ಸೋಮವಾರ, ಏಪ್ರಿಲ್ 28, 2025
HomeElectionKPCC President DK Sivakumar: ಸಿಎಂ ಸ್ಥಾನದ ಕನಸು ಈಡೇರಿಸಿಕೊಳ್ಳಲು ಸರ್ಕಸ್: ಕಾಳಹಸ್ತಿಯಲ್ಲಿ ಡಿಕೆಶಿ ವಿಶೇಷ...

KPCC President DK Sivakumar: ಸಿಎಂ ಸ್ಥಾನದ ಕನಸು ಈಡೇರಿಸಿಕೊಳ್ಳಲು ಸರ್ಕಸ್: ಕಾಳಹಸ್ತಿಯಲ್ಲಿ ಡಿಕೆಶಿ ವಿಶೇಷ ಪೂಜೆ

- Advertisement -

ಬೆಂಗಳೂರು : (KPCC President DK Sivakumar) ರಾಜ್ಯದಲ್ಲಿ ಇನ್ನೂ‌ ಚುನಾವಣೆ ಮುಗಿದಿಲ್ಲ. ಆಗಲೇ ಸಿಎಂ ಸ್ಥಾನಾಕಾಂಕ್ಷಿಗಳ ಸರ್ಕಸ್ ಆರಂಭವಾಗಿದೆ. ಮತ್ತೊಮ್ಮೆ ಸಿಎಂ ಸ್ಥಾನಕ್ಕೇರೋ ಕನಸಿನಲ್ಲಿರೋ ಸಿದ್ದರಾಮಯ್ಯ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸ್ಥಾನ ಭದ್ರಪಡಿಸಿಕೊಳ್ಳೋ ಲೆಕ್ಕಾಚಾರದಲ್ಲಿದ್ದರೇ, ಮೊದಲ ಬಾರಿಗೆ ಸಿಎಂ ಸ್ಥಾನಕ್ಕೇರೋ ಕನಸಿನಲ್ಲಿರೋ ಡಿಕೆಶಿ ತಮ್ಮ ಅದೃಷ್ಟ ಖುಲಾಯಿಸಲು ಅಡ್ಡಿಯಾಗಿರಬಹುದಾದ ಪಾಪಗಳನ್ನು ತೊಳೆದುಕೊಳ್ಳಲು ದೇವರ ಮೊರೆ ಹೋಗಿದ್ದಾರೆ.

ಹೌದು ಶತಾಯ ಗತಾಯ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದು ಸಿಎಂ ಸ್ಥಾನಕ್ಕೇರಬೇಕೆಂಬ ಕನಸಿನಲ್ಲಿರೋ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದಕ್ಕಾಗಿ ಇನ್ನಿಲ್ಲದ ಕರಸತ್ತು ನಡೆಸಿದ್ದಾರೆ. ತಳಮಟ್ಟದಿಂದ ಪಕ್ಷ ಸಂಘಟಿಸಲು ಪಾದಯಾತ್ರೆ, ರಥಯಾತ್ರೆ ಬಳಿಕ ತಮ್ಮ ಅದೃಷ್ಟ ಖುಲಾಯಿಸುವಂತೆ ಮಾಡಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ.

