ಐಪಿಎಲ್ ಚೊಚ್ಚಲ ಪಂದ್ಯಕ್ಕೂ ಮುನ್ನ ಅರ್ಜುನ್ ತೆಂಡೂಲ್ಕರ್‌ನ್ನು ರೋಹಿತ್ ಶರ್ಮಾ ಅಪ್ಪಿಕೊಂಡ ವಿಡಿಯೋ ವೈರಲ್

ಮುಂಬೈ : ಕ್ರಿಕೆಟ್‌ ದೇವರು ಎಂದೇ ಪ್ರಖ್ಯಾತಿ ಪಡೆದ ಸಚಿನ್‌ ತೆಂಡೂಲ್ಕರ್‌ಗೆ ಪ್ರಪಂಚದಾದ್ಯಂತ ಉತ್ತಮ ಮಟ್ಟದ ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಭಾನುವಾರ (ಏಪ್ರಿಲ್ 16)ರಂದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಐಪಿಎಲ್ ಚೊಚ್ಚಲ ಪಂದ್ಯಕ್ಕೂ ಮುನ್ನ ಅರ್ಜುನ್ ತೆಂಡೂಲ್ಕರ್‌ನ್ನು ರೋಹಿತ್ ಶರ್ಮಾ (Arjun Tendulkar – Rohit Sharma) ಅಪ್ಪಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಾದಾಡುತ್ತಿದೆ. ಪ್ರತಿಭಾವಂತ ಎಡಗೈ ವೇಗಿ ಮತ್ತು ಹ್ಯಾಂಡಿ ಬ್ಯಾಟರ್ ಅರ್ಜುನ್ ಐಪಿಎಲ್ 2022 ಹರಾಜಿನಲ್ಲಿ ಐದು ಬಾರಿ ಐಪಿಎಲ್ ವಿಜೇತ ಮುಂಬೈ ಇಂಡಿಯನ್ಸ್ ಖರೀದಿಸಿದೆ. ಅವರು ತಮ್ಮ ವೃತ್ತಿಜೀವನದ ಮೊದಲ ಐಪಿಎಲ್‌ ಪಂದ್ಯವನ್ನು ತಮ್ಮ ಸಹೋದರಿ ಮತ್ತು ತಂದೆ ಸಚಿನ್ ಅವರೊಂದಿಗೆ ಕ್ರೀಡಾಂಗಣದಲ್ಲಿ ಆಡಲಿದ್ದಾರೆ. ರೋಹಿತ್ ಶರ್ಮಾ ಅರ್ಜುನ್‌ಗೆ ಎಂಐ ಕ್ಯಾಪ್ ತೊಡಿಸಿದರು ಆದರೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯದಿಂದ ಅವರು ಇಂದು ತಂಡವನ್ನು ಮುನ್ನಡೆಸುತ್ತಿಲ್ಲ. ರೋಹಿತ್ ಅನುಪಸ್ಥಿತಿಯಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಕಣಕ್ಕೆ ಇಳಿಯಲಿದ್ದಾರೆ.

ಪ್ಲೇಯಿಂಗ್ XI ಗಳು:

ಮುಂಬೈ ಇಂಡಿಯನ್ಸ್ : ಕ್ಯಾಮರೂನ್ ಗ್ರೀನ್, ಇಶಾನ್ ಕಿಶನ್ (WK), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಟಿಮ್ ಡೇವಿಡ್, ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ದುವಾನ್ ಜಾನ್ಸೆನ್, ರಿಲೆ ಮೆರೆಡಿತ್

ಇದನ್ನೂ ಓದಿ : Vyshak Vijaykumar : ಆರ್‌ಸಿಬಿ ಪರ ಪಾದಾರ್ಪಣೆಯ ಪಂದ್ಯದಲ್ಲಿ ಕನ್ನಡಿಗನ ಬೆಂಕಿ ಬೌಲಿಂಗ್, ಯಾರು ಈ ವೈಶಾಖ್..?

ಇದನ್ನೂ ಓದಿ : BCCI Revenue Share : 10 ಸಾವಿರ ಕೋಟಿಯ ಮೆಗಾ ಡೀಲ್’ಗೆ ಬಿಸಿಸಿಐ ಮೆಗಾ ಪ್ಲಾನ್, ಹೇಗಿದೆ ಗೊತ್ತಾ ದೊಡ್ಡಣ್ಣನ ಮಾಸ್ಟರ್ ಪ್ಲಾನ್?

ಕೋಲ್ಕತ್ತಾ ನೈಟ್ ರೈಡರ್ಸ್ : ರಹಮಾನುಲ್ಲಾ ಗುರ್ಬಾಜ್ (WK), ವೆಂಕಟೇಶ್ ಅಯ್ಯರ್, ಎನ್ ಜಗದೀಸನ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ

Arjun Tendulkar – Rohit Sharma : Video of Rohit Sharma hugging Arjun Tendulkar before IPL debut goes viral

Comments are closed.