ಬೆಂಗಳೂರು : SSLC Supplementary Exam Result :2022ರ ಜೂನ್ 27ರಿಂದ ಜುಲೈ ನಾಲ್ಕರವರೆಗೆ ನಡೆದಿದ್ದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. ಆದರೆ ನಾಳೆ ವಿದ್ಯಾರ್ಥಿಗಳಿಗೆ ವೆಬ್ಸೈಟ್ನಲ್ಲಿ ಫಲಿತಾಂಶಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಈ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾಹಿತಿ ನೀಡಿದ್ದಾರೆ. ಈ ಬಾರಿ ಪೂರಕ ಪರೀಕ್ಷೆಗೆ ಒಟ್ಟು 94,669 ವಿದ್ಯಾರ್ಥಿಗಳು ಹಾಜರಾಗಿದ್ದರು ಈ ಪೈಕಿ 37,479 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ 39.59 ಪ್ರತಿಶತವಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾಹಿತಿ ನೀಡಿದ್ದಾರೆ.
ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ ಅಧಿಕೃತ ವೆಬ್ಸೈಟ್ https://karresults.nic.in/ ನಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಇದರ ಜೊತೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಗಳಿಗೂ ಫಲಿತಾಂಶದ ವಿವರಗಳನ್ನು ಎಸ್ಎಂಎಸ್ ಮಾಡಲಾಗುವುದು ಎಂದು ಸಚಿವ ಬಿ,ಸಿ ನಾಗೇಶ್ ಟ್ವೀಟ್ ಮೂಲಕ ನೀಡಿದ್ದಾರೆ.
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗಿದ್ದು, 37,479 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
— B.C Nagesh (@BCNagesh_bjp) July 20, 2022
ನಾಳೆ ಮಧ್ಯಾಹ್ನ 12 ಗಂಟೆ ನಂತರ ಫಲಿತಾಂಶವನ್ನು ವೆಬ್ಸೈಟ್ನಲ್ಲಿ ವೀಕ್ಷಿಸಬಹುದು.https://t.co/qP2v5VxzQI
ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಪೋನ್ ನಂಬರ್ಗಳಿಗೆ SMS ಮೂಲಕವೂ ಫಲಿತಾಂಶವನ್ನು ಕಳುಹಿಸಲಾಗುತ್ತದೆ.
ಮೇ 19ರಂದು 2021-22ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶವನ್ನು ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಿತ್ತು. ಈ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಜೂನ್ ಇಪ್ಪತ್ತೇಳರಿಂದ ಜುಲೈ ನಾಲ್ಕರವರೆಗೆ ರಾಜ್ಯದ 423 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು .ಒಟ್ಟು 11,415 ಶಾಲೆಗಳಿಂದ, 63,363 ವಿದ್ಯಾರ್ಥಿಗಳು, 31,283 ವಿದ್ಯಾರ್ಥಿನಿಯರು ಹಾಗೂ ಮೂರು ತೃತೀಯ ಲಿಂಗಿಗಳು ಸೇರಿ ಒಟ್ಟು 94,649 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.
ಇದನ್ನು ಓದಿ : big relief to ks eshwarappa : ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪಗೆ ಬಿಗ್ ರಿಲೀಫ್
ಇದನ್ನೂ ಓದಿ : DK Shivakumar : ದೇಶದಲ್ಲಿ ಶವಸಂಸ್ಕಾರಕ್ಕೂ ತೆರಿಗೆ ಕಟ್ಟುವ ಕಾಲ ದೂರವಿಲ್ಲ : ಡಿ.ಕೆ ಶಿವಕುಮಾರ್ ಕಿಡಿ
ಇದನ್ನೂ ಓದಿ : Spoken English class : ಸರ್ಕಾರಿ ಶಾಲೆಗೂ ಬರ್ತಿದೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್ : ಬಿ.ಸಿ.ನಾಗೇಶ್ ಘೋಷಣೆ
ಇದನ್ನೂ ಓದಿ : Ambulance hits Shiroor toll : ಶಿರೂರು ಟೋಲ್ ಕಂಬಕ್ಕೆ ಅಂಬ್ಯುಲೆನ್ಸ್ ಢಿಕ್ಕಿ : ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ
ಇದನ್ನೂ ಓದಿ : SSC Applications 2022 : ಹಿಂದಿ ಅನುವಾದಕರಿಗೆ ಇಲ್ಲಿದೆ ಸುವರ್ಣವಕಾಶ
SSLC Supplementary Exam Result Declared