Congress candidate application: ಟಿಕೇಟ್ ಆಕಾಂಕ್ಷಿತರಿಗೆ ಡಿಕೆಶಿ ಶಾಕ್ : ಅಭ್ಯರ್ಥಿ ಅರ್ಜಿಗೆ 5 ಸಾವಿರ, ಶುಲ್ಕ 2 ಲಕ್ಷ ಕಡ್ಡಾಯ

ಬೆಂಗಳೂರು : ಒಳಜಗಳ, ಗುಂಪುಗಾರಿಕೆ ಹಾಗೂ ಟಿಕೇಟ್ ಆಕಾಂಕ್ಷಿತ ಹಾಲಿ ಮಾಜಿ ಶಾಸಕರುಗಳ ಮೇಲಾಟದ ನಡುವೆಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರ್ಜರಿ ಚುನಾವಣೆ ಸಿದ್ಧತೆ ನಡೆಸಿದ್ದಾರೆ. ಸ್ವಪಕ್ಷಿಯರು ಹಾಗೂ ಬಿಜೆಪಿ ಟೀಕೆಯ ನಡುವೆಯೂ ಡಿಕೆಶಿ ಈಗಾಗಲೇ ಘೋಷಿಸಿದಂತೆ ಶಾಸಕ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಟಿಕೇಟ್ ಬಯಸುವವರು 5 ಸಾವಿರ ರೂಪಾಯಿಯ ಅರ್ಜಿ ಶುಲ್ಕದ ಜೊತೆ 2 ಅಥವಾ 1 ಲಕ್ಷ ರೂಪಾಯಿ ಡಿಡಿ ಸಲ್ಲಿಸಲು ಸೂಚಿಸಿ ಅರ್ಜಿ ಫಾರ್ಮ್ (Congress candidate application ರಿಲೀಸ್ ಮಾಡಿದ್ದಾರೆ.

ಚುನಾವಣೆಯ ಪೂರ್ವಭಾವಿ ಎಂಬಂತೆ ಮೊನ್ನೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸಲು ಬಯಸುವ ಹಾಲಿ ಅಥವಾ‌ಮಾಜಿ ಶಾಸಕರು, ಟಿಕೇಟ್ ಆಕಾಂಕ್ಷಿಗಳು ಎಲ್ಲರೂ 5 ಸಾವಿರ ರೂಪಾಯಿ ನೀಡಿ ಅರ್ಜಿ ಪಡೆಯಬೇಕು ಎಂದಿದ್ದರು. ಮಾತ್ರವಲ್ಲ ಶಾಸಕ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಆಕಾಂಕ್ಷಿಗಳು ಪಕ್ಷದ ಹೆಸರಿನಲ್ಲಿ 2 ಲಕ್ಷ ರೂಪಾಯಿ, ಇತರ ಹಿಂದುಳಿದ ವರ್ಗದವರು 1 ಲಕ್ಷ ರೂಪಾಯಿ ಡಿಡಿ ಸಲ್ಲಿಸುವುದು ಕಡ್ಡಾಯ ಎಂದಿದ್ದರು.

ಈ ನಿಯಮವನ್ನು ಪಕ್ಷದ ಅಭಿವೃದ್ಧಿಗಾಗಿ ತಂದಿದ್ದೇನೆ ಎಂದಿದ್ದ ಡಿಕೆಶಿ, ಈ ಹಣದಿಂದ ಕೆಪಿಸಿಸಿ ಗೆ ಕಟ್ಟಡ ನಿರ್ಮಿಸಲಾಗುತ್ತದೆ. ಈ ನಿಯಮದಿಂದ ಯಾರಿಗೂ ವಿನಾಯ್ತಿ ಇಲ್ಲ. ನಾನು ಶಾಸಕ ಸ್ಥಾನಕ್ಕೆ ಅರ್ಜಿ ಸಲ್ಲಿಸುವುದಾದರೂ ನಾನು ಹಣ ಕಟ್ಟುತ್ತೇನೆ ಎಂದಿದ್ದರು. ಡಿಕೆಶಿ ಈ ನಿಯಮಕ್ಕೆ ಆಂತರಿಕವಾಗಿ ಕಾಂಗ್ರೆಸ್ ನಲ್ಲೂ ತೀವ್ರ ಆಕ್ಷೇಪ ವ್ಯಕ್ತ ವಾಗಿತ್ತು. ಮಾತ್ರವಲ್ಲ ಬಿಜೆಪಿ ಕೂಡ ಡಿಕೆಶಿಯ ಈ ನಿಯಮವನ್ನು ಬಹಿರಂಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದೆ. 2018 ಚುನಾವಣೆಯಲ್ಲಿ 50-100 ರೂಪಾಯಿಗಳನ್ನು ಡಿಕೆಶಿ ಬೇಡಿದ್ದರು. ಈಗ ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದರೂ ಡಿಕೆಶಿ ಅಬ್ಯರ್ಥಿಗಳಿಂದ ಹಣ ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದೆ.

ಆದರೆ ಈ ಟೀಕೆಗಳಿಗೆ ಡಿಕೆಶಿ ತಲೆಕೆಡಿಸಿಕೊಂಡಿಲ್ಲ. ಬದಲಾಗಿ ಎಲ್ಲ ಟೀಕೆಗಳ ನಡುವೆಯೂ ಡಿಕೆಶಿ ಅಧಿಕೃತವಾಗಿ ಸೂಚನಾ ಪತ್ರ ಹೊರಡಿಸಿದ್ದಾರೆ. ಅದರಲ್ಲಿ 2022 ರ ಚುನಾವಣೆಗೆ ಸ್ಪರ್ಧಿಸಲು ಬಯಸುವವರು 5 ಸಾವಿರ ಪಾವತಿಸಿ ಡಿಡಿ ಪಡೆದು ಬಳಿಕ ಸಾಮಾನ್ಯ ವರ್ಗದವರು 2 ಲಕ್ಷ ಹಾಗೂ ಇತರ ಹಿಂದುಳಿದವರು 1 ಲಕ್ಷ ರೂಪಾಯಿ ಯನ್ನು ಕೆಪಿಸಿಸಿ ಬಿಲ್ಡಿಂಗ್ ಫಂಡ್ ಹೆಸರಿನಲ್ಲಿ ಸಲ್ಲಿಸಲು ಸೂಚಿಸಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರಾಗಿ ಡಿಕೆಶಿ ವಿಭಿನ್ನ ಸರ್ಕಸ್ ನಡೆಸಿ ಪಕ್ಷ ಸಂಘಟನೆಗೆ ಮುಂದಾಗಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರೇ ಅಡ್ಡಗಾಲಾಗುವ ಎಲ್ಲ ಮುನ್ಸೂಚನೆ ಇದೆ.

ಇದನ್ನೂ ಓದಿ : Congress candidates list: 43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಯಾರೆಲ್ಲಾ ಕಣದಲ್ಲಿ..?

ಇದನ್ನೂ ಓದಿ : ಕರ್ನಾಟಕ ವಿಧಾನಸಭಾ ಚುನಾವಣೆ 2023: ಮಂಗಳೂರು ದಕ್ಷಿಣದಲ್ಲಿ ವೇದವಾಸ್ ಕಾಮತ್ V/S ಐವನ್ ಡಿಸೋಜಾ ಬಿಗ್ ಫೈಟ್ ಸಾಧ್ಯತೆ

DK Shivakumar Shock for Congress ticket aspirants 5 thousand for candidate application, fee 2 lakh is mandatory

Comments are closed.