uttara pradesha shruti sharma : ಕೇಂದ್ರ ಲೋಕಸೇವಾ ಆಯೋಗವು ಬಿಡುಗಡೆ ಮಾಡಿರುವ ಯುಪಿಎಸ್ಸಿ ಅಂತಿಮ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತರ ಪ್ರದೇಶ ಮೂಲದ ಶ್ರುತಿ ಶರ್ಮಾ ಎಂಬವರು ಅಖಿಲ ಭಾರತ ಪ್ರಥಮ ರ್ಯಾಂಕ್ನ್ನು ಸಂಪಾದಿಸಿದ್ದಾರೆ. ದೇಶದ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿಯಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ಶ್ರುತಿ ಶರ್ಮಾ ಮೂಲತಃ ಉತ್ತರ ಪ್ರದೇಶದ ಬಿಜ್ನೋರ್ ಗ್ರಾಮದವರಾಗಿದ್ದಾರೆ.
ಶ್ರುತಿ ಶರ್ಮಾ ದೆಹಲಿ ಯುನಿವರ್ಸಿಟಿಗೆ ಸೇರಿದ ಸೆಂಟ್ ಸ್ಟೀಫನ್ಸ್ ಕಾಲೇಜು ಹಾಗೂ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಇತಿಹಾಸ ವಿಷಯದಲ್ಲಿ ಪದವಿ ಪಡೆದಿರುವ ಶ್ರುತಿ ಯುಪಿಎಸ್ಸಿ ಸಿಎಸ್ಇ ಮೇನ್ಸ್ನಲ್ಲಿಯೂ ಇತಿಹಾಸ ವಿಷಯವನ್ನೇ ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ರೆಸಿಡೆನ್ಸಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ ಶ್ರುತಿ ಶರ್ಮಾ ನಾಗರಿಕ ಸೇವಾ ಪರೀಕ್ಷೆಗಳಿಗೆ ಕೋಚಿಂಗ್ ಪಡೆದಿದ್ದಾರೆ.
ಉತ್ತರ ಪ್ರದೇಶದ ಬಿಜ್ನೋರ್ ಗ್ರಾಮದವರಾದ ಶ್ರುತಿ ಶರ್ಮಾ ಶಿಕ್ಷಣಕ್ಕಾಗಿ ದೆಹಲಿಯಲ್ಲಿ ನೆಲೆಸಿದ್ದಾರೆ. ದೆಹಲಿಯ ಜವಹಾರ ನೆಹರೂ ವಿಶ್ವ ವಿದ್ಯಾಲಯದಲ್ಲಿ ಇತಿಹಾಸ ವಿದ್ಯಾರ್ಥಿನಿಯಾಗಿದ್ದ ಇವರು ನಾಗರಿಕ ಸೇವಾ ಪರೀಕ್ಷೆಗಾಗಿ ಕಠಿಣ ಪರಿಶ್ರಮ ಹಾಕಿದ್ದರು. ದೆಹಲಿಯಲ್ಲಿ ಪದವಿ ಪೂರೈಸಿರುವ ಶ್ರುತಿ ಶರ್ಮಾ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಲ್ ಇಂಡಿಯಾ ಮೊದಲ ರ್ಯಾಂಕರ್ ಆಗಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ ಬಳಿಕ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರುತಿ ಶರ್ಮಾ, ಇಂತಹ ಸವಾಲುಗಳನ್ನು ಸ್ವೀಕರಿಸುವ ಮುನ್ನ ನಮ್ಮ ಮೇಲೆ ನಂಬಿಕೆ, ಆಸಕ್ತಿ ಹಾಗೂ ಪ್ರೀತಿ ಇರಬೇಕು. ನಾಗರಿಕ ಸೇವೆ ಪರೀಕ್ಷೆಯನ್ನು ಎದುರಿಸಲು ಕಠಿಣ ಪರಿಶ್ರಮ ಹಾಗೂ ತಾಳ್ಮೆ ಅತ್ಯಗತ್ಯ. ಈ ಎಲ್ಲ ಮೌಲ್ಯಗಳು ನಿಮ್ಮೊಂದಿಗೆ ಇದ್ದಲ್ಲಿ ಮಾತ್ರ ನಾವು ಇಂತಹ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಸಾಧ್ಯ. ನಾನು ಇಂತಹ ಕಠಿಣ ಪರೀಕ್ಷೆಯಲ್ಲಿ ನಾನು ಪ್ರಥಮ ಸ್ಥಾನ ಪಡೆಯುತ್ತೇನೆ ಎಂದು ಊಹಿಸಿಯೂ ಇರಲಿಲ್ಲ ಎಂದು ಹೇಳಿದ್ದಾರೆ.
ಈ ಬಾರಿ ಮತ್ತೊಂದು ವಿಶೇಷ ಏನೆಂದರೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಮಹಿಳಾ ಮಣಿಯರೇ ಬಾಚಿಕೊಂಡಿದ್ದಾರೆ. ಅಂಕಿತಾ ಅಗರ್ವಾಲ್ ಹಾಗೂ ಗಾಮಿನಿ ಸಿಂಗ್ಲಾ ಕ್ರಮವಾಗಿ ಎರಡು ಹಾಗೂ ಮೂರನೇ ಅಂಕವನ್ನು ಸಂಪಾದಿಸಿದ್ದಾರೆ. ನಾಲ್ಕನೇ ಸ್ಥಾನವನ್ನು ಐಶ್ವರ್ಯಾ ವರ್ಮಾ ಎಂಬವರು ಪಡೆದುಕೊಂಡಿದ್ದಾರೆ.
UPSC CSE ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 10, 2021 ರಂದು ನಡೆಸಲಾಯಿತು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ಅಕ್ಟೋಬರ್ 29 ರಂದು ಬಿಡುಗಡೆ ಮಾಡಲಾಯಿತು. ಮುಖ್ಯ ಪರೀಕ್ಷೆಯನ್ನು ಜನವರಿ 7 ರಿಂದ 16, 2022 ರವರೆಗೆ ನಡೆಸಲಾಯಿತು ಮತ್ತು ಫಲಿತಾಂಶಗಳನ್ನು ಮಾರ್ಚ್ 17, 2022 ರಂದು ಘೋಷಿಸಲಾಯಿತು. ಸಂದರ್ಶನವು ಕೊನೆಯ ಸುತ್ತಿನ ಪರೀಕ್ಷೆಯಾಗಿದ್ದು, ಏಪ್ರಿಲ್ 5 ರಂದು ಪ್ರಾರಂಭವಾಯಿತು ಮತ್ತು ಮೇ 26 ರಂದು ಮುಕ್ತಾಯವಾಯಿತು.ಅಭ್ಯರ್ಥಿಗಳು upsc.gov.inನಲ್ಲಿ ತಮ್ಮ ಫಲಿತಾಂಶ ವೀಕ್ಷಿಸಬಹುದಾಗಿದೆ.
ಇದನ್ನು ಓದಿ : acid attack victim : ಆ್ಯಸಿಡ್ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್
ಇದನ್ನೂ ಓದಿ : upsc result 2021 : ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಗಂಗಾವತಿ ಮೂಲದ ವೈದ್ಯೆ
uttara pradesha shruti sharma a history student tops in upsc cse