SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್

ಬೆಂಗಳೂರು : ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದಿದ್ದು ಪಿಯುಸಿ ಪರೀಕ್ಷೆ ಕೊನೆಯ ಹಂತದಲ್ಲಿದೆ. ಈ ಮಧ್ಯೆ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಮೇ 20 ರೊಳಗೆ ಫಲಿತಾಂಶ (SSLC Result ) ಪ್ರಕಟಿಸೋದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಘೋಷಿಸಿದೆ. ಈಗಾಗಲೇ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಮೌಲ್ಯಮಾಪನ ಕೊನೆಗೊಂಡಿದ್ದು, ಅಂಕಗಳ ಕ್ರೋಡಿಕರಣ ಆರಂಭಗೊಂಡಿದೆ.

ಹೀಗಾಗಿ ಮೇ 20 ರ ವೇಳೆಗೆ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಶಿಕ್ಷಣ ಇಲಾಖೆ ಘೋಷಿಸಿದೆ. ಮೇ ಮೊದಲ ವಾರದಲ್ಲೇ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸುವುದಾಗಿ ಶಿಕ್ಷಣ ಇಲಾಖೆ ಹೇಳಿತ್ತು. ಆದರೆ ಮೌಲ್ಯಮಾಪನ ಕ್ಕೆ ಬರಬೇಕಿದ್ದ ಶಿಕ್ಷಕರು ಮೌಲ್ಯಮಾಪನಕ್ಕೆ ಗೈರಾಗಿದ್ದು, ಇದರಿಂದ ಮೌಲ್ಯಮಾಪನ ಪ್ರಕ್ರಿಯೆ ವಿಳಂಭ ಗೊಂಡಿದ್ದು, ಇದರಿಂದಾಗಿ ಫಲಿತಾಂಶವನ್ನು ಮೇ 20 ರ ವೇಳೆಗೆ ಪ್ರಕಟಿಸುವುದಾಗಿ ಹೇಳಿದೆ‌

ಈ ಬಗ್ಗೆ ಪ್ರೌಢಶಿಕ್ಷಣ ಇಲಾಕೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ 28 ರಂದು ಆರಂಭಗೊಂಡು ಏಪ್ರಿಲ್ 12 ರಂದು ಕೊನೆಗೊಂಡಿತ್ತು. ಅಂದುಕೊಂಡಂತೆ ಆಗಿದ್ದರೇ ಮೇ 12 ಕ್ಕೆ ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ ಬಹುತೇಕ ಶಿಕ್ಷಕರು ಕಾರಣವಿಲ್ಲದೇ ಮೌಲ್ಯಮಾಪನಕ್ಕೆ ಗೈರಾಗಿದ್ದರಿಂದ ಈಗ ಫಲಿತಾಂಶ 20 ಕ್ಕೆ ಪ್ರಕಟವಾಗಬಹುದು. ಇನ್ನೂ ಈ ವರ್ಷದ ಮೌಲ್ಯಮಾಪನಕ್ಕೆ ಸಕಾರಣವಿಲ್ಲದೇ ಶೇಕಡಾ 30 ರಷ್ಟು ಶಿಕ್ಷಕರು ಗೈರಾಗಿದ್ದಾರೆ ಎನ್ನಲಾಗಿದ್ದು ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಮೌಲ್ಯ ಮಾಪನಕ್ಕೆ ಗೈರಾದ ಶಿಕ್ಷಕರಿಗೆ ನೊಟೀಸ್ ಜಾರಿ ಮಾಡಿದೆ.

ಕೇವಲ ಶಿಕ್ಷಕರ ಗೈರುಹಾಜರಿಯಿಂದಲೇ ಫಲಿತಾಂಶದಲ್ಲಿ ವಿಳಂಬವಾಗಿರೋದರಿಂದ ಈಗ ಗೈರಾದ ಶಿಕ್ಷಕರ ಪಟ್ಟಿ ತಯಾರಿಸಲಾಗಿದೆ. ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಕ್ಷಣ ಇಲಾಖೆಯ ನಿರ್ದೇಶಕ ಗೋಪಾಲಕೃಷ್ಣ ಸೂಚನೆ ನೀಡಿದ್ದಾರೆ. ಇನ್ನೇನು ಒಂದು ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಕೂಡ ಮುಕ್ತಾಯಗೊಳ್ಳಲಿದೆ. ಈ ಬಗ್ಗೆ ಮಾಹಿತಿ ನೀಡಿರೋ ಬಿ.ಸಿ.ನಾಗೇಶ್ ಮೇ ಕೊನೆಯ ವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸೋದಾಗಿ ಹೇಳಿದ್ದಾರೆ.

ಇದನ್ನೂ ಓದಿ : ಪೋಷಕರು, ಮಕ್ಕಳಿಗೆ ಸಿಹಿಸುದ್ದಿ: ಇನ್ಮುಂದೇ ನೋ ಹೋಂ ವರ್ಕ್

ಇದನ್ನೂ ಓದಿ : ಶಾಲೆ ಆರಂಭ ಮುಂದೂಡಿ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಭಾಪತಿ ಬಸವರಾಜ್‌ ಹೊರಟ್ಟಿ

SSLC Result Declare May 20th, Absent Teachers for sslc valuation Notice issued by Government

Comments are closed.