ಬೆಂಗಳೂರು : ರಾಜ್ಯದಲ್ಲಿ ಪದವಿ ಪೂರ್ವ ಕಾಲೇಜುಗಳ ಆರಂಭದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಯಾವಾಗ ಕಾಲೇಜು ಆರಂಭವಾಗುತ್ತೋ ಅನ್ನೋ ಆತಂಕ ವಿದ್ಯಾರ್ಥಿಗಳು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ.

2020-21ನೇ ಸಾಲಿನ ಶೈಕ್ಷಣಿಕ ವರ್ಷ ಸದ್ಯಕ್ಕೆ ಆರಂಭವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಯಾಕೆಂದ್ರೆ ಶಿಕ್ಷಣ ಇಲಾಖೆ ಲಾಕ್ ಡೌನ್ ಆದೇಶ ಮುಗಿಯುವವರೆಗೂ ಕಾಲೇಜುಗಳನ್ನು ಆರಂಭಿಸುವುದೇ ಇಲ್ಲಾ ಎಂದು ಹೇಳಿದೆ. ಅಲ್ಲದೇ ಲಾಕ್ ಡೌನ್ ಮುಗಿದ ನಂತರವೇ ಕಾಲೇಜುಗಳನ್ನು ತೆರೆಯಲಾಗುವುದು ಎಂದಿದೆ.

ಸದ್ಯಕ್ಕೆ ಮೇ 31ರ ವರೆಗೆ ಲಾಕ್ ಡೌನ್ ಆದೇಶವಿದ್ದು, ಶಾಲಾ, ಕಾಲೇಜು, ಕೋಚಿಂಗ್ ಸೆಂಟರ್ ಸೇರಿದಂತೆ ಶೈಕ್ಷಣಿಣ ಸಂಸ್ಥೆಗಳನ್ನು ತೆರೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ ಸರಕಾರದ ಮುಂದಿನ ಆದೇಶದ ವರೆಗೂ ಕಾಲೇಜುಗಳನ್ನು ತೆರೆಯುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.