ಭಾನುವಾರ, ಏಪ್ರಿಲ್ 27, 2025
HomeeducationPUC Exams 2022 : ಏಪ್ರಿಲ್ 22 ರಿಂದ ದ್ವಿತೀಯ ಪಿಯು ಪರೀಕ್ಷೆ : ಹಿಜಾಬ್‌ಗೆ...

PUC Exams 2022 : ಏಪ್ರಿಲ್ 22 ರಿಂದ ದ್ವಿತೀಯ ಪಿಯು ಪರೀಕ್ಷೆ : ಹಿಜಾಬ್‌ಗೆ ಇಲ್ಲ ಅವಕಾಶ : ಸಚಿವ ಬಿ.ಸಿ.ನಾಗೇಶ್‌

- Advertisement -

ಬೆಂಗಳೂರು : ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಮುಕ್ತಾಯವಾದ ಬೆನ್ನಲ್ಲೇ ಇದೀಗ ದ್ವಿತೀಯ ಪಿಯುಸಿ ಪರೀಕ್ಷೆ (PUC Exams 2022 ) ಆರಂಭವಾಗಲಿದ್ದು ಏಪ್ರಿಲ್ 22 ರಿಂದ ಮೇ 18 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಂತೆ ಇದೀಗ ಹಿಜಾಬ್‌ ಧರಿಸಿ ಪರೀಕ್ಷೆ ಬಯಲು ಅವಕಾಶವನ್ನು ನಿರಾಕರಿಸಲಾಗಿದೆ.

ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದು, ಹೈಕೋರ್ಟ್ ನಿಯಮವನ್ನು ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಶಿಸ್ತಾಗಿ ಪಾಲಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಪರೀಕ್ಷಾ ಕೊಠಡಿಯೊಳಕ್ಕೆ ಹಿಜಾಬ್ ಧರಿಸಲು ಅವಕಾಶ ನೀಡಲ್ಲ. ಅಲ್ಲದೇ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ ಎಂದಿದ್ದಾರೆ.

SSLC ಮಾದರಿಯಲ್ಲೇ ದ್ವಿತೀಯ ಪಿಯು ಪರೀಕ್ಷೆ :

ಪರೀಕ್ಷೆಗೆ ನೋಂದಾಯಿಸಿಕೊಂಡಿರುವವರು ಸಂಖ್ಯೆ 6,84,255 ರಷ್ಟಿದ್ದು ಈ ಪೈಕಿ ರೆಗ್ಯುಲರ್ ವಿದ್ಯಾರ್ಥಿಗಳು 6,00,519 ಪುನರಾವರ್ತಿತ ವಿದ್ಯಾರ್ಥಿಗಳು 61808 ಖಾಸಗಿ ಅಭ್ಯರ್ಥಿಗಳು 21928 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದ್ವೀತಿಯ ಪಿಯುಸಿಯಲ್ಲಿ ಈ ವರ್ಷ 3,46,936, ಬಾಲಕರು ಹಾಗೂ 3,37,319 ಬಾಲಕಿಯರು ಪರೀಕ್ಷೆ ಎದುರಿಸಲಿದ್ದಾರೆ.

PUC Exams 2022 : ಸಂಯೋಜನೆವಾರು ವಿದ್ಯಾರ್ಥಿಗಳ ಸಂಖ್ಯೆ :

