Lakshman Savadi : ಚುನಾವಣೆಗೆ ನಿವೃತ್ತಿ ಘೋಷಿಸಿದ ಲಕ್ಷ್ಮಣ್‌ ಸವದಿ : ಮನವೊಲಿಕೆಗೆ ಮುಂದಾದ ಹೈಕಮಾಂಡ್‌

ನವದೆಹಲಿ : (Lakshman Savadi) ವಿಧಾನಸಭೆ ಚುನಾವಣೆ ಹತ್ತಿರದಲ್ಲಿದೆ. ಒಂದು ವಾರದಿಂದ ಅಳೆದು ತೂಗಿ ಕೊನೆಗೂ ಬಿಜೆಪಿ ೧೮೯ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಟುಗಡೆ ಮಾಡಿದೆ. ಗುಜರಾತ್‌ ಮಾದರಿಯಲ್ಲೇ ಬಿಜೆಪಿ ಹೊಸಬರಿಗೆ ಮಣೆ ಹಾಕಿದ್ದು, ಹಾಲಿ ಶಾಸಕರಿಗೆ ಕೋಕ್‌ ಕೊಟ್ಟಿದೆ. ಹೈಕಮಾಂಡ್‌ ಕೋಕ್‌ ಕೊಟ್ಟ ಹಾಲಿ ಶಾಸಕರಲ್ಲಿ ಮಾಜಿ ಡಿಸಿಎಂ, ಪಕ್ಷದ ಹಿರಿ ನಾಯಕ, ಘಟಾನುಘಟಿ ನಾಯಕರಾದ ಲಕ್ಷ್ಮಣ ಸವದಿ ಅವರು ಕೂಡ ಒಬ್ಬರು.

ಕಳೆದ ಒಂದು ವಾರದಿಂದ ಬಿಜೆಪಿ ಟಿಕೆಟ್‌ ಹಂಚಿಕೆಗೆ ಒದ್ದಾಡುತ್ತಿತ್ತು. ನನಗೆ ಟಿಕೆಟ್‌ ನೀಡಿ ಎಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದ ಸವದಿಗೆ ಟಿಕೆಟ್‌ ವಂಚನೆಯಾಗಿದೆ. ಇದರಿಂದ ಅಸಮಾಧಾನಗೊಂಡ ಸವದಿ ಬಿಜೆಪಿಗೆ ಗುಡ್‌ ಬೈ ಹೇಳುವುದಾಗಿ ಘೋಷಣೆ ಮಾಡಿದ್ದರು. ಈ ಬಗ್ಗೆ ಮಾತನಾಡಿದ ಬಿಜೆಪಿ ಹೈಕಮಾಂಡ್‌ ಬಿಜೆಪಿಯ ಹಿರಿಯ ನಾಯಕರು ಅವರು, ಪಕ್ಷದಲ್ಲೇ ಇರುತ್ತಾರೆ ಎಂದು ಹೇಳಿ ಸವದಿಯ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

ಇನ್ನೂ ಈ ಬಗ್ಗೆ ಮಾತನಾಡಿದ ಹೈಕಮಾಂಡ್‌ ಪಕ್ಷದ ನಿಲುವಿನಲ್ಲಿ ಟಿಕೆಟ್‌ ಘೋಷಣೆ ಮಾಡಲಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ. ಲಕ್ಷ್ಮಣ ಸವದಿಯವರು 2004, 2008 ಮತ್ತು 2013 ರಲ್ಲಿ ಬಿಜೆಪಿ ಮೂಲಕ ಗೆದ್ದು ಮೂರು ಬಾರಿ ಶಾಸಕರಾಗಿದ್ದರು. ಲಕ್ಷ್ಮಣ ಸವದಿಯವರನ್ನು ಎಂಎಲ್​ಸಿ ಮಾಡುವ ಮೂಲಕ ವಿಧಾನಪರಿಷತ್​ಗೆ ಆಯ್ಕೆ ಮಾಡಲಾಯಿತು. ಲಕ್ಷ್ಮಣ ಸವದಿಯವರನ್ನು ಎಂಎಲ್​ಸಿ ಮಾಡುವ ಮೂಲಕ ವಿಧಾನಪರಿಷತ್​ಗೆ ಆಯ್ಕೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಸಂಪುಟದಲ್ಲಿಯೂ ಕೂಡ ಉಪ ಮುಖ್ಯಮಂತ್ರಿಯಾಗಿದ್ದರು.

ಇದನ್ನೂ ಓದಿ : ಕರ್ನಾಟಕದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬಿಜೆಪಿಗೆ ರಾಜೀನಾಮೆ ಘೋಷಣೆ !

ಇದನ್ನೂ ಓದಿ ; ಕೊನೆಗೂ ನಿಜವಾಯ್ತು ಜೋಶಿ ಭವಿಷ್ಯ: ಶೆಟ್ಟರ್ ಕೈ ತಪ್ಪಿದ ಟಿಕೇಟ್

ಇದನ್ನೂ ಓದಿ : ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರಿಟ್ಟ ಶಾಸಕ ರಘುಪತಿ ಭಟ್ : ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ ಬಿಜೆಪಿ ಶಾಸಕ

Lakshman Savadi: Lakshman Savadi who announced his retirement for the election: High Command came forward to persuade.

Comments are closed.