Suicide bomb blast: ಕ್ವೆಟಾದಲ್ಲಿ ಆತ್ಮಹತ್ಯಾ ಬಾಂಬ್‌ ಸ್ಫೊಟ: ಪೊಲೀಸ್, ಮಗು ಸೇರಿದಂತೆ 3 ಮಂದಿ ಸಾವು

ಕ್ವೆಟಾ: (Suicide bomb blast) ಪೊಲೀಸ್ ಟ್ರಕ್‌ನಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಮಗು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ಬಲೂಚಿಸ್ತಾನ ಸಮೀಪದ ಕ್ವೆಟ್ಟಾದ ಬಲೇಲಿ ಪ್ರದೇಶದಲ್ಲಿ ಬುದವಾರ ನಡೆದಿದೆ. ಸ್ಫೋಟದಲ್ಲಿ 20 ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 24 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ವಾಹನದ ಬಳಿ ಸಂಭವಿಸಿದ ಸ್ಫೋಟದ (Suicide bomb blast) ನಂತರ ಚಲಿಸುತ್ತಿದ್ದ ಪೊಲೀಸ್ ಟ್ರಕ್ ಪಲ್ಟಿಯಾಗಿ ಕಂದಕಕ್ಕೆ ಬಿದ್ದಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಸ್ಫೋಟ ನಡೆದ ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು, ರಕ್ಷಣಾ ತಂಡ ಹಾಗೂ ಬಾಂಬ್‌ ನಿಷ್ಕ್ರೀಯ ದಳದವರು ಧಾವಿಸಿದ್ದು, ಸ್ಫೋಟಕ್ಕೆ 25 ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಅಂದಾಜಿಸಲಾಗಿದೆ.

ಘಟನೆ ನಡೆದ ಸ್ಥಳದಲ್ಲಿ ಆತ್ಮಹತ್ಯಾ ಬಾಂಬರ್ ನ ಅವಶೇಷಗಳು ದೊರೆತಿದ್ದು, ಕ್ವೆಟಾ ಡಿಐಜಿ ಗುಲಾಮ್‌ ಅಜ್ಫರ್‌ ಮಹೇಸರ್‌ ಅವರು ಇದು ಆತ್ಮಾಹುತಿ ಬಾಂಬ್‌ ಸ್ಫೋಟ ಎಂದು ಮಾಧ್ಯಮಗಳಿಗೆ ದೃಡಪಡಿಸಿದ್ದಾರೆ. ಡಾನ್ ಪ್ರಕಾರ, ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಉಗ್ರಗಾಮಿ ಗುಂಪು ಸರ್ಕಾರದೊಂದಿಗೆ ತನ್ನ ಕದನ ವಿರಾಮವನ್ನು ಹಿಂತೆಗೆದುಕೊಂಡ ಒಂದು ದಿನದ ನಂತರದಲ್ಲಿ ಈ ಸ್ಫೋಟ ಸಂಭವಿಸಿದೆ ಮತ್ತು ದೇಶಾದ್ಯಂತ ದಾಳಿಗಳನ್ನು ನಡೆಸುವಂತೆ ತನ್ನ ಯೋಧರಲ್ಲಿ ತಿಳಿಸಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ : Murder case: ಪ್ರೇಮಿಗಳ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಇದನ್ನೂ ಓದಿ : Fire accident-6 died: ಭೀಕರ ಅಗ್ನಿ ದುರಂತ: 4 ಮಕ್ಕಳು ಸೇರಿ 6 ಮಂದಿ ಸಜೀವ ದಹನ

ಪೊಲೀಸ್‌ ಅಧಿಕಾರಿಗಳ ಪ್ರಕಾರ, ಪೊಲೀಸ್ ಟ್ರಕ್ ಸೇರಿದಂತೆ ಮೂರು ವಾಹನಗಳು ಮತ್ತು ಹತ್ತಿರದ ಎರಡು ಕಾರುಗಳು ಸ್ಫೋಟದಲ್ಲಿ ಹಾನಿಗೊಳಗಾಗಿವೆ. ಸ್ಫೋಟ ನಡೆದ ಸ್ಥಳವನ್ನು ಸುತ್ತುವರಿಯಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

(Suicide bomb blast) At least three people, including a policeman and a child, were killed in a suicide blast in a police truck in Balely area of Quetta, near Balochistan, Pakistan. At least 24 people, including 20 police officers, were injured in the blast, a report said.

Comments are closed.