ಕಲಾ ವಿಭಾಗ : 2,28,167
ವಾಣಿಜ್ಯ ವಿಭಾಗ : 2,45,519
ವಿಜ್ಞಾನ ವಿಭಾಗ : 2,10,569

ಇನ್ನು ಒಟ್ಟು 1036 ಪರೀಕ್ಷಾ ಕೇಂದ್ರಗಳಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆ ಅತಿ ಹೆಚ್ಚು ಅಂದ್ರೇ 83 ಪರೀಕ್ಷಾ ಕೇಂದ್ರಗಳನ್ನು ಹೊಂದಿದೆ. ರಾಮನಗರ ಅತಿ ಕಡಿಮೆ ಅಂದ್ರೇ 13 ಪರೀಕ್ಷಾ ಕೇಂದ್ರ ಹೊಂದಿದೆ. ಇನ್ನು ದ್ವೀತಿಯ ಪಿಯು ಪರೀಕ್ಷೆ ವೇಳೆ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪಯಣಿಸಬಹುದು ಎಂದು ಕೆಎಸ್ಆರ್‌ಟಿಸಿ ಅನುಮತಿ ನೀಡಿದೆ. ರಾಜ್ಯದಲ್ಲಿ ಒಟ್ಟು 81 ಮೌಲ್ಯಮಾಪನ ಕೇಂದ್ರಗಳಿರಲಿದ್ದು ಎಲ್ಲಾ ಕೇಂದ್ರಗಳಲ್ಲಿ ಸಿಸಿ ಟಿವಿ ಇರಲಿವೆ.ಮೊಬೈಲ್‌ ನಿಷೇಧ ಮಾಡಲಾಗಿದೆ.ಎಸ್ ಒಪಿ ಈಗಿನದೇ ಅನ್ವಯವಾಗಲಿದೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಇರಲಿದೆ.ಹಳ್ಳಿಯಿಂದ ಬರುವ ಮಕ್ಕಳಿಗೆ ಕೆಎಸ್ ಆರ್ ಟಿಸಿ ಇರಲಿದ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.

ತುಮಕೂರು, ಹಾಸನ, ಬಳ್ಳಾರಿ ಜಿಲ್ಲೆಗಳಲ್ಲಿ ಹೊಸದಾಗಿ ಮೌಲ್ಯ ಮಾಪನ ಕೇಂದ್ರ ತೆರೆಯಲಾಗಿದೆ ಎಂದು ವಿವರಣೆ ನೀಡಿದ್ದಾರೆ. ನೈತಿಕ ಶಿಕ್ಷಣವನ್ನು ಮುಂದಿನ ವರ್ಷ ಪಠ್ಯಕ್ಕೆ ಸೇರಿಸುತ್ತೇವೆ. ನೈತಿಕ ಶಿಕ್ಷಣದಲ್ಲಿ ಪಂಚತಂತ್ರ, ರಾಮಾಯಣ,ಮಹಾಭಾರತ, ಭಗವದ್ಗೀತೆ ಎಲ್ಲವೂ ಒಂದು ಭಾಗವಾಗಬಹುದು. ಈ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ ತರುತ್ತೇವೆ. ಯಾವುದೇ ಧರ್ಮಕ್ಕೆ ಸೀಮಿತ ಮಾಡಲ್ಲಯಾವ ಧರ್ಮದಲ್ಲಿ ಒಳ್ಳೆಯದಿದೆ ಎಲ್ಲವನ್ನು ತಿಳಿಸ್ತೇವೆ.ಹೆಚ್ಚು ಯಾವ ಮಕ್ಕಳು ಬರ್ತಾರೆ ಅದನ್ನೇ ಹೆಚ್ಚಿನ ಪ್ರಮಾಣದಲ್ಲಿ ಇಡ್ತೇವೆ ಎಂದ ನಾಗೇಶ್ ಹೇಳಿದ್ದಾರೆ.

ಇದನ್ನೂ ಓದಿ : ವಿದ್ಯಾರ್ಥಿಗಳೇ! ಬೋರ್ಡ್‌ ಪರೀಕ್ಷೆ ಎದುರಿಸುವುದು ಹೇಗೆ ಗೊತ್ತೇ? ಈ ಟಿಪ್ಸ್‌ ಅನುಸರಿಸಿ ಹೆಚ್ಚಿನ ಅಂಕ ಗಳಿಸಿ

ಇದನ್ನೂ ಓದಿ :  ಇಂಜಿನಿಯರಿಂಗ್​ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

Second PUC Exams 2022 from April 22 Hijab Not Allowed : minister B.C. Nagesh

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular