ಫ್ಯಾನ್ ಹಾಕುವಂತಿಲ್ಲ : ಕಸ ಗುಡಿಸುವಂತಿಲ್ಲ: ಎಲೆಕ್ಷನ್ ಕಮೀಷನ್ ರೂಲ್ಸ್ ತಂದ ಸಂಕಷ್ಟ

ಬೆಂಗಳೂರು : ರಾಜ್ಯದಲ್ಲಿ ಬಿರುಬೇಸಿಗೆಯ ಜೊತೆಗೆ ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಹೀಗಾಗಿ ಚುನಾವಣೆಯ ಓಟಿಂಗ್ ಬೂತ್ ನಲ್ಲೂ ಫ್ಯಾನ್ ಬೇಕೇ ಬೇಕು. ಆದರೆ ಈಗ ಚುನಾವಣಾ ಆಯೋಗದ ನಿಯಮದಿಂದ ಪೋಲಿಂಗ್ ಬೂತ್ ಸಿಬ್ಬಂದಿ (Election Commission Rules) ಸೆಕೆಯಲ್ಲೇ ಕೆಲಸ ಮಾಡೋ ಸ್ಥಿತಿ ಇದೆ. ಮಾತ್ರವಲ್ಲದೇ ಬೂತ್ ನ ಸ್ವಚ್ಛತೆಗೆ ಪೊರಕೆ‌ ಕೂಡ ಬಳಸದಂತ ಸ್ಥಿತಿ ಎದುರಾಗಿದೆ.

ಹೌದು ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಹೀಗಾಗಿ ಫ್ಯಾನ್ ಇಲ್ಲದೇ ಕೊಠಡಿಯೊಳಗೆ ಕುಳಿತು ಕೆಲಸ ಮಾಡೋದೇ ಕಷ್ಟ ಅನ್ನೋ ಸ್ಥಿತಿ ಇದೆ. ಆದರೆ ಈಗ ಚುನಾವಣಾ ಆಯೋಗದ ನಿಯಮದಿಂದಾಗಿ ಚುನಾವಣಾ ಸಿಬ್ಬಂದಿಗಳು ಸೆಕೆಯಲ್ಲೇ ಕೆಲಸ ಮಾಡೋ ಸ್ಥಿತಿ ಇದೆ. ಯಾಕೆಂದರೇ ಚುನಾವಣಾ ಆಯೋಗದ ನಿಯಮದಂತೆ ಚುನಾವಣೆ ಪ್ರಕ್ರಿಯೆಗಳು ನಡೆಯೋ ಕೊಠಡಿಯಲ್ಲಿ ಫ್ಯಾನ್ ಅಳವಡಿಸುವಂತಿಲ್ಲ. ಕೇವಲ ಫ್ಯಾನ್ ಮಾತ್ರವಲ್ಲದೇ ಕಸ ಸ್ವಚ್ಛಗೊಳಿಸೋ ಪೂರಕೆಗೂ ನೀತಿ ಸಂಹಿತೆಯ ಬಿಸಿ ತಟ್ಟಿದೆ. ಹೌದು ಚುನಾವಣಾ ಆಯೋಗದ ನಿಯಮದ ಪ್ರಕಾರ ಯಾವೆಲ್ಲ ವಸ್ತುಗಳನ್ನು ಚುನಾವಣೆಯ ಗುರುತುಗಳಾಗಿ ಬಳಸಲಾಗಿದೆಯೋ ಅದನ್ನು ಚುನಾವಣಾ ಮತಗಟ್ಟೆಯ ಒಳಗೆ ಹಾಗೂ ಮತಗಟ್ಟೆಯ 200 ಮೀಟರ್ ಒಳಗೆ ಬಳಸುವಂತಿಲ್ಲ.

ರಾಜ್ಯದಲ್ಲಿ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳ ಜೊತೆ ಆಪ್ ಪಕ್ಷ ಕೂಡ ಸಕ್ರಿಯವಾಗಿದೆ. ಹೀಗಾಗಿ ಆಪ್ ಪಕ್ಷದ ಗುರುತಾಗಿರುವ ಪೊರಕೆಗೆ ಈಗ ಸಂಕಷ್ಟ ಎದುರಾಗಿದೆ. ಇದಲ್ಲದೇ ರಾಜ್ಯದ ಹಲವು ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಇದರಲ್ಲಿ ಹಲವರಿಗೆ ಫ್ಯಾನ್ ಗುರುತು ಸಿಕ್ಕಿದೆ. ಹೀಗಾಗಿ ರಾಜ್ಯದ ಮತಗಟ್ಟೆಯಗಳಲ್ಲಿ ಪೊರಕೆ ಹಾಗೂ ಫ್ಯಾನ್ ಗೆ ಅವಕಾಶವಿಲ್ಲ. ಈ ಬಗ್ಗೆ ಬೆಂಗಳೂರು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ ಮಾಹಿತಿ ನೀಡಿದ್ದು, ಚುನಾವಣಾ ಆಯೋಗದ ನಿಯಮದಂತೆ ಪೊರಕೆಯನ್ನು ಹಾಗೂ ಫ್ಯಾನ್ ನ್ನು ಮತಗಟ್ಟೆಯಿಂದ ದೂರವಿರಿಸೋದು ಅನಿವಾರ್ಯವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ : ಮೇ 3 ರಂದು ಕಡಲೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ : ಮಂಗಳೂರು-ಉಡುಪಿ ಮಾರ್ಗ ಬದಲಾವಣೆ

ರಾಜ್ಯದ ಹಲವು ಜಿಲ್ಲೆಯಲ್ಲಿ ಬಿರು ಬೇಸಿಗೆಯ ಕಾರಣಕ್ಕೆ ತಾಪಮಾನ ಹೆಚ್ಚಿದ್ದು ಮನೆ ಹಾಗೂ ಕಚೇರಿಗಳಲ್ಲಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಹೀಗಿರುವಾಗಲೇ ಅಭ್ಯರ್ಥಿ ಚಿಹ್ನೆಯ ಕಾರಣಕ್ಕೆ ಫ್ಯಾನ್ ಬಳಕೆಗೆ ನಿರ್ಭಂದ ಹೇರಿರೋದು ಚುನಾವಣಾ ಸಿಬ್ಬಂದಿಗೆ ಬಿಸಿಲಿನ ಮೇಲೆ‌ ಶಾಕ್ ನೀಡಿದಂತಾಗಿದೆ. ಆದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಭಯದಿಂದ ಸಿಬ್ಬಂದಿ ಎರಡು ದಿನ ಕೊಠಡಿಯ ಸ್ವಚ್ಛತೆ ಹಾಗೂ ತಣ್ಣನೆ ಗಾಳಿ ಎರಡಕ್ಕೂ ಬ್ರೇಕ್ ಹಾಕಲಿದ್ದಾರೆ.

Fan cannot be placed: Garbage cannot be swept: Trouble caused by Election Commission Rules

Comments are closed.