ಬ್ರಹ್ಮಾವರ : ಗ್ರಾಮೀಣ ಪ್ರದೇಶದಲ್ಲಿ ಅರಳಿದ ಹೂ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಎ. ಅಮೃತ ಪೂಜಾರಿ ‘ ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್’ (WAKO India Kickboxing Federation) ನವರು ದೆಹಲಿಯಲ್ಲಿ ಆಯೋಜಿಸಿರುವ 2nd WAKO ಇಂಡಿಯನ್ ಓಪನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಕ್ರಿಯೇಟಿವ್ ಫಾರ್ಮ್ಸ್ ವಿಥ್ ವೆಪನ್ ನಲ್ಲಿ ಗೋಲ್ಡ್ ಮೆಡಲ್ ( ಪ್ರಥಮ), ಮತ್ತು ಮ್ಯೂಸಿಕಲ್ ಫಾರ್ಮ್ಸ್ ವಿಥ್ ವೆಪನ್ ನಲ್ಲಿ Bronze ಮೆಡಲ್ (ತೃತೀಯ ಬಹುಮಾನ ) ಪಡೆದು ಕೊಂಡಿರುತ್ತಾರೆ.
ದೆಹಲಿಯಲ್ಲಿ ನಡೆದ ಈ ಟೂರ್ನಮೆಂಟಲ್ಲಿ ಪ್ರಪಂಚದಾದ್ಯಂತ 7 ದೇಶ ಗಳು ಭಾವಹಿಸಿದ್ದು, ಕರ್ನಾಟಕದಿಂದ 23 ಜನರನ್ನೊಳಗೊಂಡ ಕಿಕ್ ಬಾಕ್ಸರ್‌ಗಳು ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ನಮ್ಮ ಗ್ರಾಮೀಣ ಪ್ರದೇಶದ ಪ್ರತಿಭೆಯಾಗಿರುವ ಉಡುಪಿ ಜಿಲ್ಲೆಯ ಬಾರಕೂರಿನ ಎ. ಅಮೃತ ಪೂಜಾರಿರವರು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಿ ಗೋಲ್ಡ್ ಮೆಡಲ್ ಪಡೆದಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಆಗಿದೆ.
ಅಚ್ಚುತ ಪೂಜಾರಿ ಮತ್ತು ಜ್ಯೋತಿರವರ ಪುತ್ರಿ ಎ.ಅಮೃತ. ಇವರು ಎಸ್. ಎಮ್. ಎಸ್. ಕಾಲೇಜ್‌ನ ದ್ವಿತೀಯ BCAಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು 12 ವರ್ಷಗಳಿಂದ ಕರಾಟೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾಲಯಲ್ಲಿ ನಡೆಸಲಾದ ಅಲ್ ಇಂಡಿಯಾ ಇಂಟೆರ್ ನ್ಯಾಷನಲ್ ಕಿಕ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯನ್ನು ಪ್ರತಿನಿಧಿಸಿದ್ದಾರೆ. 20 ಬಾರಿ ಜಿಲ್ಲಾ ಮಟ್ಟದ ಓಪನ್ ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ಅದರಲ್ಲಿ 9 ಬಾರಿ ಪ್ರಥಮ, 4 ಬಾರಿ ದ್ವಿತೀಯ ಹಾಗೂ 7 ಬಾರಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಹಾಗೆಯೇ 11 ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾಗವಹಿಸಿ 7 ಬಾರಿ ಪ್ರಥಮ, 1 ಬಾರಿ ದ್ವಿತೀಯ ಹಾಗೂ 3 ಬಾರಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಇಂದ ನಡೆಸಿದ ಕರಾಟೆ ಪಂದ್ಯದಲ್ಲಿಯೂ 8 ಬಾರಿ ಭಾಗವಹಿಸಿ 3 ಬಾರಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 1 ಬಾರಿ ಜಿಲ್ಲಾಮಟ್ಟದಿಂದ ರಾಜ್ಯ ಮಟ್ಟಕ್ಕೆ ಕೂಡ ಆಯ್ಕೆ ಆಗಿದ್ದಾರೆ. ಈಗ ತನ್ನ ವಿದ್ಯಾಭ್ಯಾಸದೊಂದಿಗೆ ಚಾಂತಾರು “ಗದ್ದುಗೆ ಅಮ್ಮನವರ ದೇವಸ್ಥಾನ”ದಲ್ಲಿ ಕರಾಟೆ ತರಗತಿಯನ್ನು ಮಾಡುತಿದ್ದಾರೆ.
