ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ಮುಂದೆ ಶಾಲಾ ಶಿಕ್ಷಣ ಇಲಾಖೆ

ಬೆಂಗಳೂರು: (Public Education Department Designation Change) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಬರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಎಲ್ಲಾ ಕಚೇರಿಗಳು ಹಾಗೂ ಶಾಲೆಗಳ ಹಂತದಲ್ಲಿ ಪದನಾಮವನ್ನು ಬದಲಾಯಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ರಾಜ್ಯ ಸರಕಾರದ ನಿಯಮಗಳ ಪ್ರಕಾರ ಶಿಕ್ಷಣ ಇಲಾಖೆ ಎಂಬ ಶೀರ್ಷಿಕೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಶೀರ್ಷಿಕೆ ತಿದ್ದುಪಡಿ ಮಾಡಿ ಆದೇಶ ನೀಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಕಛೇರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ, ಕ್ಲಸ್ಟರ್‌ ಶಾಲೆಗಳು ಮತ್ತು ಕಛೇರಿಗಳ ನಾಮಫಲಕಗಳನ್ನು “ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ” ಎಂಬ ನೂತನ ಪದನಾಮಕ್ಕೆ ಸರಿಹೊಂದುವಂತೆ ಬದಲಾಯಿಸಲು ಸರಕಾರ ನಿರ್ಣಯಿಸಿದೆ.

ಈ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಕಛೇರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ, ಕ್ಲಸ್ಟರ್‌ ಶಾಲೆಗಳು ಮತ್ತು ಕಛೇರಿಗಳ ನಾಮಫಲಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮರು ಪದನಾಮೀಕರಣಗೊಳಿಸಿ ಆದೇಶಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಎಂದು ಈವರೆಗೆ ಕರಯಲ್ಪಡುವ ಇಲಾಖೆಯನ್ನು ʻಶಾಲಾ ಶಿಕ್ಷಣ ಇಲಾಖೆʼ ಎಂದು ಪದನಾಮೀಕರಿಸಿದೆ. ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಹುದ್ದೆಯನ್ನು, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಎಂದು ಪದನಾಮೀಕರಿಸಿದೆ.

ಇದೇ ರೀತಿಯಾಗಿ ಇಲಾಖೆಯ ಅಪರ ಆಯುಕ್ತಾಲಯ, ಕಲಬುರಗಿ ಮತ್ತು ಧಾರವಾಡ, ಇಲಾಖೆಯ ಎಲ್ಲಾ ನಿರ್ದೇಶನಾಲಯಗಳು ಹಾಗೂ ಅವುಗಳಡಿಯಲ್ಲಿ ಬರುವ ಎಲ್ಲಾ ಜಿಲ್ಲಾ ಮತ್ತು ತಾಲೂಕು/ ಬ್ಲಾಕ್‌ ಕಛೇರಿಗಳು, ವಿಭಾಗ ಹಂತದ ಕಛೇರಿಗಳು, ಜಿಲ್ಲಾ ಹಂತದ ಉಪನಿರ್ದೇಶಕರು ಹಾಗೂ ಡಯಟ್‌ ಪ್ರಾಂಶುಪಾಲರ ಕಛೇರಿ, ಬ್ಲಾಕ್‌ ಹಂತದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ ಹಾಗೂ ಕ್ಲಸ್ಟರ್‌ ಹಂತದ ಕಛೇರಿಗಳಲ್ಲಿ ಶಾಲಾ ಶಿಕ್ಷಣ ಎಂದು ಪದನಾಮೀಕರಿಸಲಾಗಿದೆ.

ರಾಜ್ಯ ಯೋಜನೆಯ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಹುದ್ದೆಯನ್ನು ರಾಜ್ಯ ಯೋಜನಾ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ಎಂದು ಪದನಾಮೀಕರಿಸಿದೆ. ಹಾಗೂ ರಾಜ್ಯ ಯೋಜನಾ ನಿರ್ದೇಶಕರ ಕಛೇರಿ ಹಾಗೂ ಅದರಡಿಯಲ್ಲಿ ಬರುವ ಎಲ್ಲಾ ಕಛೇರಿಗಳಲ್ಲಿ ಶಾಲಾ ಶಿಕ್ಷಣ ಇಲಾಖೆ ಎಂದು ಪದನಾಮೀಕರಿಸಿದೆ.

ಇದನ್ನೂ ಓದಿ : SSlC Exams- Free travel: ವಿದ್ಯಾರ್ಥಿಗಳಿಗೆ ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣ

ಇನ್ನೂ ಎಲ್ಲಾ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಶಾಲಾ ಶಿಕ್ಷಣ ಎಂದು ಪದನಾಮೀಕರಿಸಿದೆ. ಶಾಲಾ ಶಿಕ್ಷಣ ಎಂದು ನೂತನವಾಗಿ ಪದನಾಮೀಕರಿಸಿದ ಪದನಾಮವನ್ನು ಸಂಬಂಧಿಸಿದ ಎಲ್ಲಾ ಕಛೇರಿ, ಶಾಲೆಗಳ ಎಲ್ಲಾ ನಾಮಫಲಕಗಳಲ್ಲಿ ಬರೆಸಲು ಕ್ರಮಕೈಗೊಳ್ಳುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Public Education Department Designation Change: Public Education Department is henceforth School Education Department

Comments are closed.