SSLC ಫೇಲ್‌ ಆದ ವಿದ್ಯಾರ್ಥಿಗಳ ಗಮನಕ್ಕೆ : ಪೂರಕ ಪರೀಕ್ಷೆಗೆ ಇಂದು ಕೊನೆಯ ದಿನಾಂಕ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಕಳೆದ ತಿಂಗಳು ಎಸ್‌ಎಸ್‌ಎಲ್‌ ಸಿ ಪರೀಕ್ಷೆಗಳನ್ನು ನಡೆಸಿದ್ದು, ಇಂದು( ಮೇ 8ರಂದು) ಬೆಳಿಗ್ಗೆ 10ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು (SSLC Result 2023) ಪ್ರಕಟಿಸಲಿದೆ. ಇನ್ನೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ವಿಚಲಿತರಾಗದೇ, ತಮ್ಮ ಮುಂದಿನ ಭವಿಷ್ಯಕ್ಕಾಗಿ ಮರು ಪರೀಕ್ಷೆ (re-examination) ಬರೆದು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸಬಹುದು. ಮಾರ್ಚ್‌ ಅಥವಾ ಏಪ್ರಿಲ್‌ 2023ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ (SSLC Supplementary Exam) ಅರ್ಜಿ ಸಲ್ಲಿಸಲು ಇಂದು ಮೇ 15 ಕೊನೆಯ ದಿನವಾಗಿದೆ ಅದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮೇ. 15 ರವರೆಗೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಛಾಯಾಪ್ರತಿಯನ್ನು ಪಡೆಯಬೇಕು. ನಂತರವಷ್ಟೇ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳಿಗೆ ಮೌಲ್ಯಮಾಪನ ಉಚಿತವಾಗಿರುತ್ತದೆ. ಪೂರಕ ಪರೀಕ್ಷೆಗೆ ಒಂದು ವಿಷಯಕ್ಕೆ 370 ರೂ. 2 ವಿಷಯಕ್ಕೆ 461 ರೂ. ಮತ್ತು ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ 620 ರೂ.ಗಳನ್ನು ನಿಗದಿಮಾಡಲಾಗಿದೆ. ಮರು ಮೌಲ್ಯಮಾಪನಕ್ಕೆ ಮೇ 15ರಿಂದ ರಿಂದ ಮೇ 21 ರವರೆಗೆ ಅವಕಾಶ ನೀಡಲಾಗಿದೆ. ಇನ್ನಷ್ಟು ಅಂಕ ಬರಬೇಕಿತ್ತು ಎನ್ನುವವರು ಮರುಮೌಲ್ಯಮಾಪನ ಹಾಕಬಹುದು.

ಇದನ್ನೂ ಓದಿ : CBSE 10th Result 2023 : 10 ನೇ ತರಗತಿ ಫಲಿತಾಂಶ ಪ್ರಕಟ, ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : CBSE Result 2023 : 12ನೇ ತರಗತಿ ಫಲಿತಾಂಶ ಪ್ರಕಟ, ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ SSLC ಕಂಪಾರ್ಟ್‌ಮೆಂಟ್ ಅಥವಾ ಮರುಪರೀಕ್ಷೆ 2023 :
ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯುತ್ತಾರೆ. ಕೆಲವರು ಸಾಮಾನ್ಯವಾಗಿ ಉತ್ತಮ ಫಲಿತಾಂಶ ಪಡೆದರೆ, ಕೆಲವರು ತಮ್ಮ ಪರೀಕ್ಷೆಗಳಲ್ಲಿ ಕಳಪೆ ಅಥವಾ ಫೇಲ್‌ ಆಗುತ್ತಾರೆ. ಆ ವಿದ್ಯಾರ್ಥಿಗಳಿಗೆ, ಅವರ ಶೈಕ್ಷಣಿಕ ವರ್ಷವನ್ನು ಉಳಿಸುವ ಸಲುವಾಗಿ ಕರ್ನಾಟಕ ಪರೀಕ್ಷಾ ಮಂಡಳಿ ಕರ್ನಾಟಕ ವಿಭಾಗದ ಪರೀಕ್ಷೆಗಳ ರೂಪದಲ್ಲಿ ನೀಡಲಾಗುತ್ತದೆ. ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ಅನುತ್ತೀರ್ಣ ವಿದ್ಯಾರ್ಥಿಗಳು ಅಥವಾ ಅಂಕಗಳಿಂದ ತೃಪ್ತರಾಗದವರು ಕರ್ನಾಟಕ SSLC 2023 ವಿಭಾಗದ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಮಂಡಳಿಯು 10 ನೇ ತರಗತಿಯ ವಿಭಾಗದ ಪರೀಕ್ಷೆಯನ್ನು ಜುಲೈ 2023 ರಲ್ಲಿ ತಾತ್ಕಾಲಿಕವಾಗಿ ನಡೆಸುತ್ತದೆ.

SSLC Supplementary Exam: Attention SSLC failed students: Today is the last date for the supplementary exam

Comments are closed.