ಭಾನುವಾರ, ಏಪ್ರಿಲ್ 27, 2025
HomeeducationTeachers Singapore Tour Offers : 100% ಫಲಿತಾಂಶ ಕೊಟ್ರೆ, ಸಿಂಗಾಪುರ ಟೂರ್ : ಶಿಕ್ಷಕರಿಗೆ...

Teachers Singapore Tour Offers : 100% ಫಲಿತಾಂಶ ಕೊಟ್ರೆ, ಸಿಂಗಾಪುರ ಟೂರ್ : ಶಿಕ್ಷಕರಿಗೆ ಬಿಗ್ ಆಫರ್

- Advertisement -

ಬೆಂಗಳೂರು : ಮೊನ್ನೆ ಮೊನ್ನೆಯಷ್ಟೇ ಶಾಲೆಗಳ ಹಾಜರಾತಿ ಹಾಗೂ ಶಿಕ್ಷಕರ ಬೋಧನೆಯ ಗುಣಮಟ್ಟ ಹೆಚ್ಚಿಸಲು ಫಲಿತಾಂಶದ ಟಾರ್ಗೆಟ್ ನೀಡಿ ಸದ್ದು ಮಾಡಿದ್ದ ಬಿಬಿಎಂಪಿ ಈಗ ಶಾಲಾ ಫಲಿತಾಂಶದ ಗುಣಮಟ್ಟ ಕಾಪಾಡಿಕೊಳ್ಳಲು ಕೊನೆಯ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಹೌದು ಬಿಬಿಎಂಪಿ ಶಾಲೆಗಳಲ್ಲಿ ಪ್ರತಿ ಬಾರಿ ಕೂಡಾ ಫಲಿತಾಂಶದಲ್ಲಿ ಹಿಂದೆ ಉಳಿಯುತ್ತಿದೆ. ಹೀಗಾಗಿ ‌ಶಾಲೆಗಳಲ್ಲಿ ಉತ್ತಮ ಶಿಕ್ಷಣದ ಗುಣಮಟ್ಟ ಕಾಪಾಡಲು ಬಿಬಿಎಂಪಿ ಇದೀಗ ಕೊನೆಯ ಅಸ್ತ್ರವಾಗಿ ಶಿಕ್ಷಕರಿಗೆ ಭರ್ಜರಿ ಆಫರ್ ನೀಡ್ತಿದೆ. ಪ್ರಯೋಗ ಮಾಡಲು ಮುಂದಾಗಿದೆ. ಬಿಬಿಎಂಪಿ ಶಾಲೆಯ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಇದನ್ನು ಸರಿಪಡಿಸಿ ಶಿಕ್ಷಕರು ಬಿಬಿಎಂಪಿ ಶಾಲೆಗಳಲ್ಲಿ ನೂರರಷ್ಟು ಫಲಿತಾಂಶ ತಂದರೆ ಅಂತಹ ಶಿಕ್ಷಕರಿಗೆ ವಿದೇಶ ಪ್ರವಾಸಕ್ಕೆ (Teachers Singapore Tour Offers) ಕರೆದುಕೊಂಡು ಹೋಗುವ ಆಫರ್ ನೀಡಿದೆ ಬಿಬಿಎಂಪಿ.

ಮುಂದಿನ ಶೈಕ್ಷಣಿಕ ವರ್ಷದಿಂದ ಇಂತಹದೊಂದು ಆಫರ್ ನ್ನು ಶಿಕ್ಷಕರಿಗೆ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಯಾವ ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ಓದಿನ ಕಡೆ ತಿರುಗಿಸಿ ಶಾಲೆಯ ಫಲಿತಾಂಶವನ್ನು ನೂರಕ್ಕೆ ನೂರರಷ್ಟು ದಾಖಲಿಸುತ್ತಾರೋ ಅಂತಹ ಶಾಲೆಯ ಶಿಕ್ಷರಿಗೆ ಬಿಬಿಎಂಪಿ ತನ್ನ ಖರ್ಚಿನಲ್ಲಿ ಸಿಂಗಾಪುರ ಪ್ರವಾಸ‌ಮಾಡಿಸಲಿದೆ. ಈ ಯೋಜನೆ ಬೆಂಗಳೂರಿಗೆ ಇದೆ ಮೊದಲು. ಆದ್ರೆ ಬಳ್ಳಾರಿಯಲ್ಲಿ ಈ ಪ್ರಯೋಗವನ್ನು ಮಾಡಿ, ಒಳ್ಳೆ ರಿಸಲ್ಟ್ ಕೂಡಾ ಬಂದಿತ್ತು. ಇದೀಗ ಬಳ್ಳಾರಿಯ ಮಾದರಿಯಲ್ಲಿ ಬೆಂಗಳೂರಿನಲ್ಲೂ ಜಾರಿಯಾಗುವ ನೀರಿಕ್ಷೆ ಇದೆ.

