Karnataka Election date announce : ಮೇ 10 ಕ್ಕೆ ಚುನಾವಣೆ : 13 ಕ್ಕೆ ಚುನಾವಣಾ ಫಲಿತಾಂಶ

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣಾ (Karnataka Election date announce ) ಅಂಗವಾಗಿ ಇಂದು ಬೆಳಿಗ್ಗೆ 11.30 ಕ್ಕೆ ದೆಹಲಿಯ ವಿಜ್ಞಾನ ಕೇಂದ್ರದಲ್ಲಿ ಕೇಂದ್ರ ಚುನಾವಣಾ ಆಯೋಗ ಮಹತ್ವದ ಸುದ್ದಿಗೋಷ್ಠಿಯನ್ನು ಕರೆದಿದ್ದು, ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರಾಗಿರುವ ರಾಜೀವ್‌ ಕುಮಾರ್‌ ಚುನಾವಣಾ ದಿನಾಂಕ ಘೋಷಣೆ ಮಾಡಿದ್ದಾರೆ. ಇದೀಗ ಚುನಾವಣಾ ದಿನಾಂಕ ನಿಗದಿಯಾಗಿದ್ದು ಮೇ 10 ಕ್ಕೆ ಚುನಾವಣೆ ದಿನಾಂಕ ನಿಗಧಿಯಾಗಿದೆ. ಇನ್ನೂ ಚುನಾವಣಾ ಫಲಿತಾಂಶ ಮೇ 13 ಕ್ಕೆ ನಡೆಯಲಿದೆ.

ಇದೀಗ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಮೇ 10 ರಂದು ಚುನಾವಣೆ, ಮೇ 13 ರಂದು ಪಲಿತಾಂಶ ದಿನಾಂಕ ನಿಗದಿಯಾಗಿದೆ. ಏಪ್ರಿಲ್‌ 13 ಕ್ಕೆ ನಾಮಪತ್ರಿಕೆ ಸಲ್ಲಿಕೆ ಪ್ರಾರಂಭವಾಗಲಿದ್ದು, ಏಪ್ರಿಲ್‌ 20 ರಂದು ಕೊನೆಯ ದಿನವಾಗಿದೆ. ಇನ್ನೂ ಏಪ್ರಿಲ್‌ 21 ರೊಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯುವುದಕ್ಕೆ ಏಪ್ರಿಲ್‌ 24 ಕೊನೆಯ ದಿನವಾಗಿದೆ. ಕಳೆದ ಚುನಾವಣೆಯಂತೆ ಈ ಬಾರಿಯೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಮೇ 24 ಕ್ಕೆ ಕರ್ನಾಟಕ ವಿಧಾನಸಭೆ ಅವಧಿ ಮುಗಿಯಲಿದ್ದು, ರಾಜ್ಯದಲ್ಲಿ ಒಟ್ಟು 58, ಸಾವಿರ ಮತಗಟ್ಟೆಗಳಿದ್ದು, 34219 ಗ್ರಾಮೀಣ ಮತಗಟ್ಟೆ, 20063 ನಗರ ಮತಗಟ್ಟೆ, 1320 ಮಹಿಳಾ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 5.21 ಕೋಟಿ ಮತದಾರರಿಂದ ಈ ಬಾರಿ ಮತದಾನ ನಡೆಯಲಿದೆ. 2.62 ಕೋಟಿ ಪುರುಷರು, 2.59 ಕೋಟಿ ಮಹಿಳೆಯರು, 5 ಲಕ್ಷ ವಿಕಲ ಚೇತನ ಮತದಾರರು, 4,699 ತೃತಿಯಲಿಂಗಿ ಮತದಾರರಿದ್ದು, 9.17 ಲಕ್ಷ ಯುವ ಸಮೂಹದಿಂದ ಮತದಾನ ನಡೆಯಲಿದೆ. ಈ ಬಾರಿ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸಿಬ್ಬಂದಿಯೇ ಮನೆಗೆ ತೆರಳಿ ಮತದಾನ ಮಾಡಿಸಿಕೊಳ್ಳಲಿದ್ದಾರೆ. ಅದೇ ಗೌಪ್ಯತೆಯೊಂದಿಗೆ ಮನೆಯಲ್ಲಿಯೇ ಮತದಾನ ನಡೆಯಲಿದೆ. ಏಪ್ರಿಲ್‌ 1 ಕ್ಕೆ 18 ವರ್ಷ ತುಂಬಿದವರಿಗೂ ಮತದಾನಕ್ಕೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ : Karnataka MLA Election : ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ: ಮೇ 10 ಕ್ಕೆ ಚುನಾವಣೆ

ಇದನ್ನೂ ಓದಿ : Enforcement of Code of Conduct: ಕರ್ನಾಟಕ ಚುನಾವಣೆ ಘೋಷಣೆ : ಇಂದಿನಿಂದಲೇ ನೀತಿ ಸಂಹಿತೆ ಜಾರಿ

ರಾಜ್ಯದಲ್ಲಿ ಚುನಾವಣೆಗಾಗಿ ಈಗಾಗಲೇ ಚುನಾವಣಾ ಆಯೋಗ ಸಿದ್ದತೆಯನ್ನು ಮಾಡಿಕೊಂಡಿದೆ. ಈಗಾಗಲೇ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರು ರಾಜ್ಯಕ್ಕೆ ಭೇಟಿ ನೀಡಿ ಸಿದ್ದತೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಚುನಾವಣಾ ಆಯೋಗ ಜಿಲ್ಲಾಡಳಿತಗಳಿಗೆ ಸೂಚನೆಯನ್ನು ನೀಡಿದೆ. ಇನ್ನು ಚುನಾವಣಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ವಾಹನಗಳ ತಪಾಸಣಾ ಕಾರ್ಯವನ್ನು ಈಗಾಗಲೇ ನಡೆಸಲಾಗುತ್ತಿದೆ.

Karnataka Election date announce : Election on 10th May : Election result on 13th

Comments are closed.