ಕರ್ನಾಟಕದ ಮುಂದಿನ ಸಿಎಂ ಹೆಸರು ಘೋಷಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಹತ್ತು ದಿನಗಳು ಬಾಕಿ ಉಳಿದಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ್ರೆ ಕರ್ನಾಟಕದ ಮುಖ್ಯಮಂತ್ರಿ ಯಾರಾಗುತ್ತಾರೆ ಅನ್ನೋ ಕುತೂಹಲ ಸೃಷ್ಟಿಯಾಗಿದೆ. ಈ ನಡುವಲ್ಲೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (BJP National President JP Nadda) ಮುಂದಿನ ಮುಖ್ಯಮಂತ್ರಿ ಹೆಸರನ್ನು ರಿವೀಲ್‌ ಮಾಡಿದ್ದಾರೆ. ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ ಬಸವರಾಜ್‌ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಖುದ್ದು ನಡ್ಡಾ ಘೋಷಿಸಿದ್ದಾರೆ.

ಮಾಧ್ಯಮವದರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಾವು ಗೆಲ್ಲುವುದು ಖಚಿತ. ರಾಜ್ಯದಲ್ಲಿ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಬಸವರಾಜ್‌ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಡ್ಡಾ ಹೇಳಿದ್ದಾರೆ.

ಮುಂದಿನ ಮುಖ್ಯಮಂತ್ರಿ ಘೋಷಣೆ ಕುರಿತು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಜೆಪಿ ನಡ್ಡಾ ಹೇಳಿಕೆ ಮಹತ್ವ ಪಡೆದುಕೊಂಡಿದೆ. ನಡ್ಡಾ ಅವರು ಬಸವರಾಜ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇನ್ನು ಉಡುಪಿ ಬಳಿಯ ಹಿರಿಯಡ್ಕ ನಿವಾಸಿ ಸದಾನಂದ ನಾಯ್ಕ್ ಅವರನ್ನು ಮೋದಿ ಹಿಂಬಾಲಿಸುತ್ತಿದ್ದಂತೆ ಸೆಲ್ಫಿಗಾಗಿ ನಿಂತರು. ಅವರು ಬಿಜೆಪಿ ಪಕ್ಷದ ಅಭಿಮಾನಿಯಾಗಿದ್ದು, ಮೋದಿಯಂತೆ ಕಾಣುತ್ತಿದ್ದಾರೆ. ಜೆಪಿ ನಡ್ಡಾ ರೋಡ್ ಶೋಗೂ ಮುನ್ನ ಜೂನಿಯರ್ ಮೋದಿ ರೋಡ್ ಶೋ ನಡೆಸಿ ವಾತಾವರಣ ಸೃಷ್ಟಿಸಿದ್ದರು.

ಮೀಸಲಾತಿ ಸೌಲಭ್ಯ ಪಡೆಯುವವರು ಭಿಕ್ಷುಕರು, ಆದರೆ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಲಿಂಗಾಯತರು ಭಿಕ್ಷುಕರೇ ಎಂದು ಹಳೆಯ ಪಕ್ಷದ ನಾಯಕರು ಹೇಳುತ್ತಾರೆ. ಆದರೆ ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂ.ಎಸ್‌ ಪರ ರೋಡ್‌ಶೋನಲ್ಲಿ ಮಾತನಾಡಿದರು. ಶನಿವಾರ ಸಿರಗುಪ್ಪದಲ್ಲಿ ಸೋಮಲಿಂಗಪ್ಪ ಮಾತನಾಡಿ, ಸೋಮಲಿಂಗಪ್ಪ ಅವರು ಕ್ಷೇತ್ರವನ್ನು ಶೀಘ್ರ ಅಭಿವೃದ್ಧಿ ಪಡಿಸಿದ್ದು, ಸಿರಗುಪ್ಪದಲ್ಲಿ ಮಾಡಿದಂತೆ ತಾವೂ ಕೂಡ ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿ ಎಂದು ಹಾರೈಸಿದರು.

ಇದನ್ನೂ ಓದಿ : ಕಾಂಗ್ರೆಸ್‌ 6ನೇ ಗ್ಯಾರಂಟಿ : ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಬಂಪರ್ ಘೋಷಣೆ

ಇದನ್ನೂ ಓದಿ : Shivamogga live : ಶಿವಮೊಗ್ಗದಲ್ಲಿಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರೋಡ್‌ ಶೋ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಡಬಲ್ ಇಂಜಿನ್ ಸರಕಾರಕ್ಕೆ ಧನ್ಯವಾದಗಳು, ಕಿಸಾನ್ ಸಮ್ಮಾನ್ ಯೋಜನೆಯಿಂದ 54 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಅವರು ಹೇಳಿದರು. 224 ಸ್ಥಾನಗಳ ವಿಧಾನಸಭೆಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

BJP National President JP Nadda : BJP National President JP Nadda announced the name of the next CM of Karnataka

Comments are closed.