ಎ. ಅಮೃತಾ ಕಳೆದ 2 ವರ್ಷಗಳಿಂದ ಕಿಕ್ ಬಾಕ್ಸಿಂಗ್ ಅಭ್ಯಾಸವನ್ನು ಮಾಡುತ್ತಿದ್ದಾರೆ. 1ನೇ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್-2021 ಸಬ್ ಜೂನಿಯರ್. ಜೂನಿಯರ್ ಮತ್ತು ಕೆಡೆಟ್ (1st State level kickboxing championship-2021 sub-junior. Junior & cadet) ನಲ್ಲಿ ಭಾಗವಹಿಸಿ ಕ್ರಿಯೇಟಿವ್ ಫಾರ್ಮ್ ವಿದ್ ವೆಪನ್ ಟೀಮ್, ಕ್ರಿಯೇಟಿವ್ ಫಾರ್ಮ್ ವಿದ್ ವೆಪಾನ್ನಲ್ಲಿ ಪ್ರಥಮ ಹಾಗೂ ಮ್ಯೂಸಿಕಲ್ ಫಾರ್ಮ್ ವಿದ್ ವೆಪಾನ್ನಲ್ಲಿ ದ್ವಿತೀಯ ಸ್ಥಾನ ಗಳಿಸಿ ನ್ಯಾಷನಲ್‌ಗೆ ಆಯ್ಕೆ ಆಗಿದ್ದಾರೆ . ನ್ಯಾಷನಲ್ ನಲ್ಲೂ 2 ಬಾರಿ ಪ್ರಥಮ ಸ್ಥಾನಗಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ 1 ಬಾರಿ ಪ್ರಥಮ ಹಾಗೂ 1 ಬಾರಿ ತೃತೀಯ ಸ್ಥಾನಗಳಿಸಿದ್ದಾರೆ.
ಇದನ್ನೂ ಓದಿ : Lt.Soma Bangera Govt High School Kodi Kanyana : ರಜತ ಮಹೋತ್ಸವದ ಸಂಭ್ರಮದಲ್ಲಿ ಕೋಡಿ ಕನ್ಯಾನದ ಸೋಮ ಬಂಗೇರ ಸರಕಾರಿ ಪ್ರೌಢಶಾಲೆ
ಇವರು ರೆಂಶಿ ವಾಮನ ಪಾಲನ್ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಂತಹ ಅಪ್ರತಿಮ ಪ್ರತಿಭೆಗೆ ಯಾರಾದರೂ ದಾನಿಗಳು( Sponsor)ಜೊತೆಯಾಗಿ ನಿಂತರೆ ನಮ್ಮ ಗ್ರಾಮೀಣ ಪ್ರದೇಶದ ಪ್ರತಿಭೆ ಕಾಮನ್ ವೆಲ್ತ್ ಗೇಮ್ಸ್ ಮತ್ತು ಒಲಂಪಿಕ್ ಪಂದ್ಯಾಟಕ್ಕೆ ಆಯ್ಕೆಯಾಗಿ ಭಾರತವನ್ನು ಪ್ರತಿನಿಧಿಸುವಲ್ಲಿ ಯಾವುದೇ ಸಂಶಯವಿಲ್ಲ.
WAKO India Kickboxing Federation : A. Amritha Pujari from Barkur who has achieved at the international level