ಭಾನುವಾರ, ಏಪ್ರಿಲ್ 27, 2025
HomeeducationSSLC Exam Revised Demand: ಎಸ್ಎಸ್ಎಲ್‌ ಸಿ ಪರೀಕ್ಷೆ ವೇಳಾಪಟ್ಟಿ ಮರು ಪರಿಷ್ಕರಿಸಿ : ಪ್ರೌಢಶಾಲಾ...

SSLC Exam Revised Demand: ಎಸ್ಎಸ್ಎಲ್‌ ಸಿ ಪರೀಕ್ಷೆ ವೇಳಾಪಟ್ಟಿ ಮರು ಪರಿಷ್ಕರಿಸಿ : ಪ್ರೌಢಶಾಲಾ ಶಿಕ್ಷಕರ ಬೇಡಿಕೆ

- Advertisement -

ಬೆಂಗಳೂರು : ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ಎಪ್ರಿಲ್‌ 1 ರಿಂದ ಎಪ್ರಿಲ್‌ 15ರ ವರೆಗೆ ಎಸ್‌ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು (SSLC Exam Revised Demand) ನಡೆಸಲು ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆದರೆ ಇದೀಗ ಪರೀಕ್ಷಾ ವೇಳಾಪಟ್ಟಿಯನ್ನು ಮರು ಪರಿಷ್ಕರಣೆ ಮಾಡುವಂತೆ ಪ್ರೌಢಶಾಲಾ ಶಿಕ್ಷಕರು ಶಿಕ್ಷಣ ಇಲಾಖೆ ಒತ್ತಾಯ ಹೇರಿದ್ದಾರೆ. ಮಾತ್ರವಲ್ಲ ಬೇಸಿಗೆ ರಜೆಯನ್ನು ಕಡಿತ ಮಾಡದಂತೆ ಬೇಡಿಕೆ ಇಟ್ಟಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಬಂದ ನಂತರದಲ್ಲಿ ಅಕ್ಟೋಬರ್‌ 3 ರಿಂದ ಅಕ್ಟೋಬರ್‌ 31 ರ ವರೆಗೆ ದಸರಾ ಹಾಗೂ ಎಪ್ರಿಲ್‌ 11 ರಿಂದ ಮೇ 28ರ ವರೆಗೆ ಬೇಸಿಗೆ ರಜೆಯನ್ನು ನೀಡಲಾಗುತ್ತಿತ್ತು. ಆದರೆ ಇತ್ತೀಚಿಗೆ ದಸರಾ ರಜೆಯನ್ನು 29 ದಿನಗಳಿಂದ 14 ದಿನಗಳಿಗೆ ಕಡಿತಗೊಳಿಸಲಾಗಿದೆ. ಅದ್ರಲ್ಲೂ 2022-23 ರ ಶೈಕ್ಷಣಿಕ ವರ್ಷವನ್ನು ಮೇ 16 ರಿಂದಲೇ ಆರಂಭಿಸಲಾಗಿದೆ. ಇದರಿಂದಾಗಿ ಪ್ರಸ್ತುತ ಶಾಲಾ ದಿನಗಳ ಸಂಖ್ಯೆ 260ಕ್ಕೆ ಏರಿಕೆಯಾಗಿದೆ.

ಈ ಹಿಂದೆ 230 ದಿನಗಳ ಕಾಲ ಶಾಲಾ ದಿನಗಳಿದ್ದವು. ಆದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಜಾ ಸಹಿತ ಇಲಾಖೆ ಆಗಿದ್ದು, ಶಿಕ್ಷಕರಿಗೆ ಹತ್ತು ಗಳಿಕೆ ರಜೆಗಳನ್ನು ಮಾತ್ರವೇ ನೀಡಲಾಗುತ್ತಿದೆ. ರಜಾರಹಿತ ಇಲಾಖೆ ಅವರಿಗೆ ೨೦ ಅರ್ಧ ವೇತನ ರಜೆ, ಮೂವತ್ತು ಗಳಿಕೆ ರಜೆಗಳನ್ನು ನೀಡಲಾಗುತ್ತಿದೆ. ಅಲ್ಲದೇ ಪ್ರೌಢ ಶಾಲಾ ಶಿಕ್ಷಕರು ಎಪ್ರೀಲ್‌ ತಿಂಗಳಿನಲ್ಲಿ ೧೦ನೇ ತರಗತಿ ಪರೀಕ್ಷೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೆಲಸಗಳಲ್ಲಿ ನಿರತರಾಗಿ ಇರುವುದರಿಂದ ಬೇಸಿಗೆ ರಜೆ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದು ತಾರತಮ್ಯದ ವಿಷಯವಾಗಿದೆ.

ಈ ಹಿನ್ನೆಲೆಯಲ್ಲಿ ವಿವಿಧ ರಜೆಗಳನ್ನು ಕಡಿತಗೊಳಿಸಿರುವ ಕ್ರಮ ಮನೋವೈಜ್ಞಾನಿಕ ಆಧಾರದಲ್ಲಿ ಅವೈಜ್ಞಾನಿಕವಾಗಿದ್ದು, ಶಿಕ್ಷಕರು ಒತ್ತಡ ರಹಿತ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡಲು 2023 ರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಮುಖ್ಯ ಪರೀಕ್ಷೆಯನ್ನು ಮಾರ್ಚ್‌ 30 ರ ಒಳಗೆ ಹಾಗೂ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವನ್ನು ಎಪ್ರಿಲ್‌15 ರ ಒಳಗೆ ಮುಗಿಯುವಂತೆ ವೇಳಾಪಟ್ಟಿಯನ್ನು ಮರು ಪರಿಷ್ಕರಣೆ ಮಾಡುವಂತೆ ಕರ್ನಾಟಕ ರಾಝ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಅವರು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : Meditation: ಪ್ರತಿದಿನ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ 10 ನಿಮಿಷ ಧ್ಯಾನ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಬಿ.ಸಿ.ನಾಗೇಶ್

ಇದನ್ನೂ ಓದಿ : Summer Holiday Reduced : ಕರ್ನಾಟಕದಲ್ಲಿ ಶಾಲೆಗಳಿಗೆ ಈ ಬಾರಿಯೂ ಬೇಸಿಗೆ ರಜೆ ಕಡಿತ

SSLC Exam Time Table Revised Demand of High School Teachers Summer Holiday also

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular