ಸೋಮವಾರ, ಏಪ್ರಿಲ್ 28, 2025
HomeElectionKarnataka Ranaranga : ವರುಣಾದಲ್ಲಿ ಸಿದ್ದರಾಮಯ್ಯನನ್ನ ಸೋಲಿಸಿದರೆ 50 ಲಕ್ಷ ಹಣ ನೀಡುತ್ತೇನೆ : ರೈತನೋರ್ವನಿಂದ...

Karnataka Ranaranga : ವರುಣಾದಲ್ಲಿ ಸಿದ್ದರಾಮಯ್ಯನನ್ನ ಸೋಲಿಸಿದರೆ 50 ಲಕ್ಷ ಹಣ ನೀಡುತ್ತೇನೆ : ರೈತನೋರ್ವನಿಂದ ಬಹಿರಂಗ ಸವಾಲು

- Advertisement -

ಮೈಸೂರು : (Karnataka Ranaranga) ರಾಜ್ಯದಲ್ಲಿ ಚುನಾವಣೆ ಕಣ ರಂಗೇರಿದೆ. ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆಯಾಗಿದ್ದು, ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಸಿದ್ದರಾಮಯ್ಯನವರ ಎದುರು ವಿ ಸೋಮಣ್ಣ ಸ್ಪರ್ದಿಸುತ್ತಿದ್ದು, ಸಿದ್ದರಾಮಯ್ಯರನ್ನು ವರುಣಾ ಕ್ಷೇತ್ರದಿಂದ ಸೋಲಿಸಿದ್ರೆ 50 ಲಕ್ಷ ರೂ ಹಣ ನೀಡುವುದಾಗಿ ರೈತರೊಬ್ಬರು ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಈಗಾಗಲೇ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಇನ್ನೇನು ಕೆಲವೇ ಕೆಲವು ಕ್ಷೇತ್ರಗಳು ಬಾಕಿ ಇವೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಸಚಿವ ವಿ ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ. ಆದರೆ ಸೋಮಣ್ಣನಿಗೆ ಸಿದ್ದರಾಮಯ್ಯನವರ ಎದುರು ನಿಂತು ಸೋಲಿಸಲು ಸಾಧ್ಯವಿಲ್ಲ. ಕಾರಣ 15 ವರ್ಷಗಳಿಂದ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಉನ್ನತ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರ ಕ್ಷೇತ್ರದಲ್ಲಿ ಯಾವುದೇ ಪಕ್ಷದಿಂದ ಅಭ್ಯರ್ಥಿಗಳು ನಿಂತರೂ ಸೋಸಲು ಖಚಿತ ಎನ್ನಲಾಗುತ್ತಿದೆ.

ಈ ಮಧ್ಯೆ ರೈತರೊಬ್ಬರು ಸಿದ್ದರಾಮಯ್ಯನವರ ಎದುರು ನಿಂತು ಯಾರೋ ಬಂದು ವೋಟು ಕೊಡಿ ಎಂದರೆ ನಿಮ್ಮನ್ನು ಗೆಲ್ಲಿಸುವುದಕ್ಕೆ ಆಗುತ್ತಾ ಎಂದು ಸೋಮಣ್ಣ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಇದಲ್ಲದೇ ಹಣ ಇಂದಲ್ಲ ನಾಳೆ ಸಂಪಾದನೆ ಮಾಡಬಹುದು. ಹಣಕ್ಕಿಂತ ವ್ಯಕ್ತಿ ಮುಖ್ಯ. ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ 10 ಕೆಜಿ ಅಕ್ಕಿ ಕೊಡುತ್ತಿದ್ದರು. ಬಿಜೆಪಿಯವರು ಈಗ ಅದನ್ನು 5 ಕೆಜಿಗೆ ಇಳಿಸಿದ್ದಾರೆ. ಇಲ್ಲಿ ಯಾರೇ ಬಂದರೂ ಸಿದ್ದರಾಮಯ್ಯರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ದರಾಮಯ್ಯರನ್ನು ವರುಣಾ ಕ್ಷೇತ್ರದಿಂದ ಸೋಲಿಸಿದರೆ 50 ಲಕ್ಷ ರೂ ನೀಡುವುದಾಗಿ ರೈತರೊಬ್ಬರು ಬಿಜೆಪಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಹಾಗಿದ್ದರೆ ಈ ಬಹಿರಂಗ ಸವಾಲನ್ನು ಎದುರಿಸಿ ಸಿದ್ದರಾಮಯ್ಯನ ವಿರುದ್ದ ನಿಂತು ಸೋಮಣ್ಣ ಚುನಾವಣೆಯಲ್ಲಿ ಗೆಲ್ಲುತ್ತಾರಾ? ಸಿದ್ದರಾಮಯ್ಯನವರನ್ನು ಅವರ ಕ್ಷೇತ್ರದಲ್ಲಿಯೇ ಸೋಲಿಸುವ ಸಾಮರ್ಥ್ಯ ವಿ ಸೋಮಣ್ಣನವರಿಗೆ ಇದೆಯೇ ಎಂದು ಕಾದು ನೋಡಬೇಕಿದೆ. ರೈತರ ಸವಾಲನ್ನ ಬಿಜೆಪಿ ಎಷ್ಟರ ಮಟ್ಟಿಗೆ ಸ್ವೀಕರಿಸಿದೆ ಎನ್ನುವುದು ಚುನಾವಣೆಯ ನಂತರದಲ್ಲಿ ತಿಳಿದುಬರಲಿದೆ.

ಇದನ್ನೂ ಓದಿ : ಕರ್ನಾಟಕಕ್ಕೆ‌ ರಾಹುಲ್ ಗಾಂಧಿ ಭೇಟಿ : ಜೈ ಭಾರತ್ ಸಮಾವೇಷದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಯುವರಾಜ

Karnataka Ranaranga: If Siddaramaiah is defeated in Varuna, I will give him 50 lakhs: an open challenge from a farmer

RELATED ARTICLES

Most Popular