Amit Shah visit : ರಾಜ್ಯದಲ್ಲಿ ಸಿಎಂ ಬದಲಾವಣೆ ಫಿಕ್ಸ್ : ಅಮಿತ್ ಶಾ ರಾಜ್ಯ ಭೇಟಿಗೆ ಇದೇ ಕಾರಣನಾ ?

ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ನಡೆಸುತ್ತಿದ್ದರೂ ಅದರ ಪಾಲಿಗೆ ಈ ಅಧಿಕಾರ‌ ಮುಳ್ಳಿನ ಮೇಲಿನ‌ ನಡಿಗೆಯಂತಿದೆ.‌ ಒಂದೆಡೆ ವಿಪಕ್ಷಗಳ ವಾಗ್ದಾಳಿ, ಟಾರ್ಗೆಟ್ ತಲೆಬಿಸಿ ಆದ್ರೇ ಇನ್ನೊಂದೆಡೆ ಸಾಲು ಸಾಲು ಹತ್ಯೆಗಳು , ಕೋಮುಸಂಘರ್ಷ ಸವಾಲಾಗಿದೆ.‌ ಇದೆಲ್ಲದರ‌ ಮಧ್ಯೆ ರಾಜ್ಯದಲ್ಲಿ ಅಧಿಕಾರದಲ್ಲಿರೋ ಬಿಜೆಪಿ ಹಾಗೂ ಬಿಜೆಪಿಯ ಮಾತೃಸಂಸ್ಥೆ ಎನ್ನಿಸಿಕೊಂಡಿರೋ ಆರ್ ಎಸ್ ಎಸ್ ನಡುವೆ ಅಸಮಧಾನ ಭುಗಿಲೆದ್ದಿದೆ. ಈ ಅಸಮಧಾನವನ್ನು ತಣ್ಣಗಾಗಿಸಲೇ ಈಗ ಬಿಜೆಪಿ ಹೈಕಮಾಂಡ್ ಹಾಗೂ ಕೇಂದ್ರ ಸಚಿವ ಅಮಿತ್ ಶಾ ರಾಜ್ಯಕ್ಕೆ (Amit Shah visit) ಭೇಟಿ ನೀಡುತ್ತಿದ್ದಾರೆ.

ಹೌದು ಮೇಲ್ನೋಟಕ್ಕೆ ಆರ್‌ಎಸ್ಎಸ್ ಮತ್ತು ಬಿಜೆಪಿ ಎರಡೂ ಬೇರೆ ಬೇರೆ ವ್ಯವಸ್ಥೆ ಹಾಗೂ ಸಂಸ್ಥೆ ರಾಜಕೀಯ ಪಕ್ಷದಂತೆ ಕಂಡರೂ ಆಂತರಿಕವಾಗಿ ಬಿಜೆಪಿಯ ಅಂತಃಶಕ್ತಿ ಆರ್ ಎಸ್ ಎಸ್ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ರಾಜ್ಯದಲ್ಲಿ ನಡೆದ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆಗಳಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಹತ್ಯೆಯ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡ ರೀತಿ, ತನಿಖೆಯ ವಿಧಾನ, ಪರಿಹಾರದ ಮೊತ್ತ ಹಾಗೂ ಘಟನೆಗಳನ್ನು ತಡೆಯುವಲ್ಲಿ ಆದ ವೈಫಲ್ಯತೆ ಆರ್ ಎಸ್ ಎಸ್ ಗೆ ಸರ್ಕಾರದ ಮೇಲೆ ಅಸಮಧಾನ ಮೂಡಿಸಿದೆ.

