Lakshmana Savadi : ಬಿಜೆಪಿ ಟಿಕೆಟ್‌ ತಪ್ಪಿದ್ರೆ ಸವದಿ ಕೈ ಸೇರೋದು ಪಕ್ಕಾನಾ ?

ಬೆಂಗಳೂರು : (Lakshmana Savadi) ರಾಜ್ಯದಲ್ಲಿ ವಿಧಾನಸಭೆ ಮತದಾನಕ್ಕೆ ಒಂದು ತಿಂಗಳು ಮಾತ್ರವೇ ಬಾಕಿ ಇದೇ. ಈ ನಡುವೆ ಅಧಿಕಾರದ ಗದ್ದುಗೆ ಏರಲು ಪಕ್ಷಗಳು ಪಣತೊಟ್ಟಿದ್ದು, ಈಗಾಗಲೇ ಭಾಗಶಃ ಪ್ರಚಾರ ಕಾರ್ಯವನ್ನು ಮೂರು ಪಕ್ಷಗಳು ಮುಗಿಸಿವೆ. ಇನ್ನೂ ಟಿಕೆಟ್‌ ಹೆಣಗಾಟದಲ್ಲಿ ಪಕ್ಷಗಳು ತಲೆ ಕೆಡಿಸಿಕೊಂಡಿದ್ದು, ಕಾಂಗ್ರೆಸ್‌ ತನ್ನ ಎರಡು ಹಂತದ ಪಟ್ಟಿಯನ್ನು ಬಿಡುಗಡೆ ಗೊಳಿಸಿದೆ. ಜೆಡಿಎಸ್‌ ಒಂದು ಹಂತದ ಪಟ್ಟಿ ಬಿಡುಗಡೆಗೊಳಿಸಿದೆ. ಈ ನಡುವೆ ಬಿಜೆಪಿ ಮಾತ್ರ ಇನ್ನೂ ಒಂದು ಹಂತದ ಟಿಕೆಟ್‌ ಅನ್ನು ಕೂಡ ಬಿಡುಗಡೆ ಗೊಳಿಸದೇ ಇಂದು ನಾಳೆ ಎನ್ನುತ್ತಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಘೋಷಣೆ ಆಗದಿರುವ ಹಿನ್ನೆಲೆ, ಟಿಕೆಟ್‌ ಹಂಚಿಕೆ ದೊಡ್ಡ ತಲೆನೋವನ್ನೆ ಸೃಷ್ಟಿಸಿದೆ. ಹಲವರಿಗೆ ಈ ಬಾರಿ ಬಿಜೆಪಿ ಟಿಕೆಟ್‌ ಕೈ ತಪ್ಪುವ ಸಾಧ್ಯತೆಗಳಿದ್ದು, ಬಿಜೆಪಿ ಟಿಕೆಟ್‌ ಕೈ ತಪ್ಪಿದರೇ ಕೆಲವು ಅಭ್ಯರ್ಥಿಗಳು ಪಕ್ಷ ಬಿಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆಯೇ ಲಕ್ಷ್ಮಣ ಸವದಿ ಕೂಡ ಬಿಜೆಪಿ ಟಿಕೆಟ್‌ ತಪ್ಪಿದರೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರು ಹಾಗೂ ಸಂಸದರ ಮಕ್ಕಳಿಗೆ ಟಿಕೆಟ್‌ ನೀಡಲು ಸಮ್ಮತಿ ಇಲ್ಲದ ಕಾರಣ ಪಕ್ಷದ ಕಾರ್ಯಕರ್ತರು ಹಾಗೂ ಹೊಸ ಮುಖಗಳನ್ನು ಕಣಕ್ಕೆ ಇಳಿಸಲು ಬಿಜೆಪಿ ಮುಂದಾಗಿದ್ದಾರೆ. ಇದರಿಂದಾಗಿ ಟಿಕೆಟ್‌ ಹಂಚಿಕೆ ಬಿಕ್ಕಟ್ಟಿನ ಹಂತ ತಲುಪಿದ್ದು, ಮೊದಲ ಪಟ್ಟಿಯ ಬಿಡುಗಡೆ ಒಂದೆರಡು ದಿನ ವಿಳಂಬವಾಗುವ ಸಾಧ್ಯತೆಗಳು ಇವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಹಿನ್ನಲೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರು ಟಿಕೆಟ್‌ ಸಿಗದಿದ್ದರೆ ಕಾಂಗ್ರೆಸ್‌ ಸೇರಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Hassan ticket fight : ಟಿಕೆಟ್ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ : ಹಾಸನಕ್ಕಾಗಿ ಹೊಸತಂತ್ರ ಹೂಡಿದ ಎಚ್.ಡಿ.ರೇವಣ್ಣ

ಸೋಮವಾರ ಸವದಿ ಅವರು ಇದ್ದಕ್ಕಿದ್ದಂತೆ ದೆಹಲಿಗೆ ತೆರಳಿದ್ದು, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಕೆಲವು ಕಾಂಗ್ರೆಸ್‌ ಶಾಸಕರು ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿ ದೆಹಲಿಗೆ ತೆರಳಿದ್ದಾರೆ. ಈ ಎಲ್ಲಾ ಶಾಸಕರು, ವಿರೋಧಪಕ್ಷ ನಾಯಕ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು ಎಂದು ಹೇಳಲಾಗುತ್ತಿದೆ. ಇದಲ್ಲದೇ ಸವದಿ ಅವರನ್ನು ಕಾಂಗ್ರೆಸ್‌ ಗೆ ಕರೆತರುವ ಜವಾಬ್ದಾರಿಯನ್ನು ಈ ಶಾಸಕರಿಗೆ ಸಿದ್ದು ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸವದಿ ಅವರು ಬಿಜೆಪಿ ತೊರೆದು ಕೈ ಪಾಳಯ ಸೇರಲಿದ್ದಾರೆ ಎನ್ನುವ ವರದಿಗಳು ಕೇಳಿಬರುತ್ತಿದ್ದು, ಸವದಿ ಅವರಿಗೆ ಬಿಜೆಪಿ ಟಿಕೆಟ್‌ ಸಿಗುತ್ತಾ ? ಇಲ್ಲಾ ಸವದಿ ಕಾಂಗರೆಸ್‌ ಸೇರುತ್ತಾರಾ ? ಕಾದು ನೋಡಬೇಕಿದೆ.

Lakshmana Savadi: If the BJP ticket fails, is Savadi willing to join hands

Comments are closed.