ಇತ್ತೀಚಿಗಷ್ಟೇ ಬೇಡಿದ ವರಗಳನ್ನು ಪೂಜೆ ಮೂಲಕ ಸಿದ್ಧಿಸುವಂತೆ ಮಾಡೋ ಕಾಲಭೈವರೇಶ್ವರನ ಮೊರೆ ಹೋಗಿದ್ದ ಡಿಕೆಶಿ ಮೂರು ಅಮಾವಾಸ್ಯೆಯಂದು ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದರು. ಈಗ ಇಷ್ಟಾರ್ಥ ಸಿದ್ಧಿ ಹಾಗೂ ಪಾಪ ಪರಿಹಾರಕ್ಕೆ ಕಾಳಹಸ್ತಿಗೆ ತೆರಳಿದ್ದಾರೆ. ಭಾನುವಾರ ಸಂಜೆ ಹಾಗೂ ಸೋಮವಾರ ಕಾಳಹಸ್ತಿಯಲ್ಲಿ ಡಿಕೆಶಿ ತಮ್ಮ ಜಾತಕದ ಪ್ರಕಾರ ದೋಷ ಪರಿಹಾರಕ್ಕೆ ಹಲವು ಪೂಜಾ ಕೈಂಕರ್ಯಗಳನ್ನು ಮಾಡಲಿದ್ದಾರಂತೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸುವರ್ಣಮುಖಿ ನದಿಯ ತಟದಲ್ಲಿರೋ ಕಾಳಹಸ್ತಿ ದೇಗುಲ ಪಾಪ ಪರಿಹಾರಕ್ಕೆ ಪ್ರಸಿದ್ಧವಾದ ದೇವಾಲಯ. ದಕ್ಷಿಣ ಕೈಲಾಸ ಎಂದು ಕರೆಯಲ್ಪಡುವ ಈ ದೇವಾಲಯದಲ್ಲಿ ಸದಾಕಾಲ ರಾಹು ಹಾಗೂ ಕೇತು ಪರಿಹಾರಾರ್ಥ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ‌.ಇಲ್ಲಿ ಪೂಜೆ ಮಾಡಿಸೋದರಿಂದ ಮನುಷ್ಯನಿಗೆ ಇರುವ ಸಕಲ ದೋಷಗಳು ಪರಿಹಾರವಾಗಿ ಸಂತಾನ ಭಾಗ್ಯದಿಂದ ಆರಂಭಿಸಿ ಉದ್ಯೋಗ, ಸ್ಥಾನಮಾನ ಸೇರಿದಂತೆ ಎಲ್ಲ ಇಚ್ಛಿತ ಫಲಗಳು ದೊರಕುತ್ತವೆ ಎಂಬುದು ನಂಬಿಕೆ.

ಇದನ್ನೂ ಓದಿ : ಭವಾನಿ ರೇವಣ್ಣ ಟಿಕೇಟ್ ಗಾಗಿ ದೇವೇಗೌಡರ ಮನೆಯಲ್ಲಿ ಸಂಧಾನ ಸಭೆ : ಎಚ್.ಡಿ.ಕುಮಾರಸ್ವಾಮಿ -ರೇವಣ್ಣ ನಡುವೆ ಮೂಡುತ್ತಾ ಒಮ್ಮತ ?

ಹೀಗಾಗಿ ಈ ಭಾರಿ ಕರ್ನಾಟಕದ ಸಿಎಂ ಸ್ಥಾನಕ್ಕೇರುವ ಕನಸಿನಲ್ಲಿರೋ ಡಿಕೆಶಿ ಜ್ಯೋತಿಷ್ಯಿಗಳ ಸಲಹೆಯಂತೆ ಕುಟುಂಬ ಸಮೇತ ಕಾಳಹಸ್ತಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಹಿಂದೆಯೂ ಕರ್ನಾಟಕದ ಹಲವು ರಾಜಕಾರಣಿಗಳು ತಮ್ಮ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕಾಳಹಸ್ತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ದೇವರ ಮೊರೆ ಹೋಗೋದು ಸಾಮಾನ್ಯ ಸಂಗತಿ. ಕರ್ನಾಟಕದ ಕೋಲಾರದಲ್ಲಿನ ಕುರುಡುಮಲೆ ಗಣಪತಿ ದೇಗುಲಕ್ಕೂ ಎಲ್ಲ ರಾಜಕಾರಣಿಗಳು ಹೆಚ್ಚು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.

KPCC President DK Sivakumar: Circus to fulfill CM’s dream: Special Puja to DK at Kalahasti

RELATED ARTICLES

Most Popular