ಬಳ್ಳಾರಿಯಲ್ಲಿ ಆಫರ್ ನೀಡಿದ್ದ ಬಳಿಕ ಬಳ್ಳಾಯಲ್ಲಿ 70 ರಿಂದ 80 ಶಾಲೆಗಳಲ್ಲಿ ಶೇ%100ರಷ್ಟು ಫಲಿತಾಂಶ ಬಂದಿತ್ತು. ಇದೀಗ ಇಲ್ಲಿ ಶಿಕ್ಷಕರಿಗೆ ಶೈಕ್ಷಣಿಕ ಪ್ರವಾಸದಂತಹ ಕೊಡುಗೆ ಗಳನ್ನು ನೀಡುವ ಯೋಜನೆಗೆ ಸಿದ್ಧವಾಗಿದೆ. CSR ಫಂಡ್‌ನ ಮೂಲಕ ಶಿಕ್ಷಕರಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಲು ತಯಾರಿ ಮಾಡಿಕೊಳ್ಳಲಾಗ್ತಿದೆ. ಶಾಲೆಗಳಲ್ಲಿ ಒಳ್ಳೆ ರಿಸಲ್ಟ್ ಕೊಡಬೇಕು ಅಂತ ಈ ರೀತಿ ಯೋಜನೆ ಮಾಡಲಾಗ್ತಿದೆ.ಈ‌ ಹಿಂದೆ ಬಳ್ಳಾರಿಯಲ್ಲಿ ಇದೇ ರೀತಿ ಒಳ್ಳೆ ರಿಸಲ್ಟ್ ಬಂದಿತ್ತು.ಆಗ ಅಲ್ಲಿ ಶಿಕ್ಷಕರನ್ನು ದೆಹಲಿಗೆ ಕರೆದುಕೊಂಡು ಹೋಗಲಾಗಿತ್ತು.
ಇದೀಗ ಇಲ್ಲಿ ಕೂಡಾ ಇದನ್ನೇ ಮಾಡುತ್ತೇವೆ ಎಂದು ಬಿಬಿಎಂಪಿ ಅಧಿಕಾರಿ ರಾಮ್ ಮನೋಹರ್ ಪ್ರಸಾತ್ ಮಾಹಿತಿ ನೀಡಿದ್ದಾರೆ.

ಕೇವಲ ಒಳ್ಳೆಯ ಆಫರ್ ಮಾತ್ರವಲ್ಲ ಶಿಕ್ಷಣದ ಗುಣಮಟ್ಟ ಕಾಪಾಡಲು ಹಾಗೂ ಶಿಕ್ಷಕರನ್ನು ಬೋಧನೆಗೆ ಪ್ರೇರೇಪಿಸುವ ನಿಟ್ಟಿನಲ್ಲಿ ತೀರಾ ಕಳಪೆ ಫಲಿತಾಂಶ ದಾಖಲಿಸುವ ಶಾಲೆಯ ಶಿಕ್ಷಕರ ಉದ್ಯೋಗಕ್ಕೆ ಕತ್ತರಿ ಹಾಕುವ ಎಚ್ಚರಿಕೆಯನ್ನು ಬಿಬಿಎಂಪಿ ಈಗಾಗಲೇ‌ ನೀಡಿದ್ದು, ಈಗ ಸಾಧನೆಗೆ ವಿದೇಶ ಪ್ರವಾಸದ ಪುರಸ್ಕಾರ ನೀಡುವುದಾಗಿಯೂ ಘೋಷಿಸಿದೆ.

ಇದನ್ನೂ ಓದಿ : SSLC Exam Revised Demand: ಎಸ್ಎಸ್ಎಲ್‌ ಸಿ ಪರೀಕ್ಷೆ ವೇಳಾಪಟ್ಟಿ ಮರು ಪರಿಷ್ಕರಿಸಿ : ಪ್ರೌಢಶಾಲಾ ಶಿಕ್ಷಕರ ಬೇಡಿಕೆ

ಇದನ್ನೂ ಓದಿ : B. C. Nagesh : ಶಾಲೆಗಳ ಹತ್ತು ನಿಮಿಷ ಧ್ಯಾನ : ಖ್ಯಾತ ಮನೋವೈದ್ಯ ಡಾ ಪಿ.ವಿ ಭಂಡಾರಿ ಆಕ್ಷೇಪ

School 100 percent Result Singapore Tour Big Offers for Teachers

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular