Bride Refuses To Marry Groom : ಕಲ್ಯಾಣ ಮಂಟಪಕ್ಕೆ ಬಾರದ ಫೋಟೋಗ್ರಾಫರ್​: ಮದುವೆ ರದ್ದುಗೊಳಿಸಿದ ವಧು

Bride Refuses To Marry Groom  : ಈಗಂತೂ ಮದುವೆ ಮನೆಯಲ್ಲಿ ಪುರೋಹಿತರು ಇಲ್ಲದೇ ಇದ್ದರೂ ನಡೆಯುತ್ತೆ. ಆದರೆ ಫೋಟೋಗ್ರಾಫರ್​ ಇಲ್ಲದೇ ಸಾಧ್ಯವಿಲ್ಲ ಎಂಬತಹ ವಾತಾವರಣ ನಿರ್ಮಾಣವಾಗಿದೆ. ಜನರು ಸೋಶಿಯಲ್​ ಮೀಡಿಯಾ ಕಡೆಗೆ ಹೆಚ್ಚು ವಾಲುತ್ತಿರೋದ್ರಿಂದ ಫೋಟೋ ಹಾಗೂ ವಿಡಿಯೋಗಳ ಕ್ರೇಜ್​ ತುಸು ಹೆಚ್ಚಾಗಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಂತೂ ಮದುವೆಯ ವಿಚಾರದಲ್ಲಿ ಹೆಣ್ಮಕ್ಕಳು ಸಖತ್​​ ರಫ್​ & ಟಫ್​ ಆಗಿರುವಂತೆ ಕಾಣ್ತಿದ್ದಾರೆ. ಏಕೆಂದರೆ ಇಲ್ಲಿನ ವಧುವೊಬ್ಬಳು ವರ ಕಲ್ಯಾಣ ಮಂಟಪಕ್ಕೆ ಫೋಟೋಗ್ರಾಫರ್​ ಕರೆಸಲು ಮರೆತಿದ್ದಾನೆ ಎಂಬ ಕಾರಣಕ್ಕೆ ಮದುವೆಯನ್ನೇ ರದ್ದು ಮಾಡಿಸಿದ್ದಾಳೆ. ಕಾನ್ಪುರ ದೆಹಾತ್​ ಜಿಲ್ಲೆಯ ಗ್ರಾಮವೊಂದರಲ್ಲಿ ಇಂತಹದ್ದೊಂದು ಘಟನೆ ವರದಿಯಾಗಿದೆ.

ಕಾನ್ಪುರ ದೇಹತ್‌ನ ಮಂಗಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಾಸಿಸುವ ರೈತನ ಮಗಳ ಮದುವೆಯನ್ನು ಭೋಗ್ನಿಪುರದಲ್ಲಿ ವಾಸಿಸುವ ವ್ಯಕ್ತಿಯೊಂದಿಗೆ ನಿಶ್ಚಯಿಸಲಾಗಿತ್ತು.

‘ಬರಾತ್’ (ಮದುವೆ ಮೆರವಣಿಗೆ) ಬಂದಾಗ ‘ಜೈಮಾಲ್’ ಸಮಾರಂಭಕ್ಕಾಗಿ ವೇದಿಕೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು, ವರನ ಕಡೆಯವರನ್ನು ವಧುವಿನ ಕುಟುಂಬದವರು ಸ್ವಾಗತಿಸಿದರು ಮತ್ತು ವಧು-ವರರು ‘ಮಾಲೆ ಬದಲಾಯಿಸಿಕೊಳ್ಳುವ’ ಸಮಾರಂಭಕ್ಕಾಗಿ ವೇದಿಕೆಯನ್ನು ತಲುಪಿದರು.


ಆದರೆ ಇಂತಹದ್ದೊಂದು ಅಮೂಲ್ಯಕ್ಷಣವನ್ನು ಸೆರೆ ಹಿಡಿಯಲು ಫೋಟೋಗ್ರಾಫರ್​ ಕಲ್ಯಾಣ ಮಂಟಪಕ್ಕೆ ಆಗಮಿಸಿಲ್ಲ ಎಂದು ತಿಳಿದುಕೊಳ್ಳಲು ವಧುವಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಇದರಿಂದ ಕೋಪಗೊಂಡ ವಧುವು ವೇದಿಕೆಯಿಂದ ಇಳಿದು ನಾನು ಈ ಮದುವೆ ಆಗಲಾರೆ ಎಂದಿದ್ದಾಳೆ. ,ಮಾತ್ರವಲ್ಲದೇ ತನ್ನ ಮನೆಗೆ ತೆರಳಿದ್ದಾಳೆ.


ವಧುವನ್ನು ಸಂತೈಸಲು, ಸಮಾಧಾನ ಪಡೆಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಯ್ತು. ಆದರೆ ವಧುವು ಇಂದು ನಮ್ಮ ಮದುವೆಯ ಬಗ್ಗೆಯೇ ತಲೆಕೆಡಿಸಿಕೊಳ್ಳದ ವ್ಯಕ್ತಿಯು ಮುಂದೆ ನನ್ನನ್ನು ಹೇಗೆ ನೋಡಿಕೊಳ್ತಾನೆ ಎಂದು ಪ್ರಶ್ನೆ ಮಾಡಿದ್ದಾಳೆ ಎನ್ನಲಾಗಿದೆ.


ಕುಟುಂಬದ ಹಿರಿಯರು ವಧುವನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಹ ಅದು ವ್ಯರ್ಥವಾಗಿದೆ. ಕೊನೆಗೆ ಈ ವಿಚಾರ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಇಲ್ಲಿ ಪರಸ್ಪರ ಒಪ್ಪಂದ ಮಾಡಿಕೊಂಡ ವಧು ಹಾಗೂ ವರನ ಕಡೆಯವರು ಮದುವೆ ಸಂಬಂಧ ವಿನಿಮಯ ಮಾಡಿಕೊಂಡಿದ್ದ ಬೆಲೆ ಬಾಳುವ ವಸ್ತುಗಳನ್ನು ವಾಪಸ್​ ನೀಡುವುದಾಗಿ ಒಪ್ಪಿಕೊಂಡಿದ್ದಾರೆ.

ಇದನ್ನು ಓದಿ : upsc result 2021 : ಯುಪಿಎಸ್​ಸಿ ಪರೀಕ್ಷೆಯಲ್ಲಿ ರ್ಯಾಂಕ್​ ಪಡೆದ ಗಂಗಾವತಿ ಮೂಲದ ವೈದ್ಯೆ

ಇದನ್ನೂ ಓದಿ : ನಿಮ್ಮ ವೆಬ್ಸೈಟ್ ಗೆ ಟ್ರಾಫಿಕ್ ಹೆಚ್ಚಿಸಲು ಇದೆ ಸುಲಭ ವಿಧಾನ ….!

UP Bride Refuses To Marry Groom After He Fails To Arrange Photographer

Comments are closed.