ಸೋಮವಾರ, ಏಪ್ರಿಲ್ 28, 2025
HomeeducationUKG student fail case: ಆಕ್ರೋಶಕ್ಕೆ ಮಣಿದ ಶಿಕ್ಷಣ ಸಂಸ್ಥೆ: ಫೇಲ್‌ ಆಗಿದ್ದ ಯುಕೆಜಿ ವಿದ್ಯಾರ್ಥಿ...

UKG student fail case: ಆಕ್ರೋಶಕ್ಕೆ ಮಣಿದ ಶಿಕ್ಷಣ ಸಂಸ್ಥೆ: ಫೇಲ್‌ ಆಗಿದ್ದ ಯುಕೆಜಿ ವಿದ್ಯಾರ್ಥಿ ಪಾಸ್‌

- Advertisement -

ಬೆಂಗಳೂರು: (UKG student fail case) ಪೋಷಕರು, ರಾಜಕಾರಣಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಸೆಂಟ್‌ ಜೋಸೆಫ್‌ ಚಾಮಿನೇಡ್‌ ಅಕಾಡೆಮಿ ಸಂಸ್ಥೆಯು ಈ ಹಿಂದೆ ಫೇಲ್‌ ಮಾಡಿದ್ದ ಯುಕೆಜಿ ವಿದ್ಯಾರ್ಥಿಯನ್ನು ಕೊನೆಗೂ ಪಾಸ್‌ ಮಾಡಿದೆ.

ಯುಕೆಜಿಯಲ್ಲಿ ಓದುತ್ತಿದ್ದ ಬಿ.ನಂದಿನಿ ಎಂಬ ಪುಟ್ಟ ಮಗುವನ್ನು ಶಿಕ್ಷಣ ಸಂಸ್ಥೆ ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಮಾಡಿದೆ. ಮಗು ರೈಮ್ಸ್ ಹೇಳೋದರಲ್ಲಿ ನೀರಿಕ್ಷಿತ ಮಟ್ಟದಲ್ಲಿ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಫೇಲ್ ಮಾಡಿರೋದಾಗಿ ಶಿಕ್ಷಣ ಸಂಸ್ಥೆ ತನ್ನ ಮಾರ್ಕ್ಸ್ ಕಾರ್ಡ್ ನಲ್ಲಿ ಹೇಳಕೊಂಡಿತ್ತು.ಇದಕ್ಕೆ ಬಿ.ನಂದಿನಿ ಪೋಷಕರಾದ ಮನೋಜ್ ಬಾದಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಲೆಯನ್ನು ಸಂಪರ್ಕಿಸಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಸ್ಪಷ್ಟ ವಿವರಣೆ ನೀಡುವಲ್ಲಿ ವಿಫಲವಾಗಿದ್ದು, ಫೇಲ್ ಆದರೆ ಮುಂದೇ ಮಗುವಿನ ಶಿಕ್ಷಣದಲ್ಲಿ ಗುಣಮಟ್ಟ ತರಲು ಸಾಧ್ಯವಾಗುತ್ತದೆ ಎಂದು ತೇಪೆ ಸಾರಿಸುವ ಕೆಲಸ ಮಾಡಿದೆ ಎನ್ನಲಾಗಿತ್ತು.

ಈ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಮಾಜಿ ಶಿಕ್ಷಣ ಸಚಿವ ಹಾಗೂ ಹಾಲಿ ಶಾಸಕ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಶಾಲೆಗೆ ಹೃದಯ ಮತ್ತು ಬುದ್ಧಿ ಎರಡೂ ಇಲ್ಲ ಎಂಬರ್ಥದಲ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಯುಕೆಜಿ ಮಗುವನ್ನು ಫೇಲ್ ಮಾಡಿದ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿತ್ತು.ತಮ್ಮ ಶಾಲೆಯ ಫಲಿತಾಂಶ ದೊಡ್ಡ ಮಟ್ಟದಲ್ಲಿ ವಿವಾದವಾಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಂಸ್ಥೆ ಪ್ರಿನ್ಸಿಪಾಲ್ ರು ಅದು ಸಿಸ್ಟಮ್ ಎಂಟ್ರಿಯಲ್ಲಿ ಉಂಟಾದ ಸಮಸ್ಯೆ. ಮಗು ಫೇಲ್ ಆಗಿಲ್ಲ ಎಂದು ಸಮಜಾಯಿಸಿ ನೀಡುವ ಪ್ರಯತ್ನ ಮಾಡಿದ್ದರು.

ಇದಕ್ಕೆ ಪೋಷಕರು ಹಾಗೂ ರಾಜಕಾರಣಿಗಳು ಇನ್ನಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು.ಈ ಹಿನ್ನಲೆಯಲ್ಲಿ ಸೇಂಟ್‌ ಜೋಸೆಫ್‌ ಚಾಮಿನೆಡ್‌ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯುಕೆಜಿ ವಿದ್ಯಾರ್ಥಿಯ ಪೋಷಕರಾದ ಮನೋಜ್‌ ಬಾದಲ್‌ ಅವರ ಆಕ್ರೋಶಕ್ಕೆ ಮಣಿದು ಶಾಲೆಯು ಅಂತಿಮವಾಗಿ ಫಲಿತಾಂಶವನ್ನು ಪರಿಷ್ಕರಿಸಿದ್ದು, ಕೊನೆಗೂ ಆಕೆಯ ರಿಪೋರ್ಟ್‌ ಕಾರ್ಡ್‌ ನಿಂದ ಫೇಲ್‌ ಎಂಬ ಪದವನ್ನು ತೆಗೆದುಹಾಕಿದೆ.

ಇದನ್ನೂ ಓದಿ : ರಾಜ್ಯದ ವಸತಿ ಶಾಲೆಯಗಳಲ್ಲಿ ಪಿಯುಸಿ ವರೆಗೆ ಶಿಕ್ಷಣ : ಕೋಟ ಶ್ರೀನಿವಾಸ ಪೂಜಾರಿ

ಇದನ್ನೂ ಓದಿ : RTE application: ಪೋಷಕರಿಗೆ ಮಹತ್ವದ ಮಾಹಿತಿ: ಆರ್‌ಟಿಇ ಸೀಟಿಗಾಗಿ ಅರ್ಜಿ ಸಲ್ಲಿಕೆ ಅರಂಭ: ಇಲ್ಲಿದೆ ಪೂರ್ಣ ಮಾಹಿತಿ

UKG student fail case: Education institution infuriated: UKG student pass failed

RELATED ARTICLES

Most Popular