ಭಾನುವಾರ, ಏಪ್ರಿಲ್ 27, 2025
HomeeducationTips For Students : ಪರೀಕ್ಷೆಗೆ ಮಾನಸಿಕವಾಗಿ ಸಿದ್ಧರಾಗಿ; ಆತಂಕ ದೂರ ಮಾಡಿಕೊಳ್ಳಿ

Tips For Students : ಪರೀಕ್ಷೆಗೆ ಮಾನಸಿಕವಾಗಿ ಸಿದ್ಧರಾಗಿ; ಆತಂಕ ದೂರ ಮಾಡಿಕೊಳ್ಳಿ

- Advertisement -

ವಾರ್ಷಿಕ ಪರೀಕ್ಷೆ (Annual Exams) ಸಮೀಪಿಸುತ್ತಿದೆ. ಮಕ್ಕಳ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದಾರೆ. ಅವರನ್ನು ಮಾನಸಿಕವಾಗಿ ಧೃಡಗೊಳಿಸುವ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಕಳೆದ ವಾರ ನಡೆದ ಪರೀಕ್ಷಾ ಪೇ ಚರ್ಚಾ ಸಹ ಇದರಲ್ಲೊಂದು. ಮಕ್ಕಳು ಪರೀಕ್ಷೆಗಾಗಿ ತಯಾರಿ ನಡೆಸುತ್ತಾ ಆಂತಕಕ್ಕೂ ಒಳಗಾಗುತ್ತಾರೆ. ಪರೀಕ್ಷೆ–ಫಲಿತಾಂಶದ ಬಗ್ಗೆ ಚಿಂತಿಸುತ್ತಾ ಸಮಯವನ್ನು ವ್ಯರ್ಥ ಮಾಡುತ್ತಾರೆ. ಅಂತಹವರಿಗೆ ಸರಿಯಾದ ಮತ್ತು ಸೂಕ್ತ ಸಲಹೆಯ ಅವಶ್ಯಕತೆಯಿದೆ (Tips For Students).

ಆತಂಕ ಎನ್ನುವುದು ಬೋರ್ಡ್‌ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಮೊದಲು ವಿದ್ಯಾರ್ಥಿಗಳು ಎದುರಿಸುವ ಪ್ರಮುಖ ಮಾನಸಿಕ ಆರೋಗ್ಯ ಸಮಸ್ಯೆಗಳಲ್ಲೊಂದಾಗಿದೆ. ಇದಕ್ಕೆ ಕಾರಣ ಪೋಷಕರು ಹಾಗೂ ಶಾಲೆಯಲ್ಲಿನ ನಿರೀಕ್ಷೆಗಳು. ನಮ್ಮ ದೇಶದಲ್ಲಿ ಯಶಸ್ಸನ್ನು ಸಾಮಾನ್ಯವಾಗಿ ಶ್ರೇಣಿಗಳಲ್ಲಿ ಅಳೆಯಲಾಗುತ್ತದೆ. ಆ ಶ್ರೇಣಿಯನ್ನು ತಲುಪುವ ಧಾವಂತದಲ್ಲಿ ವಿದ್ಯಾರ್ಥಿಗಳಲ್ಲಿ ಆಗಾಗ ಆತಂಕ, ಒತ್ತಡ ಮತ್ತು ವಿಪರೀತ ಸಂದರ್ಭಗಳಲ್ಲಿ ಖಿನ್ನತೆ ಕಾಣಿಸಿಕೊಳ್ಳುತ್ತದೆ.

ವಿದ್ಯಾರ್ಥಿಗಳಲ್ಲಿರುವ ಆಂತಕ, ಒತ್ತಡಕ್ಕೆ ಕಾರಣವೇನು?
ಇತ್ತೀಚಿನ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಇರುವುದು ಅಧ್ಯಯನದಿಂದ ತಿಳಿದು ಬಂದಿದೆ. ಕೆಲವರಲ್ಲಿ ಒತ್ತಡ, ಆತಂಕಕ್ಕೆ ಕಾರಣ ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳದಿರುವುದು. ಕೊನೆ ಕ್ಷಣದಲ್ಲಿ ಪರೀಕ್ಷೆಗಾಗಿ ನಿರಂತರ ಓದಿವುದು, ಆಟ–ಚಟುವಟಿಗಳಲ್ಲಿ ತೊಡಗಿಸಿಕೊಳ್ಳದೇ ಇರುವುದು ಕೂಡ ಆತಂಕಕ್ಕೆ ಕಾರಣವಾಗುತ್ತದೆ. ಮೆದುಳಿಗೂ ಬ್ರೆಕ್‌ ಬೇಕು ಅನ್ನುವುದನ್ನು ಮರೆತು ಬಿಡುತ್ತಾರೆ. ಅತಿ ಒತ್ತಡವೇ ಆತಂಕ್ಕೆ ಕಾರಣವಾಗುತ್ತದೆ.

ವಿದ್ಯಾರ್ಥಿಗಳಲ್ಲಿರುವ ಆಂತಕ, ಒತ್ತಡವನ್ನು ದೂರ ಮಾಡುವುದು ಹೇಗೆ?
ಇದಕ್ಕೆ ಇರುವುದು ಒಂದೇ ಪರಿಹಾರ, ವಿದ್ಯಾರ್ಥಿಗಳು ಹೆಚ್ಚೆಚ್ಚು ಸ್ಪರ್ಧಾತ್ಮಕ ಮತ್ತು ಕಠಿಣ ಪರೀಕ್ಷೆಗಳಲ್ಲಿ ತೊಡಗಿಸಿಕೊಳ್ಳುವುದು. ಪೋಷಕರು ಮಕ್ಕಳಲ್ಲಿ ಧೈರ್ಯ ತುಂಬುವುದು. ಟೈಮ್‌ ಟೇಬಲ್‌ ಮಾಡಿಕೊಳ್ಳುವುದು ಮತ್ತು ಯೋಗಾ, ಧ್ಯಾನವನ್ನು ರೂಢಿಸಿಕೊಳ್ಳುವುದು. ಓದುವುದಕ್ಕೆ ಟೈಮ್‌ ಟೇಬಲ್‌ ಹಾಕಿಕೊಂಡಂತೆ ಊಟ, ನಿದ್ದೆಗೂ ಹಾಕಿಕೊಳ್ಳುವುದು.

ಪರೀಕ್ಷೆಗೆ ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳು:

  • ದೇಹ ಮತ್ತು ಮನಸ್ಸಿನ ಕಾರ್ಯಕ್ಷಮತೆ ಹೆಚ್ಚಿಸುವ ವೇಳಾಪಟ್ಟಿ ರಚಿಸಿ.
  • ಪ್ರತಿ 1–2 ಗಂಟೆಗೊಮ್ಮೆ 15 ರಿಂದ 20 ನಿಮಿಷಗಳ ಸಣ್ಣ ವಿರಾಮ ತೆಗೆದುಕೊಳ್ಳಿ.
  • ಆರೋಗ್ಯಕರ ಆಹಾರ ಸೇವಿಸಿ.
  • ಪ್ರತಿ ದಿನ ಎಂಟು ಗಂಟೆಗಳ ಕಾಲ ನಿದ್ರಿಸಿ.
  • ಪ್ರತಿದಿನ ವ್ಯಾಯಾಮ, ಯೋಗ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
  • ನಿಮ್ಮ ಪೋಷಕರು ಮತ್ತು ಶಿಕ್ಷಕರೊಂದಿಗೆ ಮಾತನಾಡಿ.
  • ಅತಿಯಾಗಿ ನಿರೀಕ್ಷೆ ಇಟ್ಟುಕೊಳ್ಳಬೇಡಿ.

ಇದನ್ನೂ ಓದಿ: Hero Maestro XOOM : 68,599 ರೂ. ಗಳಿಗೆ ಮೆಸ್ಟ್ರೋ XOOM ಲಾಂಚ್‌ ಮಾಡಿದ ಹೀರೋ

ಇದನ್ನೂ ಓದಿ: Samsung New Phones : ಫೆಬ್ರವರಿ 1ಕ್ಕೆ ಬಿಡುಗಡೆಯಾಗಲಿದೆ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಸರಣಿ ಸ್ಮಾರ್ಟ್‌ಫೋನ್‌ಗಳು

(Tips For Students, the mental health of students while preparing for exams)

RELATED ARTICLES

Most Popular