ಬೆಂಗಳೂರು : ದಿನಕಳೆದಂತೆ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜುಲೈ 31ರ ವರೆಗೆ ಶಾಲೆಗಳಿಗೆ ರಜೆ ನೀಡಿದೆ. ಶೈಕ್ಷಣಿಕ ವರ್ಷದ ಆರಂಭದ ಕುರಿತು ಯಾವುದೇ ಖಚಿತೆಯಿಲ್ಲ. ಈ ನಡುವಲ್ಲೇ ಮಕ್ಕಳಿಗೆ ರಾಜ್ಯ ಸರಕಾರ ಸಿಹಿಸುದ್ದಿಯೊಂದನ್ನು ನೀಡಿದೆ.

ಸಾಮಾನ್ಯವಾಗಿ ವರ್ಷಂಪ್ರತಿ ಜೂನ್ ತಿಂಗಳಿನಲ್ಲಿಯೇ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು, ಮಕ್ಕಳಿಗೆ ಶಾಲೆಗಳಲ್ಲಿಯೇ ಪಠ್ಯ ಪುಸ್ತಕವನ್ನು ವಿತರಿಸಲಾಗುತ್ತಿತ್ತು. ಆದರೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಇನ್ನೂ ಎರಡು ತಿಂಗಳ ಕಾಲ ಶಾಲೆ ಪುನರಾರಂಭವಾಗುವುದು ಅನುಮಾನ. ಈ ಹಿನ್ನೆಲೆಯಲ್ಲಿ ಮಕ್ಕಳ ಮನೆ ಬಾಗಿಲಿಗೆ ರಾಜ್ಯ ಸರಕಾರ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲು ಮುಂದಾಗಿದೆ.

ಶಾಲೆಗಳು ಆರಂಭವಾಗುವವರೆಗೂ ಮನೆಯಲ್ಲಿಯೇ ಮಕ್ಕಳು ಓದಿಕೊಳ್ಳಲಿ ಅನ್ನೋದು ಸರಕಾರ ಉದ್ದೇಶ. ಖಾಸಗಿ ಶಾಲೆಗಳು ಪಠ್ಯ ಪುಸ್ತಕ ವಿತರಣೆಯ ಕುರಿತು ಈಗಾಗಲೇ ಹಣ ಪಾವತಿ ಮಾಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಪಠ್ಯ ಪುಸ್ತಕವನ್ನು ವಿತರಿಸಲಾಗುತ್ತದೆ. ಅಲ್ಲದೇ ಸರಕಾರಿ ಶಾಲೆಗಳ ಮಕ್ಕಳಿಗೂ ಕೂಡ ಮನೆ ಬಾಗಿಲಿಗೆ ಪಠ್ಯ ಪುಸ್ತಕ ವಿತರಣೆಯಾಗಲಿದೆ.