NP based syllabus: 3 ರಿಂದ 6ನೇ ತರಗತಿಯ ಎನ್‌ ಪಿ ಆಧಾರಿತ ಪಠ್ಯಕ್ರಮ ಬಿಡುಗಡೆ

ಬೆಂಗಳೂರು : (NP based syllabus) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ರೂಪಿಸಿರುವ ಬುನಾದಿ ಹಂತದ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ಬಿಡುಗಡೆ ಮಾಡಿದರು. 3 ರಿಂದ 8 ವರ್ಷದ ಮಕ್ಕಳ ಶಿಕ್ಷಣಕ್ಕಾಗಿ ರಚಿತವಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಅಕ್ಟೋಬರ್‌- 2022 ರಲ್ಲಿ ಬಿಡುಗಡೆ ಮಾಡಲಾಗಿತ್ತು.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಧಾರದ ಮೇಲೆ ಕರ್ನಾಟಕ ರಾಜ್ಯದ ಸನ್ನಿವೇಶಕ್ಕೆ ತಕ್ಕಂತೆ ಬುನಾದಿ ಹಂತದ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗಳ ಉಪಯೋಗಕ್ಕಾಗಿ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ಸಿದ್ದಪಡಿಸಲಾಗಿದೆ. ಎನ್‌ಪಿ-2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2022 ರ ಆಧಾರದ ಮೇಲೆ 3 ರಿಂದ 8 ವರ್ಷದ ವಯೋಮಾನದ ಮಕ್ಕಳ ಶಿಕ್ಷಣಕ್ಕಾಗಿ ಬುನಾದಿ ಹಂತದ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ರಚನೆ ಮಾಡಿದ ಮದೊಲ ರಾಜ್ಯ ಕರ್ನಾಟಕವಾಗಿದೆ.

ಪ್ರಸ್ತುತ ರಾಜ್ಯದ ಅಂಗನವಾಡಿಗಳಲ್ಲಿ ಅನುಷ್ಠಾನದಲ್ಲಿರುವ ಚಿಲಿಪಿಲಿ ಹಾಗೂ ಪ್ರಾಥಮಿಕ ಶಾಲೆಗಳ ನಲಿ-ಕಲಿ ಪದ್ದತಿಯ ಪಠ್ಯಕ್ರಮದಲ್ಲಿ ಮಾರ್ಪಾಡುಗಳನ್ನು ರಾಜ್ಯ ಪಠ್ಯಕ್ರಮ ಚೌಕಟ್ಟು ಪ್ರಸ್ತಾಪಿಸುತ್ತಿದೆ. ತನ್ಮೂಲಕ ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಬುನಾದಿ ಹಂತದ 3 ರಿಂದ 8 ವರ್ಷ ವಯೋಮಾನದ ಮಕ್ಕಳ ಶಿಕ್ಷಣದಲ್ಲಿ ಕೈಗೊಳ್ಳಬೇಕಾದ ಬದಲಾವಣೆಗಳನ್ನು ಪ್ರಸ್ತಾವಿಸುತ್ತದೆ ಹಾಗೂ ಸಲಹೆ ನೀಡಲ್ಪಟ್ಟ ಮಾರ್ಪಾಡುಗಳಿಗೆ ಕಾರಣಗಳನ್ನು ವಿಷಾದೀಕರಿಸುತ್ತದೆ. ಪ್ರಸ್ತಾಪಿಸಲ್ಪಟ್ಟ ಬದಲಾವಣೆಗಳು ವ್ಯವಸ್ಥೆಯಲ್ಲಿನ ಸುಧಾರಣೆಗಳ ಜೊತೆ ಪೂರ್ವ ಬಾಲ್ಯ ವ್ಯವಸ್ಥೆ ಹಂತದ ಶಿಕ್ಷಣ ಗುಣಮಟ್ಟದ ಪರಿಣಾಮಕಾರಿ ಅಭಿವೃದ್ದಿಯ ಅಂಶವನ್ನೂ ಒಳಗೊಂಡಿದೆ.

ಶಾಲಾ ಶಿಕ್ಷಣದ ನೂತನ ಬುನಾದಿ ಹಂತದ ಪರಿಕಲ್ಪನೆ ಮತ್ತು ಉದ್ದೇಶಗಳು, ಪಠ್ಯಕ್ರಮ ಸಮನ್ವಯ, ಮೇಲ್ಮುಖ ನಿರಂತರತೆ ಮತ್ತು ಬೆಳವಣಿಗೆ ಹಂತದ ಎರಡು ಉಪ ಹಂತಗಳಾದ ಅಂದರೆ 3 ರಿಂದ 6 ವರ್ಷ ಹಾಗೂ 6 ರಿಂದ 8 ವರ್ಷಗಳ ನಡುವೆ ತಡೆಯಿಲ್ಲದ ಚಲನೆ ಇವುಗಳಿಗೆ ಸಂಬಂಧಿಸಿದ ರಚನಾತ್ಮಕ ಮಾರ್ಪಾಡಿನ ಅಗತ್ಯತೆ, ತಾರ್ಕಿಕ ಆಧಾರ ಮತ್ತು ಪ್ರಾಮುಖ್ಯತೆ, ಬುನಾದಿ ಹಂತಕ್ಕೆ ಸಂಬಂಧಿಸಿದಂತೆ ವಯೋಮಾನದ, ಬೆಳವಣಿಗೆಗೆ ಸಮರ್ಪಕವಾದ ಪಠ್ಯ ವಿಷಯ, ಸಂರಚನೆ ಮತ್ತು ಉದ್ದೇಶಗಳು ಹಾಗೂ ಫಲಿತಾಂಶ ಕೇಂದ್ರಿತ ಪಠ್ಯಕ್ರಮ.

ಇದನ್ನೂ ಓದಿ : Mutual transfer of school teachers: ಅನುದಾನಿತ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆಗೆ ಅರ್ಜಿ ಆಹ್ವಾನ

ಇದನ್ನೂ ಓದಿ : MCC NEET PG 2023 Counselling : 50% ಅಖಿಲ ಭಾರತ ಕೋಟಾ ಪ್ರವೇಶಗಳ ಅವಲೋಕನ

ಈ ಪಠ್ಯಕ್ರಮ ಚೌಕಟ್ಟು ದಾಖಲೆಯು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಿದೆ. ರಾಜ್ಯದಲ್ಲಿ ಪೂರ್ವಬಾಲ್ಯ ಶಿಕ್ಷಣ ಮತ್ತು ಆರೈಕೆ ವ್ಯವಸ್ಥೆಯನ್ನು ಸುಧಾರಿಸಲು ರಚಿತವಾದ ಆರು ತಂಡಗಳ ಪೈಕಿ ಒಂದು ತಂಡದ ವರದಿ ಇದಾಗಿರುತ್ತದೆ. ಇತರೆ ತಂಡಗಳ ವರದಿಯನ್ನು ಸದ್ಯದಲ್ಲಿ ಬಿಡುಗಡೆ ಮಾಡಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ವಿಧಾನಸೌಧ ಎದುರು ಕೆಂಪೇಗೌಡ, ಬಸವಣ್ಣ ಪ್ರತಿಮೆ ಇಂದು ಅನಾವರಣ

NP based syllabus: Release of NP based syllabus for class 3rd to 6th

Comments are closed.