ಬದಲಾಯ್ತು SSLC ಪ್ರಶ್ನೆ ಪತ್ರಿಕೆ ಸ್ವರೂಪ : ಇಲ್ಲಿದೆ ಸಂಪೂರ್ಣ‌ ಮಾಹಿತಿ

ಬೆಂಗಳೂರು : ಸಾರ್ವಜನಿಕ‌ ಶಿಕ್ಷಣ ಇಲಾಖೆ ಈಗಾಗಲೇ ಎಸ್ಎಸ್ಎಲ್ ಸಿ ಪರೀಕ್ಷಾ ‌ದಿನಾಂಕವನ್ನು ಪ್ರಕಟಿಸಿದೆ. ‌ಕೊರೊನಾ ಹಿನ್ನೆಲೆಯಲ್ಲಿ ಪಠ್ಯ ಕಡಿತ ಮಾಡಲಾಗಿದ್ದು, ಇದೀಗ ಪ್ರಶ್ನೆ ಪತ್ರಿಕೆಯ ಸ್ವರೂಪದಲ್ಲಿಯೂ ಬದಲಾವಣೆಗಳನ್ನು ತಂದಿದೆ.

ಜೂನ್ 21 ರಿಂದ ಜುಲೈ 5ರವರೆಗೆ ಈ‌ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯಲಿದೆ. ಆದರೆ  ಪರೀಕ್ಷಾ ಪ್ರಶ್ನೆಪತ್ರಿಕೆ ಮಾದರಿಯಲ್ಲಿ ಕೊಂಚ ಬದಲಾವಣೆ ಮಾಡಿಲಾಗಿದ್ದು ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ.

SSLC ಬೋರ್ಡ್ ಸ್ಟ್ಯಾಂಡರ್ಡ್ʼನಂತೆಯೇ ಪರೀಕ್ಷೆ ನಡೆಯಲಿದ್ದು, ಒಟ್ಟು 100 ಅಂಕಗಳಲ್ಲಿ 20 ಇಂಟರ್ನಲ್ ಅಂಕ ಮತ್ತು 80 ಮುಖ್ಯ ಪರೀಕ್ಷೆಯ ಅಂಕಗಳು ಇರುತ್ವೆ. ಇದ್ರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ಸಾಮಾನ್ಯವಾಗಿ ಇಷ್ಟು ವರ್ಷಗಳಲ್ಲಿ ಬಹು ಆಯ್ಕೆಯ ಪ್ರಶ್ನೆಗಳನ್ನು 20 ಅಂಕಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಆದರೆ‌

ಈ ಬಾರಿ ಬಹು ಆಯ್ಕೆಯ ಪ್ರಶ್ನೆಗಳನ್ನು 30 ಅಂಕಕ್ಕೆ ಬಳಸಿಕೊಳ್ಳಲಾಗುತ್ತಿದೆ‌ ಎಂದು ಸಾರ್ವಜನಿಕ‌ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬು ಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷ ಕೊರೊನಾ‌ ನಡುವಲ್ಲೇ ಪರೀಕ್ಷೆಯನ್ನು ನಡೆಸಿದಪ್ರೌಢಶಾಲಾ ಪರೀಕ್ಷಾ ಮಂಡಳಿ ಪರೀಕ್ಷೆಯಲ್ಲಿಯೂ ಹೊಸ ಬದಲಾವಣೆಗಳನ್ನು ತರಲು ಸಿದ್ದತೆ ‌ನಡೆಸುತ್ತಿದೆ. ಹೊಸ ಬದಲಾವಣೆಗಳ ಕುರಿತು ಸದ್ಯದಲ್ಲಿಯೇ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಯೂ ಇದೆ.

Comments are closed.