ಬೆಂಗಳೂರು: (SSLC passing mark down) ಪ್ರಿ-ಯೂನಿವರ್ಸಿಟಿ (PU) ತರಗತಿಗಳಿಗೆ ಪ್ರವೇಶ ಪಡೆಯುವ ಮಕ್ಕಳ ಒಟ್ಟು ದಾಖಲಾತಿ ಅನುಪಾತದಲ್ಲಿ ಕುಸಿತ ಕಂಡಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾವಾರು ಉತ್ತೀರ್ಣತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ- II ಥಿಯರಿ ಪರೀಕ್ಷೆಗಳಲ್ಲಿ ಒಟ್ಟು 80 ಅಂಕಗಳ ಪೈಕಿ ಉತ್ತೀರ್ಣ ಅಂಕಗಳನ್ನು 28 ಅಂಕಗಳಿಂದ 20 ಅಂಕಗಳಿಗೆ ಇಳಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ನೇತೃತ್ವದ ಸಮಿತಿಯು ನಾಲ್ಕು ಮತ್ತು ಐದನೇ ವರದಿಗಳನ್ನು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದ್ದು, ಆಯೋಗದ ಪ್ರಕಾರ, ಪ್ರಿ-ಯೂನಿವರ್ಸಿಟಿ (PU) ತರಗತಿಗಳಿಗೆ ಪ್ರವೇಶ ಪಡೆಯುವ ಮಕ್ಕಳ ಒಟ್ಟು ದಾಖಲಾತಿ ಅನುಪಾತವು ಎಲ್ಲಾ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಂಕಗಳ ಕೊರತೆಯಿಂದ ಅನುತ್ತೀರ್ಣರಾಗುತ್ತಿರುವುದು. ಎಸ್ಸಿ/ಎಸ್ಟಿಗೆ ಸೇರಿದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಇದು ಒಟ್ಟಾರೆಯಾಗಿ ಉತ್ತೀರ್ಣವಾಗುವ ಶೇಕಡಾವಾರು ಪಲಿತಾಂಶ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.
ಇತರ ರಾಜ್ಯಗಳ ಇತರ ಮಕ್ಕಳು ಉತ್ತಮವಾಗಿ ಕಾರ್ಯನಿರ್ವಹಿಸಬಹುದಾದಾಗ, ನಮ್ಮ ಮಕ್ಕಳಿಗೆ ಏಕೆ ಸಾಧ್ಯವಾಗುವುದಿಲ್ಲ ಎಂದು ವಿಜಯಭಾಸ್ಕರ್ ಅವರು 1,609 ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದು, ಶಾಲೆಗಳ ವಿಲೀನಕ್ಕೆ ಶಿಫಾರಸು ಎಸ್ಎಸ್ಎಲ್ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ನೆರೆಯ ರಾಜ್ಯಗಳ ಮಾದರಿಯಲ್ಲಿ ಆಂತರಿಕ ಮೌಲ್ಯಮಾಪನವನ್ನು ಪರಿಚಯಿಸಲು ಸಮಿತಿಯು ಶಿಫಾರಸು ಮಾಡಿದೆ.
ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆಗಳಲ್ಲಿ ವಿಜ್ಞಾನ ವಿಷಯಗಳಲ್ಲಿ 15 ಅಂಕಗಳಿಗೆ ಮತ್ತು ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳಲ್ಲಿ 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು (ಎಂಸಿಕ್ಯೂ) ನೀಡುವಂತೆ ಹೇಳಿದ್ದು, ಪ್ರಥಮ ಪಿಯು ಮತ್ತು ದ್ವಿತೀಯ ಪಿಯು ತರಗತಿಗಳ ನಡುವಿನ ವಿದ್ಯಾರ್ಥಿಗಳ ಡ್ರಾಪ್ಔಟ್ ಪ್ರಮಾಣವನ್ನು ವರದಿಯು ಎತ್ತಿ ತೋರಿಸಿದೆ. ಇದಷ್ಟೇ ಅಲ್ಲದೆ, 100 ಮೀಟರ್ ವ್ಯಾಪ್ತಿಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗಳು, ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳನ್ನು ವಿಲೀನಗೊಳಿಸಲು ಸಮಿತಿಯು ಶಿಫಾರಸು ಮಾಡಿದೆ.
ಇದನ್ನೂ ಓದಿ : Teacher Scolding : ಶಿಕ್ಷಕರು ವಿದ್ಯಾರ್ಥಿಗೆ ಬೈಯ್ಯುವುದು, ಶಿಕ್ಷೆ ವಿಧಿಸುವುದು ಅಪರಾಧವಲ್ಲ : ಬಾಂಬೆ ಹೈಕೋರ್ಟ್ ತೀರ್ಪು
“ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮುಗಿಸಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸೇರಲು ಬಯಸುವ ವಿದ್ಯಾರ್ಥಿಗಳು ವರ್ಗಾವಣೆ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು. ನಂತರ ಹೊಸ ಪ್ರವೇಶವನ್ನು ತೆಗೆದುಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ, ಹೆಚ್ಚಿನ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಹೀಗಾಗಿ ಎರಡು ಶಾಲೆಗಳನ್ನು ವಿಲೀನಗೊಳಿಸುವುದು ವಿದ್ಯಾರ್ಥಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ” ಎಂದು ವರದಿ ಹೇಳಿದೆ.
SSLC passing mark down: 20 marks to pass SSLC exam: Committee recommendation to Karnataka Govt.