ಬೆಂಗಳೂರು : ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿರುವ ರಾಜ್ಯವ್ಯಾಪ್ತಿ ಬಂದ್ ಹಿನ್ನೆಲೆಯಲ್ಲಿ ಸಪ್ಟೆಂಬರ್ 28ರಂದು ನಡೆಯಬೇಕಾಗಿದ್ದ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ.

ಕೊರೊನಾ ವೈರಸ್ ಸೋಂಕಿನ ಆರ್ಭಟದ ನಡುವಲ್ಲೇ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಗೆ ದಿನಾಂಕವನ್ನು ನಿಗದಿಪಡಿಸ ಲಾಗಿತ್ತು. ಆದ್ರೀಗ ರೈತ ಪ್ರತಿಭಟನೆ ಎಸ್ಎಸ್ಎಲ್ ಸಿ ಪರೀಕ್ಷೆಯ ಮೇಲೆ ತಟ್ಟಿದೆ. ಸೋಮವಾರದಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ ಅಥವಾ ಹಿಂದೂಸ್ತಾನಿ ಸಂಗೀತ ಪರೀಕ್ಷೆ ನಡೆಯಬೇಕಾಗಿತ್ತು.

ಆದ್ರೀಗ ಪರೀಕ್ಷೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿಕೆ ಮಾಡಲಾಗಿದ್ದು, ಪರೀಕ್ಷೆಗಳು ಸಪ್ಟೆಂಬರ್ 29ರಂದು ಮಂಗಳವಾರದಂದು ನಡೆಯಲಿದೆ ಎಂದು ಪ್ರೌಢಶಾಲಾ ಪರೀಕ್ಷಾ ಮಂಡಳಿತ ನಿರ್ದೇಶಕರಾದ ವಿ.ಸುಮಂಗಲಾ ಅವರು ತಿಳಿಸಿದ್ದಾರೆ.
