ಭವಾನಿ ರೇವಣ್ಣ ಟಿಕೇಟ್ ಗಾಗಿ ದೇವೇಗೌಡರ ಮನೆಯಲ್ಲಿ ಸಂಧಾನ ಸಭೆ : ಎಚ್.ಡಿ.ಕುಮಾರಸ್ವಾಮಿ -ರೇವಣ್ಣ ನಡುವೆ ಮೂಡುತ್ತಾ ಒಮ್ಮತ ?

ಹಾಸನ: (HD Kumaraswamy – Revanna) ರಾಜ್ಯ ಚುನಾವಣೆಯಲ್ಲಿ ಫ್ಯಾಮಿಲಿ ಫೈಟ್ ಮೂಲಕವೇ ಗಮನ ಸೆಳೆದ ಹಾಸನ ಕ್ಷೇತ್ರದ ಟಿಕೇಟ್ ದಂಗಲ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಷ್ಟು ದಿನಗಳ ಕಾಲ ಹಾಸನ ಮಟ್ಟದಲ್ಲಿ ನಡೆದಿದ್ದ ಸಿಂಹಾಸನ ಫೈಟ್ ಈಗ ಬೆಂಗಳೂರಿಗೆ ಶಿಫ್ಟ್ ಆದಂತಿದ್ದು, ಗೌಡರ ಮನೆಯ ಟಿಕೇಟ್ ಗದ್ದಲ ಈಗ ದೊಡ್ಡ ಗೌಡರ ಅಂಗಳ ತಲುಪಿದೆ.

ಸೋಮವಾರ ಜೆಡಿಎಸ್ ನ ಎರಡನೇ ಟಿಕೇಟ್ ಪಟ್ಟಿ ಬಿಡುಗಡೆಯಾಗಲಿದೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಪ್ರಕಟಗೊಳ್ಳದ ಹಾಸನ ಕ್ಷೇತ್ರದ ಟಿಕೇಟ್ ಎರಡನೇ ಪಟ್ಟಿಯಲ್ಲಿ ರಿಲೀಸ್ ಅಗೋದು ಖಚಿತ‌. ಈ ಎರಡನೇ ಪಟ್ಟಿಯಲ್ಲಿ ಸ್ಥಾನ ಪಡೆಯೋದಕ್ಕಾಗಿ ಭವಾನಿ ರೇವಣ್ಣ ಹಾಗೂ ರೇವಣ್ಣ ದಂಪತಿಗಳು ಕೊನೆಯ ಹಂತದ ಸರ್ಕಸ್ ಆರಂಭಿಸಿದ್ದಾರೆ. ಕಡೆ ಕ್ಷಣದಲ್ಲಿ ದೇವೇಗೌಡ್ರನ್ನು ಮನವೊಲಿಸಿ ಟಿಕೇಟ್ ಪಡೆದುಕೊಳ್ಳುವ ಉದ್ದೇಶದಿಂದ ಭವಾನಿ ರೇವಣ್ಣ ಹಾಗೂ ರೇವಣ್ಣ ಫ್ಯಾಮಿಲಿ ಬೆಂಗಳೂರಿಗೆ ಆಗಮಿಸಿದೆ. ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ರೇವಣ್ಣ ಹಾಗೂ ಭವಾನಿ ರೇವಣ್ಣ ದಂಪತಿ ದೇವೆಗೌಡರ ಮನವೊಲಿಸಲಿದ್ದಾರೆ.

