Beet root halwa : ಬೀಟ್‌ ರೂಟ್‌ ಹಲ್ವಾದ ರುಚಿ ನಿಮಗೆ ಗೊತ್ತಾ ? ಮನೆಯಲ್ಲೇ ಮಾಡಿ ಅಪರೂಪದ ಖಾದ್ಯ

Beet root halwa : ಭಾರತೀಯರು ಹೆಚ್ಚಾಗಿ ರುಚಿಕರ ಅಡುಗೆಗಳ ಕಡೆಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಪ್ರತೀ ಹಬ್ಬದ ಹೊತ್ತಲ್ಲಿ ಹೊಸ ಹೊಸ ತಿನಿಸುಗಳನ್ನು ಮಾಡಬೇಕು ಅಂತಾ ಬಯಸುತ್ತಾರೆ. ಹಬ್ಬಕ್ಕೆ ಮನೆಗೆ ಬರುವ ಅತಿಥಿಗಳ ಎದುರಲ್ಲಿ ಪಾಕ ಪ್ರಾವಿಣ್ಯ ಪ್ರದರ್ಶಿಸಲು ಹೆಂಗಳೆಯರು ತುದಿಗಾಲಲ್ಲಿ ನಿಂತಿರುತ್ತಾರೆ. ಒಂದೊಮ್ಮೆ ನೆಂಟರು ಮನೆಗೆ ಬಂದ್ರೆ ಯಾವ ತಿನಿಸು ಮಾಡಬೇಕು ಅಂತಾ ಹುಡುಕುತ್ತಿದ್ದವರಿಗೆ ವಿಶೇಷವಾದ ಖಾದ್ಯ ಇಲ್ಲಿದೆ.ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಮನೆಯಲ್ಲಿಯೇ ಸ್ವಾದಿಷ್ಟವಾಗಿರುವ ಬೀಟ್‌ರೋಟ್‌ ಹಲ್ವಾ(Beet root halwa ) ತಯಾರಿಸಬಹುದು.

ಬೇಕಾಗುವ ಪದಾರ್ಥಗಳು

ಮಧ್ಯಮ ಗಾತ್ರದ 2 ಬೀಟ್‏ರೂಟ್
ಹಾಲು 1 ಕಪ್
ಸಕ್ಕರೆ 1/2 ಕಪ್
ತುಪ್ಪ 2 ಚಮಚ
ಖೋಯಾ 100 ಗ್ರಾಂ
ಹಸಿರು ಏಲಕ್ಕಿ 1 ಚಮಚ
ಗೋಡಂಬಿ
ಒಣದ್ರಾಕ್ಷಿ
ತುಪ್ಪ: 2 ಚಮಚ

ಇದನ್ನೂ ಓದಿ : Potato Samosas : ಮನೆಯಲ್ಲೇ ಮಾಡಿ ಬೇಕರಿ ಶೈಲಿಯ ಆಲೂ ಸಮೋಸ

ಮಾಡುವ ವಿಧಾನ :
ಗೋಡಂಬಿ / ಬಾದಾಮ್ ಮತ್ತು ಒಣದ್ರಾಕ್ಷಿಗಳನ್ನು ತುಪ್ಪದಲ್ಲಿ ಫ್ರೈ ಮಾಡಿ ಬದಿಯಲ್ಲಿ ತೆಗೆದಿಡಿ .
ಅದೇ ಪ್ಯಾನ್‌ ಗೆ ತುರಿದ ಬೀಟ್‏ರೂಟ್ ಸೇರಿಸಿ ಐದು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಹುರಿಯಿರಿ. ಹುರಿದ ಬೀಟ್ ರೂಟ್‌ ಗೆ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಾಣಲೆಯನ್ನು ಮುಚ್ಚಿ ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ (ನಡುನಡುವೆ ಪ್ಯಾನ್ ನಲ್ಲಿ ಮಿಶ್ರಣವನ್ನು ಕದಡುತ್ತಿರಿ). ಬೀಟ್‏ರೂಟ್ ತುರಿ ಹಾಲಿನಲ್ಲಿ ಬೆಂದ ನಂತರ ಅದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಖೋಯಾ ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಹುರಿದಿಟ್ಟ ಗೋಡಂಬಿ / ಬಾದಾಮ್‌ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ, ಜೊತೆಗೆ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಸ್ಟವ್ ನಿಂದ ಕೆಳಗಿಳಿಸಿ. ಈಗ ರುಚಿಕರವಾದ ಸಿಹಿಸಿಹಿಯಾದ ಬೀಟ್‌ ರೂಟ್‌ ಹಲ್ವಾ ತಿನ್ನಲು ರೆಡಿ.

ಇದನ್ನೂ ಓದಿ : Fenugreek Gravy:ಪಲ್ಯದ ಬದಲು ಸ್ಫೆಷಲ್‌ ಮೆಂತೆ ಸೊಪ್ಪಿನ ಗ್ರೇವಿ

ಇದನ್ನೂ ಓದಿ : Hariyali Egg Curry : ಒಮ್ಮೆ ಟ್ರೈ ಮಾಡಿ ರುಚಿಯಾದ ಹರಿಯಾಲಿ ಎಗ್ ಕರಿ

ಬೀಟ್ರೂಟ್ ಬ್ಲಡ್ ಶುಗರ್, ದೈಹಿಕ ದೌರ್ಬಲ್ಯ, ರಕ್ತಹೀನತೆಯಂತಹ ಆರೋಗ್ಯದ ಸಮಸ್ಯೆಗಳಿಗೆ ಬಹಳ ಉಪಕಾರಿ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ

Beet root halwa: Indians often have a great interest towards savory dishes. They want to make new dishes during every festival. Women stand on tiptoe to show off their cooking skills in front of the guests who come home for the festival. Here is a special dish for those who are looking for what to cook when they come home. Beet root halwa can be easily prepared at home in a few minutes.

Comments are closed.