ಮತದಾರರ ಗಮನಕ್ಕೆ : ಮತದಾನಕ್ಕೆ ಈ ದಾಖಲೆ ಇದ್ದರೆ ಸಾಕು

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10ಕ್ಕೆ ನಡೆಯಲಿದೆ. ಹಾಗೆಯೇ ಮೇ 12ಕ್ಕೆ ಮತ ಎಣಿಕೆ ಕೂಡ ನಡೆಯಲಿದೆ. ಇನ್ನು ನಿನ್ನೆ (ಏಪ್ರಿಲ್‌ 20) ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆದರೆ ಮತದಾನ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು ಎನ್ನುವ ಗೊಂದಲ ಜನ ಸಾಮಾನ್ಯ ಇರುತ್ತದೆ. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಮತದಾನ (Document required for voting) ಮಾಡಲು ಆಗುವುದಿಲ್ಲ ಎನ್ನುವ ತಪ್ಪು ಕಲ್ಪನೆಯೂ ಸಹ ಜನ ಸಾಮಾನ್ಯರಲ್ಲಿ ಇರುವುದು ಸಹಜವಾಗಿದೆ. ಇದೀಗ ಮತದಾರರು ಚಿಂತಿಸಬೇಕಾಗಿಲ್ಲ, ಯಾಕೆಂದರೆ ಈ ಕೆಳಗೆ ತಿಳಿಸಿದ ದಾಖಲೆಗಳ ಮೂಲಕ ಕೂಡ ನಿಮ್ಮ ಹಕ್ಕು ಚಲಾಯಿಸಬಹುದಾಗಿದೆ.

ಮತ ಬಾಂಧವರು ತಮ್ಮ ಗುರುತಿನ ಚೀಟಿ ಇಲ್ಲದೇ ಇದ್ದರೆ ಇನ್ನೂ 12 ದಾಖಲೆಗಳಲ್ಲಿ ಯಾವುದಾರೊಂದು ದಾಖಲೆ ಇದ್ದರೆ ಮತ ಚಲಾಯಿಸಬಹುದು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು ಈ ಕೆಳಗಿನ ಯಾವುದಾರರೂ ಗುರುತಿನ ಚೀಟಿಯನ್ನು ದಾಖಲೆಯಾಗಿ ತೋರಿಸಿ ಮತದಾನವನ್ನು ಮಾಡಬಹುದು. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೆ ಈ ಕೆಳಗಿನ ದಾಖಲೆಯನ್ನು ತೋರಿಸಿ ನಿಮ್ಮ ಹಕ್ಕು ಚಲಾಯಿಸಬಹುದು.

Document required for voting : ಮತದಾನಕ್ಕೆ ಬೇಕಾಗುವ ದಾಖಲೆಗಳ ವಿವರ :

  • ಮತದಾರರ ಗುರುತಿನ ಚೀಟಿ
  • ಆಧಾರ್‌ ಕಾರ್ಡ್‌
  • ನರೇಗಾ ಕೆಲಸದ ಕಾರ್ಡ್‌ (ಜಾಬ್‌ ಕಾರ್ಡ್)
  • ಫೋಟೊ ಲಗತ್ತಿಸಿರುವ ಬ್ಯಾಂಕ್ ‌/ ಪೋಸ್ಟ್‌ ಆಫೀಸ್‌ ಪಾಸ್‌ಬುಕ್‌
  • ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆಯ ಸ್ಮಾರ್ಟ್‌ ಕಾರ್ಡ್‌
  • ಚಾಲನಾ ಪರವಾನಗಿ (ಡ್ರೈವಿಂಗ್‌ ಲೆಸೆನ್ಸ್‌)
  • NPR ನಡಿ ನೀಡಲಾದ ಸ್ಮಾರ್ಟ್‌ ಕಾರ್ಡ್‌
  • ಪಾಸ್‌ಪೋರ್ಟ್‌
  • ಫೋಟೊ ಇರುವ ಪಿಂಚಣಿ ದಾಖಲೆ
  • ಪಾನ್‌ ಕಾರ್ಡ್‌
  • ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆ, ಸಾರ್ವಜನಿಕ ಕಂಪನಿಗಳ ಗುರುತಿನ ಚೀಟಿ
  • ಶಾಸಕ, ಸಂಸದರಿಗೆ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿ
  • ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯಿಂದ ನೀಡಲಾಗುವ ವಿಶಿಷ್ಟ ವಿಕಲ ಚೇತನರ ಗುರುತಿನ ಚೀಟಿ

ಇದನ್ನೂ ಓದಿ : ಕರ್ನಾಟಕ ವಿಧಾನಸಭೆ ಚುನಾವಣೆ : ಕನಕಪುರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್

ಇದನ್ನೂ ಓದಿ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಕೋವಿಡ್ ಪಾಸಿಟಿವ್

ಇದನ್ನೂ ಓದಿ : Congress final list : ಕಾಂಗ್ರೆಸ್‌ ಅಂತಿಮ ಪಟ್ಟಿ ಪ್ರಕಟ : ಮೊಯಿದ್ದೀನ್‌ ಬಾವಾಗೆ ಒಂದು ಕರೆಯಿಂದ ತಪ್ಪಿದ ಟಿಕೆಟ್‌ !

Document required for voting : Attention of voters: This document is enough for voting

Comments are closed.