ಪಕ್ಷವನ್ನು ಕಟ್ಟಲು ಹಾಗೂ ಬೆಳೆಸಲು ನಮ್ಮ ಕೊಡುಗೆಯೂ ಇದೆ. ಹಾಸನ ಭಾಗದಲ್ಲಿ ಪಕ್ಷವನ್ನು ಉಳಿಸಿ ಬೆಳೆಸಿದ್ದೇವೆ. ಭವಾನಿ ರೇವಣ್ಣ ಅಭ್ಯರ್ಥಿ ಆಗಬೇಕೆಂಬುದು ಕಾರ್ಯಕರ್ತರ ಆಶಯವೂ ಆಗಿದೆ.‌ ಹೀಗಿರುವಾಗ ಭವಾನಿ ರೇವಣ್ಣಗೆ ಅವಕಾಶ ನೀಡದೆ ಹೋದರೇ ರೇವಣ್ಣನವರಿಗೆ ಪಕ್ಷದಲ್ಲಿ ಬೆಲೆ ಇಲ್ಲ ಎಂಬ ಸಂದೇಶ ಹೋದಂತಾಗುತ್ತದೆ. ಇದು ನಮ್ಮ ವಿಶ್ವಾಸಾರ್ಹತೆಯ ಪ್ರಶ್ನೆ. ಭವಾನಿ ರೇವಣ್ಣನವರಿಗೆ ಟಿಕೇಟ್ ನೀಡೋ ಮೂಲಕ ಫ್ಯಾಮಿಲಿ ಪೊಲಿಟಿಕ್ಸ್ ಗೆ ಅವಕಾಶ ನೀಡಿದ್ರು ಅನ್ನೋ ಮಾತು ಬರುತ್ತೆ ಅನ್ನೋದಾದರೇ ರಾಜಕೀಯದಲ್ಲಿ ಪಕ್ಷಾತೀತವಾಗಿ ಎಲ್ಲೆಡೆಯೂ ನಡೆಯಿತ್ತಿರೋದು ಅದೇ ಎಂದು ದೇವೆಗೌಡರಿಗೆ ರೇವಣ್ಣ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಿದ್ದಾರಂತೆ.

ಇದನ್ನೂ ಓದಿ : ವಿಧಾನಸಭೆ ಚುನಾವಣೆ 2023 : ಎಲೆಕ್ಷನ್‌ಗೂ ಮುನ್ನ 8ನೇ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

ಅಲ್ಲದೇ ಹೆಚ್.ಡಿ.ರೇವಣ್ಣ ಹಾಗೂ ಹೆಚ್.ಡಿ.ಕುಮಾರಸ್ವಾಮಿಯವರನ್ನು ಒಟ್ಟಿಗೆ ಕೂರಿಸಿಕೊಂಡು ದೇವೇಗೌಡರು ಸಂಧಾನ‌‌ ನಡೆಸೋ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ. ಇಬ್ಬರನ್ನೂ ಕೂರಿಸಿ ಮಾತನಾಡಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ್ರು ಇಬ್ಬರೂ ಒಮ್ಮತಕ್ಕೆ ಬಂದಲ್ಲಿ ಹಾಸನಕ್ಕೆ ನಾಳೆಯೇ ಭವಾನಿ ರೇವಣ್ಣ ಅಭ್ಯರ್ಥಿ ಎಂದು ಘೋಷಣೆ ಮಾಡೋ‌ಸಾಧ್ಯತೆ ಇದೆ. ಕೆಲ‌ದಿನಗಳಿಂದ ಭವಾನಿ ರೇವಣ್ಣಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡ್ತಿರೋ ಹೆಚ್.ಡಿ.ರೇವಣ್ಣಗೆ ಎಚ್ಡಿಕೆ ಅಡ್ಡಿಯಾಗಿದ್ದು, ಸಾಮಾನ್ಯ ಕಾರ್ಯಕರ್ತನಿಗೆ ಟಿಕೇಟ್ ಎಂತಿರೋ ಎಚ್ಡಿಕೆ ಹೆಚ್.ಪಿ. ಸ್ವರೂಪ್‌ ಬೆನ್ನಿಗೆ ನಿಂತಿದ್ದಾರೆ. ಒಟ್ಟಿನಲ್ಲಿ ಹಾಸನ ಸಿಂಹಾಸನಕ್ಕೆ ಅಧಿಪತಿ ಯಾರು ಎನ್ನೋ ಪ್ರಶ್ನೆಗೆ ಸೋಮವಾರ ಉತ್ತರ ಸಿಗೋ ಸಾಧ್ಯತೆ ಇದೆ.

HD Kumaraswamy – Revanna: Negotiation meeting at Deve Gowda’s house for Bhavani Revanna ticket: Consensus emerging between HD Kumaraswamy and Revanna

Comments are closed.