DK Shivakumar : ದೇಶದಲ್ಲಿ ಶವಸಂಸ್ಕಾರಕ್ಕೂ ತೆರಿಗೆ ಕಟ್ಟುವ ಕಾಲ ದೂರವಿಲ್ಲ : ಡಿ.ಕೆ ಶಿವಕುಮಾರ್​ ಕಿಡಿ

ಬೆಂಗಳೂರು : dk shivakumar takes a dig : ಆಹಾರ ಪದಾರ್ಥಗಳ ಮೇಲೂ ಜಿಎಸ್​ಟಿ ವಿಧಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಬಿಜೆಪಿ ಸರ್ಕಾರವು ಜನತೆಯ ಆದಾಯವನ್ನು ಹೆಚ್ಚು ಮಾಡದೇ ದಿನ ಬಳಕೆಯ ವಸ್ತುಗಳ ದರವನ್ನು ಮಾತ್ರ ಹೆಚ್ಚು ಮಾಡಿ ಪಿಕ್​ ಪಾಕೆಟ್​ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ವಿರುದ್ಧ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

ಜನರನ್ನು ಸಂತೋಷದಿಂದ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಈ ಬಿಜೆಪಿ ಸರ್ಕಾರವು ಜನರು ಜೀವಂತ ಇರುವಾಗಲೇ ಜಿಎಸ್​ಟಿ ಎಂಬ ವಿಷ ನೀಡಿ ಸಾಯಿಸಲು ಮುಂದಾಗಿದೆ. ಹಾಲು, ಪೆಟ್ರೋಲ್​, ಡೀಸೆಲ್​ ಹೀಗೆ ಪ್ರತಿಯೊಂದು ವಸ್ತುವಿನ ದರವನ್ನು ಹೆಚ್ಚು ಮಾಡಲಾಗ್ತಿದೆ. ಜನರನ್ನು ಜೀವಂತವಾಗಿ ನೀವು ಸಾಯಿಸುತ್ತಿದ್ದೀರಾ ಎಂದು ಕಿಡಿಕಾರಿದರು. ಹಾಲು ಮಾರಾಟ ಮಾಡುವ ರೈತನಿಗೆ ನೀವು ಆದಾಯ ಹೆಚ್ಚು ಮಾಡಿಲ್ಲ. ಆದರೆ ಪಶು ಮೇವು ಹಾಗೂ ಚಿಕಿತ್ಸೆಯ ದರವನ್ನು ದುಬಾರಿ ಮಾಡಲಾಗಿದೆ. ಸಹಕಾರಿ ಸಂಸ್ಥೆಯ ತೀರ್ಮಾನಗಳು ರೈತರಿಗೆ ಪೂರಕವಾಗಿಲ್ಲ. ಈ ರೀತಿ ಮಾಡಿದರೆ ಜನರು ಕಳ್ಳ ದಾರಿ ಹಿಡಿಯದೇ ಇನ್ನೇನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಬ್ಯಾಂಕ್​ ಚೆಕ್​ ಬುಕ್​ ಪಡೆಯಬೇಕೆಂದರೂ ತೆರಿಗೆ ಪಾವತಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಅಂದರೆ ನಮ್ಮ ದುಡ್ಡು ನಾವು ತೆಗೆದುಕೊಳ್ಳಬೇಕು ಅಂದರೂ ಅದಕ್ಕೆ ದುಡ್ಡು ಪಾವತಿ ಮಾಡಬೇಕು. ಮಕ್ಕಳ ಕಲಿಕೆ ಸಾಮಗ್ರಿಗಳಿಗೂ ಈ ಬಿಜೆಪಿ ಸರ್ಕಾರ ಶೇ 18ರಷ್ಟು ತೆರಿಗೆ ಹೇರಿಕೆ ಮಾಡಿದೆ. ದೇಶದಲ್ಲಿ ಸದ್ಯ ಶವ ಸುಡಬೇಕು ಅಂದರೆ ಕಟ್ಟಿಗೆಗೂ ತೆರಿಗೆ ಕಟ್ಟಬೇಕಾದ ಸ್ಥಿತಿ ಎದುರಾಗಿದೆ. ಜನರಿಗೆ ಈ ರೀತಿ ಕಿರುಕುಳ ನೀಡುವುದು ಸರಿಯಲ್ಲ. ಈ ಹೊರೆಯನ್ನು ಸರ್ಕಾರ ಹೊರಬೇಕೆ ಹೊರತು ಜನರಲ್ಲ. ಈ ಸಂಬಂಧ ಸಿಎಂ ಬೊಮ್ಮಾಯಿ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಾವು ಪ್ರತಿ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ಕಿಡಿಕಾರಿದರು.

ಇದನ್ನು ಓದಿ : Virat Kohli form : ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಬಿಸಿಸಿಐ ಬಳಿಯಿದೆ ಜಬರ್ದಸ್ತ್ ಪ್ಲಾನ್

ಇದನ್ನೂ ಓದಿ : big relief to ks eshwarappa : ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪಗೆ ಬಿಗ್​ ರಿಲೀಫ್​

dk shivakumar takes a dig at bjp govt over gst

Comments are closed.