆ ಬಿಡುವಿನ ವೇಳೆಯಲ್ಲಿ ಟ್ರಾಫಿಕ್‌ ಜಾಮ್‌ ಜಾಸ್ತಿಯಾಗಿರುತ್ತೆ. ಇದೇ ಕಾರಣಕ್ಕೆ ಲಕ್ನೋ ಜಿಲ್ಲಾಡಳಿತ ಹಾಗೂ ಪೊಲೀಸ್‌ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರದಲ್ಲಿ ಹೊಸ ರೂಲ್ಸ್‌ ಜಾರಿ ಮಾಡಲಾಗಿದೆ.

ಮಾರ್ಗಸೂಚಿಗಳ ಪ್ರಕಾರ, ಶಾಲಾ ಸಮಯದ ನಂತರ ಐಸ್ ಕ್ರೀಮ್, ಚಾಟ್, ಬಲೂನ್ ಮತ್ತು ಇತರ ವಸ್ತುಗಳನ್ನು ಮಾರಾಟಗಾರರಿಂದಲೇ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದಾಗಿ ಶಾಲೆಯ ಸುತ್ತಲೂ ಯಾವುದೇ ಅಂಗಡಿಗಳನ್ನು ತೆರೆಯಲು ಅನುಮತಿ ನೀಡದಂತೆ ಸೂಚಿಸಲಾಗಿದೆ. ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ರಸ್ತೆಯಲ್ಲಿ ತಿರುಗಾಡುವ ಬದಲು ನೇರವಾಗಿ ತಮ್ಮ ಶಾಲಾ ಕ್ಯಾಬ್ ಅಥವಾ ಬಸ್‌ನಲ್ಲಿ ಕುಳಿತುಕೊಳ್ಳಬೇಕು.

ಶಾಲೆಗಳಿಗೆ ಮಕ್ಕಳನ್ನು ಕರೆತರಲು ಬರುವ ಪೋಷಕರು ಶಾಲೆಯಿಂದ ಒಂದು ಕಿಲೋ ಮೀಟರ್‌ ದೂರದಲ್ಲಿ ತಮ್ಮ ವಾಹಗಳನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಶಾಲೆ ಬಿಟ್ಟ ನಂತರದಲ್ಲಿ ಮಕ್ಕಳನ್ನು ಶಾಲೆಯ ಗೇಟ್‌ನಿಂದ ಅತ್ಯಂತ ಶೀಘ್ರದಲ್ಲಿಯೇ ಮಕ್ಕಳನ್ನು ಕರೆದೊಯ್ಯಬೇಕು. ಅಲ್ಲದೇ ಶಾಲೆಯ ಮುಂಭಾಗದಲ್ಲಿ ಸಂಚಾರಕ್ಕೆ ತೊಡಕು ಆಗದಂತೆ ಎಚ್ಚರವಹಿಸಬೇಕು. ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಯಾವುದೇ ವಾಹನ ನಿಲುಗಡೆ ಮಾಡುವಂತಿಲ್ಲ. ಪೋಷಕರು-ಶಿಕ್ಷಕರ ಸಭೆಯ ಸಮಯದಲ್ಲಿ ಮಾರ್ಗಸೂಚಿಗಳ ಬಗ್ಗೆ ಶಾಲೆಗಳು ಪೋಷಕರಿಗೆ ತಿಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Case On Pune Teachers: ವಿದ್ಯಾರ್ಥಿಗಳನ್ನು ಥಳಿಸಿದ ಮೂವರು ಖಾಸಗಿ ಶಾಲಾ ಶಿಕ್ಷಕರ ಮೇಲೆ ಪ್ರಕರಣ ದಾಖಲು

ಇದನ್ನೂ ಓದಿ : 1ನೇ ತರಗತಿ ದಾಖಲಾತಿಗೆ ವಯೋಮಿತಿ ಹೆಚ್ಚಳ : ರಾಜ್ಯ ಸರಕಾರದ ಆದೇಶದಲ್ಲೇನಿದೆ ?

No Ice Creams Fast Food sale Outside Schools in Lucknow Guidelines Released

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular