Wild elephant attack: ದಕ್ಷಿಣ ಕನ್ನಡ: ಕಾಡಾನೆ ದಾಳಿಗೆ ಇಬ್ಬರು ಬಲಿ

ಮಂಗಳೂರು: (Wild elephant attack) ರಾಜ್ಯದಲ್ಲಿ ದಿನೇ ದಿನೇ ಕಾಡಾನೆ ದಾಳಿಗಳು ಹೆಚ್ಚಾಗುತ್ತಿದ್ದು, ಮಾನವ ಹಾಗೂ ವನ್ಯ ಜೀವಿಗಳ ನಡುವೆ ಸಂಘರ್ಷಗಳು ಹೆಚ್ಚುತ್ತಿವೆ. ಇದರಿಂದಾಗಿ ಅನೇಕ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದೀಗ ದಕ್ಷಿಣ ಕನ್ನಡದಲ್ಲೂ ಕೂಡ ಕಾಡಾನೆ ದಾಳಿಗೆ ಬೆಳ್ಳಂಬೆಳಿಗ್ಗೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ.

ದಕ್ಷಿಣ ಕನ್ನಡದ ಕಡಬ ತಾಲೂಕಿನ ಮೀನಾಡಿ ಬಳಿಯಲ್ಲಿ ಕಾಡಾನೆ ದಾಳಿ ನಡೆಸಿದ್ದು, ಯುವತಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ರಂಜಿತಾ(21 ವರ್ಷ) ಹಾಗೂ ರಮೇಶ್‌ ರೈ(60 ವರ್ಷ) ಕಾಡಾನೆ ದಾಳಿಗೆ ಬಲಿಯಾದವರು. ರಂಜಿತ ಎನ್ನುವ ಯುವತಿ ಹಾಲು ಸಹಕಾರ ಸಂಘದ ಸಿಬ್ಬಂದಿಯಾಗಿದ್ದು, ಮನೆಯಿಂದ ಸೊಸೈಟಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಇದೇ ವೇಳೆ ರಮೇಶ್‌ ಮೇಲೂ ಕಾಡಾನೆ ದಾಳಿ ನಡೆಸಿದೆ.

ರಮೇಶ್‌ ರೈ ಕಾಡಾನೆ ದಾಳಿಗೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರಂಜಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇದೇ ರೀತಿಯಾಗಿ ಆನೆ, ಚಿರತೆ ಹಾಗೂ ಹುಲಿಗಳ ದಾಳಿಯಿಂದಾಗಿ ರಾಜ್ಯ ಈಗಾಗಲೇ ತತ್ತರಿಸಿ ಹೋಗಿದೆ. ರಾಜ್ಯದ ಹಲವು ಕಡೆ ಜರು ಈ ರೀತಿಯ ದಾಳಿಗೆ ಒಳಗಾಗಿ ಹಲವರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ಇನ್ನೂ ಹಲವರು ಪ್ರಾಣವಿದ್ದರೂ ಓಡಾಡಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಘಟನೆ ರಾಜ್ಯ ಸರಕಾರ, ಅರಣ್ಯ ಇಲಾಖೆ ಹಾಗೂ ಸ್ಥಳೀಯರನ್ನು ಇನ್ನಷ್ಟು ಆತಂಕಕ್ಕೆ ತಳ್ಳುತ್ತಿದೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದರು ಕೂಡ ಏನು ಮಾಡಲಾಗದೇ ಅರಣ್ಯ ಇಲಾಖೆಯವರು ಕೈಕಟ್ಟಿ ಕುಳಿತಿದ್ದಾರೆ.

ಪದೇ ಪದೇ ಈ ರೀತಿಯ ಘಟನೆಗಳಿಂದಾಗಿ ಜನರು ತತ್ತರಿಸಿ ಹೋಗಿದ್ದು, ಮರುಕಳಿಸುತ್ತಿರುವ ಸಾವು ನೋವುಗಳಿಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಡಬ ಭಾಗದಲ್ಲಿ ನಿರಂತರ ಆನೆ ಹಾವಳಿ ಆಗುತ್ತಿದ್ದರೂ ಅರಣ್ಯ ಇಲಾಖೆಯವರು ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸ್ಥಳಕ್ಕೆ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಬರದೇ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : Entry of the new Brahmaratha: ನೀಲಾವರದ ಮಹಿಷಮರ್ಧಿನಿ ಸನ್ನಿಧಾನಕ್ಕೆ ನೂತನ ಬ್ರಹ್ಮರಥದ ಪುರಪ್ರವೇಶ

Wild elephant attack: Dakshina Kannada: Two victims of wild elephant attack

Comments are closed.