Kajal Aggarwal : ಗಂಡು ಮಗುವಿಗೆ ಜನ್ಮ ನೀಡಿದ ನಟಿ ಕಾಜಲ್​ ಅರ್ಗವಾಲ್​​

Kajal Aggarwal : ನಟಿ ಕಾಜಲ್​ ಅಗರ್ವಾಲ್​​ ಗರ್ಭಿಣಿಯಾಗಿದ್ದಾರೆ ಎಂಬ ಸಾಕಷ್ಟು ಊಹಾಪೋಹಗಳ ಬಳಿಕ ನಟಿ ಕಾಜಲ್​ ತಾವು ಗರ್ಭಿಣಿಯಾಗಿರುವುದಾಗಿ ಜನವರಿ ತಿಂಗಳಲ್ಲಿ ಅಧಿಕೃತ ಘೋಷಣೆ ಮಾಡಿದ್ದರು. ಅಂದಿನಿಂದ ನಟಿ ಕಾಜಲ್​ ಅಗರ್​ವಾಲ್​ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಪ್ರೆಗ್ನೆನ್ಸಿಯ ಬಗ್ಗೆ ಮಾಹಿತಿ ನೀಡುತ್ತಲೇ ಇದ್ದಾರೆ. ಗರ್ಭಿಣಿ ಬಯಕೆಗಳು. ಗರ್ಭಿಣಿ ಆಹಾರ ಕ್ರಮ , ಗರ್ಭಿಣಿ ಮಾಡಬಹುದಾದ ಯೋಗಗಳು ಹೀಗೆ ಸಾಕಷ್ಟು ಮಾಹಿತಿಗಳನ್ನು ನಟಿ ಕಾಜಲ್​ ಹಂಚಿಕೊಂಡಿದ್ದಾರೆ.


ಇದೀಗ ನಟಿ ಕಾಜಲ್​ ಅರ್ಗವಾಲ್​ ಅಭಿಮಾನಿಗಳಿಗೆ ಮತ್ತೊಂದು ಶುಭ ಸುದ್ದಿಯನ್ನು ನೀಡಿದ್ದಾರೆ. ನಟಿ ಕಾಜಲ್​ ಹಾಗೂ ಅವರ ಪತಿ ಗೌತಮ್​ ಕಿಚ್ಲು ದಂಪತಿ ತಮ್ಮ ಮೊದಲ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಇವರಿಗೆ ಗಂಡು ಮಗು ಜನಿಸಿದೆ ಎನ್ನಲಾಗಿದ್ದು ಈ ಬಗ್ಗೆ ಕಾಜಲ್​ ಹಾಗೂ ಗೌತಮ್​ ಕಿಚ್ಲು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.


ಕೆಲ ದಿನಗಳ ಹಿಂದಷ್ಟೇ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ಕಾಜಲ್​ ಅರ್ಗವಾಲ್​ ತಾಯ್ತನದ ಬಗ್ಗೆ ಮಾತನಾಡಿದ್ದರು. ನಾನು ಹಾಗೂ ನನ್ನ ಪತಿ ಗೌತಮ್​ ಪೋಷಕ ಸ್ಥಾನಕ್ಕೆ ಬಡ್ತಿ ಪಡೆಯಲು ಉತ್ಸುಕರಾಗಿದ್ದೇವೆ. ಇದು ನಿಮಗೆ ವರ್ಣಿಸಲು ಸಾಧ್ಯವಾಗದ ಭಾವನೆಯಾಗಿದೆ ಎಂದು ಹೇಳಿದ್ದರು.


ನನಗೆ ಅತೀವ ಸಂತೋಷ ಹಾಗೂ ಆತಂಕ ಎರಡೂ ಒಟ್ಟಿಗೇ ಇದೆ. ಒಬ್ಬ ವ್ಯಕ್ತಿಯನ್ನು ಬೆಳೆಸುವಲ್ಲಿ ಮತ್ತು ಆ ಮಾನವನಲ್ಲಿ ಸರಿಯಾದ ರೀತಿಯ ಮೌಲ್ಯಗಳು ಮತ್ತು ಮಾದರಿಗಳನ್ನು ಬೆಳೆಸುವಲ್ಲಿ ಅಪಾರ ಪ್ರಮಾಣದ ಜವಾಬ್ದಾರಿ ಇದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಅದನ್ನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ನಾನು ಮತ್ತು ನನ್ನ ಪತಿ, ನಾವಿಬ್ಬರೂ ತುಂಬಾ ಉತ್ಸುಕರಾಗಿದ್ದೇವೆ ಎಂದು ಹೇಳಿಕೊಂಡಿದ್ದರು.

ಇದನ್ನು ಓದಿ : KGF 2 Box Office Collection : ದೇಶ-ವಿದೇಶಗಳಲ್ಲಿಯೂ ಜೋರಾಗಿದೆ ರಾಕಿ ಭಾಯ್​ ಹವಾ..!​ವಿದೇಶಗಳಲ್ಲಿಯೂ ಹೌಸ್​​ಫುಲ್​ ಪ್ರದರ್ಶನ

ಇದನ್ನೂ ಓದಿ : Naga Chaitanya: ಸಮಂತಾ ನಂತರ ನಾಗಚೈತನ್ಯ ರೆಡಿಯಾದರು ಎರಡನೇ ಮದುವೆಗೆ ? ಇದು 4ನೇ ಹುಡುಗಿ ಸಹವಾಸ!

Kajal Aggarwal And Her Hubby, Gautam Kitchlu Embrace Parenthood, Blessed With A Baby Boy

Comments are closed.