ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಎನ್‌ಪಿಎಸ್‌ ರದ್ದು, ಹಳೆ ಪಿಂಚಣಿ ಯೋಜನೆ ಜಾರಿ

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್‌ ತನ್ನ ಪ್ರನಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮುಖ್ಯವಾಗಿ ಸರಕಾರಿ ಉದ್ಯೋಗಿಗಳನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನು ಮಾಡಿದೆ. ಪ್ರಮುಖವಾಗಿ 2006ರಿಂದ ನೇಮಕವಾದ, ಪಿಂಚಣಿಗೆ ಅರ್ಹತೆ ಇರುವ ಎಲ್ಲಾ ಸರಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು (Congress Releases Poll Manifesto) ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲಾಗುವುದು ಎಂದು ಕಾಂಗ್ರೆಸ್‌ ಪಕ್ಷ ಘೋಷಣೆ ಮಾಡಿದೆ.

ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಸರಕಾರಿ ಹಾಗೂ ಅನುದಾನಿತ ಉದ್ಯೋಗಿಗಳು ಹಲವು ಸಮಯಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಸರಕಾರ ಇತರ ರಾಜ್ಯಗಳಲ್ಲಿ ಹಳೆ ಪಿಂಚಣಿ ಜಾರಿ ಮಾಡುವ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಆದರೆ ಸಂಪೂರ್ಣವಾಗಿ ಎನ್‌ಪಿಎಸ್‌ ರದ್ದು ಮಾಡಿಲ್ಲ. ಇದೀಗ ಕಾಂಗ್ರೆಸ್‌ ಸರಕಾರ ಚುನಾವಣಾ ಪ್ರನಾಳಿಕೆಯಲ್ಲಿ ಹಳೆ ಪಿಂಚಣಿ ಯೋಜನೆಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿದೆ.

2006 ರ ನಂತರ ನೇಮಕವಾದ ಸಿಬ್ಬಂಧಿಗಳನ್ನು ಹಳೆ ಪಿಂಚಣಿ ಯೋಜನೆಯಿಂದ ಕೈಬಿಟ್ಟು ಎನ್‌ಪಿಎಸ್‌ ಯೋಜನೆಯಡಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಈ ಕುರಿತು ಸರಕಾರಿ ಹಾಗೂ ಅನುದಾನಿತ ನೌಕರರು ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಸರಕಾರಗಳು ಎನ್‌ಪಿಎಸ್‌ ಜಾರಿಗೆ ಮುಂದಾಗಿರಲಿಲ್ಲ. ಆದ್ರೆ ಇದೀಗ ಭಾರತದ ಹಲವು ರಾಜ್ಯಗಳಲ್ಲಿ ಹಳೆ ಪಿಂಚಣಿ ಜಾರಿ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲಿ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಇದೀಗ ಕಾಂಗ್ರೆಸ್‌ ಎನ್‌ಪಿಎಸ್‌ ರದ್ದು ಮಾಡುವ ಅಸ್ತ್ರ ಪ್ರಯೋಗ ಮಾಡಿದೆ.

ಹಳೆ ಪಿಂಚಣಿ ವ್ಯವಸ್ಥೆ ಮಾತ್ರವಲ್ಲದೇ ಸರಕಾರದಲ್ಲಿ ಖಾಲಿ ಉಳಿದಿರುವ ಎಲ್ಲಾ ಅನುಮೋದಿತ ಹುದ್ದೆಗಳನ್ನು ಒಂದು ವರ್ಷದ ಒಳಗಾಗಿ ಭರ್ತಿ ಮಾಡಲಾಗುತ್ತದೆ. ಸರಕಾರಿ ಮತ್ತು ಅನುದಾನಿತ ಶಾಲೆ, ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲಾ ಶಿಕ್ಷಕರ ಮತ್ತು ಬೋಧಕೇತರ ಹುದ್ದೆಗಳಿಗೆ ಒಂದು ವರ್ಷದ ಒಳಗಾಗಿ ನೇಮಕಾತಿ ಮಾಡಲಾಗುತ್ತದೆ. ಅವೈಜ್ಞಾನಿಕವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಿ, ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ. ರಾಜ್ಯದ ಎಲ್ಲಾ ಬಗೆಯ ಸ್ಕಾಲರ್‌ಶಿಪ್‌ಗಳನ್ನು ಒಂದೇ ವ್ಯವಸ್ಥೆಯಡಿಯಲ್ಲಿ ತಂದು ಎಲ್ಲಾ ವಿದ್ಯಾರ್ಥಿಗಳಿಗೂ ಕಾಲಮಿತಿಯೊಳಗೆ ವಿದ್ಯಾರ್ಥಿ ವೇತನ ವಿತರಿಸಲು 2000 ರೂಪಾಯಿ ಮೂಲನಿಧಿಯೊಂದಿಗೆ ಕರ್ನಾಟಕ ರಾಜ್ಯ ಶೈಕ್ಷಣಿಕ ಹಣಕಾಸು ನಿಗಮ ಸ್ಥಾಪನೆ.

ಇದನ್ನೂ ಓದಿ : 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಮಾಸಿಕ 2,000ರೂ. ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಏನೇನಿದೆ ?

ಆರ್‌ಟಿಇ ಅಡಿಯಲ್ಲಿ ಶಾಲೆಗಳ ಪ್ರವೇಶಾತಿಗೆ ಇರುವ ಆದಾಯ ಮಿತಿಯನ್ನ ರೂ. 5 ಲಕ್ಷಕ್ಕೆ ಹೆಚ್ಚಳ ಮಾಡಲಾಗುತ್ತದೆ. ಅನುದಾನರಹಿತ ಉರ್ದು, ತಮಿಳು ಮತ್ತು ಇತರ ಭಾಷಾ ಶಾಲೆಗಳ ಸಹಿತ ಎಲ್ಲಾ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕ. ವರ್ಷಕ್ಕೆ 2500 ಸರಕಾರಿ ಶಾಲೆಗಳನ್ನು ಸ್ಮಾರ್ಟ್‌ ಶಾಲೆಗಳಾಗಿ ಉನ್ನತೀಕರಣ. 6 ನೇ ತರಗತಿಯಿಂದ 12 ನೇ ತರಗತಿ ವರೆಗೆ ಸರಕಾರಿ ಶಾಲೆಗಳಲ್ಲಿ ಓದಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಎಂಬಿಬಿಎಸ್‌, ಐಐಟಿ, ಎಂಜಿನಿಯರಿಂಗ್‌ ಪ್ರದೇಶ ಪಡೆಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಶೇ.10 ರಷ್ಟು ಮಂದಿಗೆ ಪ್ರತಿಭೆ ಆಧಾರದ ಮೇಲೆ ಶುಲ್ಕ ಪಾವತಿ ಶಿಕ್ಷಣ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ಘೋಷಣೆಯನ್ನು ಮಾಡಿದೆ.

Congress Releases Poll Manifesto: If Congress comes to power, cancel NPS, implement old pension scheme

Comments are closed.