ಬಿಜೆಪಿಯ ಆಸ್ತಿಯೇ ಕಾರ್ಯಕರ್ತರು ಅಂತಹ ಕಾರ್ಯಕರ್ತರಿಗೆ ಸರ್ಕಾರ ನ್ಯಾಯ ಒದಗಿಸಿಲ್ಲ. ಅದರಲ್ಲೂ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಿಎಂ ಬೊಮ್ಮಾಯಿ ಮೇಲೆ ಆರ್ ಎಸ್ ಎಸ್ ತೀವ್ರ ಅಸಮಧಾನ ವ್ಯಕ್ತಪಡಿಸಿದೆ. ಚುನಾವಣೆ ಹೊತ್ತಿ ನಲ್ಲಿ ಸರ್ಕಾರದ ಈ ವೈಫಲ್ಯತೆ ಮುಂದಿನ ಚುನಾವಣೆಯ ಮೇಲೆ ಗಾಢ ಬೀರಲಿದೆ. ಕಾರ್ಯಕರ್ತರಿಗೆ ರಕ್ಷಣೆ ನೀಡಲು ಸರ್ಕಾರ ವಿಫಲವಾಗಿದೆ ಎಂಬ ಆರೋಪದಿಂದ ಮತಗಳು ಒಡೆದು ಹೋಗುತ್ತವೆ ಎಂದು ಆರ್ ಎಸ್ ಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ ಎನ್ನಲಾಗಿದೆ. ರಾಜ್ಯದಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿ ನಡುವೆ ಮೂಡಿರುವ ಈ ವೈಮನಸ್ಸು ಕೇಂದ್ರ ನಾಯಕರನ್ನು ಚಿಂತೆಗೀಡು ಮಾಡಿದೆ. ಅದರಲ್ಲೂ ಆರ್ ಎಸ್ ಎಸ್ ನಾಯಕರು ಪಕ್ಷವನ್ನು ಅಧಿಕಾರಕ್ಕೆ ತರಲು ತುರ್ತಾಗಿ ರಾಜ್ಯದಲ್ಲಿ ಸಿಎಂ ಬದಲಾವಣೆ ಯಾಗಬೇಕೆಂಬ ಪಟ್ಟು ಹಿಡಿದಿದ್ದಾರಂತೆ.

ಇನ್ನು ಕೇಂದ್ರ ನಾಯಕರು ರಾಜ್ಯದ ಈ ಬೆಳವಣಿಗೆಗಳಿಂದ ಆತಂಕಿತರಾಗಿದ್ದು ಈಗಾಗಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಿಂದ ವಿವರಣೆ ಪಡೆದಿದ್ದಾರೆ. ಎಲ್ಲ ಮಾಹಿತಿ ಪಡೆದ ಹೈಕಮಾಂಡ್ ಪರವಾಗಿ ಅಮಿತ್ ಶಾ ರಾಜ್ಯಕ್ಕೆ ಬರ್ತಿದ್ದು, ಬೆಂಗಳೂರಿನಲ್ಲಿ ನಡೆಯೋ ಸಭೆಯಲ್ಲಿ ಅಮಿತ್ ಶಾ ಆರ್ ಎಸ್ ಎಸ್ ನಾಯಕರು ಹಾಗೂ ಬಿಜೆಪಿ ನಾಯಕರು, ಸಿಎಂ ನಡುವೆ ಒಮ್ಮತ ಮೂಡಿಸುವ ಸರ್ಕಸ್ ನಡೆಸಲಿದ್ದಾರಂತೆ. ಮಾತ್ರವಲ್ಲ ಒಂದೊಮ್ಮೆ ಆರ್ ಎಸ್ ಎಸ್ ಮನವೊಲಿಸಲು ವಿಫಲವಾದಲ್ಲಿ ಹೈಕಮಾಂಡ್ ಸಿಎಂ ಬದಲಾವಣೆ ಗೆ ಒಪ್ಪಿಕೊಂಡರು ಅಚ್ಚರಿ ಏನಿಲ್ಲ ಎಂದು ವ್ಯಾಖ್ಯಾನಿಸಲಾಗ್ತಿದೆ.

ಇದನ್ನೂ ಓದಿ : siddaramaiah birthday rally :ಬೆಣ್ಣೆ ನಗರಿಯಲ್ಲಿ ಸಿದ್ದರಾಮೋತ್ಸವಕ್ಕೆ ಕ್ಷಣಗಣನೆ : ಭಾರಿ ಸಮಾರಂಭದ ಹಿಂದೆ ನೂರೆಂಟು ರಾಜಕೀಯ ಲೆಕ್ಕಾಚಾರ

ಇದನ್ನೂ ಓದಿ : Amit Shah will arrive in Bangalore : ಅತ್ತ ಸಿದ್ದರಾಮೋತ್ಸವ.. ಇತ್ತ ಅಮಿತ್​ ಶಾ ಬೆಂಗಳೂರಿಗೆ ಆಗಮನ : ಏನಿದು ರಾಜಕೀಯ ತಂತ್ರ

CM change fix, Is this the reason for Amit Shah visit to the Karnataka ?

Comments are closed.