ವಿಷಕಂಠನ ಸನ್ನಿಧಿಯಲ್ಲಿ ನಮೋ : ಪ್ರಧಾನಿ ಪ್ರದೋಷ ಪೂಜೆಯ ವಿಶೇಷತೇ ಏನು ಗೊತ್ತಾ ?

ಬೆಂಗಳೂರು : ರಾಜ್ಯದಲ್ಲಿ ಚುನಾವಣೆಯ ಕಣ ರಂಗೇರಿದ್ದು, ಇನ್ನೇನು ಮತದಾನಕ್ಕೆ ದಿನಗಣನೆ ನಡೆದಿದೆ. ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಹಿರಂಗ ಪ್ರಚಾರವನ್ನು ದಕ್ಷಿಣ ಕಾಶಿ ಖ್ಯಾತಿಯ ಮೈಸೂರು ನಂಜನಗೂಡು ನಂಜುಡೇಶ್ವರನ (Mysore Nanjangudu Nanjudeshwar) ದರ್ಶನ ಹಾಗೂ ಪೂಜೆಯೊಂದಿಗೆ ಕೊನೆಗೊಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 18 ಸಮಾವೇಶ, 6 ರೋಡ್ ಶೋ ನಡೆಸಿದ ಮೋದಿ ಹುಮಾನಾಬಾದ್ ನಲ್ಲಿ ಆರಂಭಿಸಿದ ಚುನಾವಣಾ ಪ್ರಚಾರವನ್ನು ಮೈಸೂರಿನ ನಂಜನಗೂಡಿನ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸೋ ಮೂಲಕ ಅಂತ್ಯಗೊಳಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಮೋದಿ ಇದು ತಮ್ಮ ಕೊನೆಯ ಚುನಾವಣಾ ಪ್ರಚಾರ ಎಂಬುದನ್ನು ಉಲ್ಲೇಖಿಸಿದ್ದು, ಕೊಂಚ ಭಾವುಕರಾಗಿ ಬಿಜೆಪಿಯನ್ನು ಗೆಲ್ಲಿಸುವಂತೆ ಕೋರಿದ್ರು. ಕಾಂಗ್ರೆಸ್ ತುಕಡೇ ಗ್ಯಾಂಗ್ ನ ಜೊತೆಗಿದೆ ಎನ್ನುವ ಮೂಲಕ ಕೈಪಡೆಯ ನಾಯಕಿ ಸೋನಿಯಾಗಾಂಧಿ ಮಾತಿಗೆ ಕೌಂಟರ್ ನೀಡಿದ್ರು.

ಆದರೆ ಇದೆಲ್ಲವೂ ಮೋದಿ ಪ್ರವಾಸದ ರಾಜಕೀಯ ಅಂಶಗಳಾದ್ರೇ, ಮೋದಿ ತಮ್ಮ ರೋಡ್ ಶೋ ಹಾಗೂ ಪ್ರವಾಸದ ಕೊನೆಯಲ್ಲಿ ಮೈಸೂರಿನ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದ್ದು ಹಾಗೂ ದಕ್ಷಿಣ ಕಾಶಿ ಎಂದೇ ಖ್ಯಾತಿಗಳಿಸಿದ ಸ್ಥಳವನ್ನು ತಮ್ಮ ಚುನಾವಣಾ ಪ್ರಚಾರದ ಕೊನೆಯ ಸ್ಥಳವಾಗಿ ಆಯ್ದುಕೊಂಡಿದ್ದಕ್ಕೆ ಕಾರಣವೇನು ಎಂಬ ಚರ್ಚೆ ಆರಂಭವಾಗಿದೆ. ರಾಜಕೀಯವನ್ನು ಧರ್ಮದ ಆಧಾರದ ಮೇಲೆಯೇ ನೋಡುವ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರವನ್ನು ನಂಜುಂಡೇಶ್ವರನಿಗೆ ಪ್ರದೋಷ ಪೂಜೆ ಸಲ್ಲಿಸುವ ಮೂಲಕ ಕೊನೆಗೊಳಿಸಿದ್ದರಲ್ಲಿ ಒಂದು ಮಹತ್ವದ ದೈವಿಕ ಲೆಕ್ಕಾಚಾರವಿದೆ.

ಉತ್ತದಲ್ಲಿರೋ ಕಾಶಿ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸ್ಥಾನವಿದೆ. ಕಾಶಿ ದರ್ಶನದಿಂದ ಬದುಕು ಧನ್ಯತೆಯನ್ನು ಪಡೆದುಕೊಳ್ಳುತ್ತದೆ ಎಂದು ನಂಬಲಾಗುತ್ತದೆ. ಅಂತೆಯೇ ಕಾಶಿ ವಿಶ್ವೇಶ್ವರನ ದರ್ಶನದಿಂದ ಮನುಷ್ಯ ತನ್ನೆಲ್ಲ ಪಾಪವನ್ನು ಕಳೆದುಕೊಂಡು ಪರಿಶುದ್ಧನಾಗುತ್ತಾನೆ ಎಂಬ ನಂಬಿಕೆಯೂ ಇದೆ. ಇಂತಿಪ್ಪ ಕಾಶಿಯ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಉತ್ತರದ ರಾಜ್ಯಗಳಲ್ಲಿ ಅಭೂತಪೂರ್ವ ಯಶಸ್ಸು ಪಡೆದು ಅಧಿಕಾರ ಪಡೆದುಕೊಂಡಿದೆ.

ಬಿಜೆಪಿಗೆ ಅಸ್ತಿತ್ವವೇ ಇಲ್ಲದ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರ ಪಡೆದುಕೊಂಡಿದ್ದಕ್ಕೆ ಕಾಶಿ ವಿಶ್ವೇಶ್ವರನ ಆಶೀರ್ವಾದವೇ ಕಾರಣ ಎಂಬುದು ಆಧ್ಯಾತ್ಮ ಚಿಂತಕರ ಅಭಿಪ್ರಾಯ. ಹೀಗಾಗಿ ದಕ್ಷಿಣ ಭಾರತದ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಜಯ ಗಳಿಸಲು ಮೋದಿ ಪುಣ್ಯಕ್ಷೇತ್ರ ಮೈಸೂರು ನಂಜುಂಡೇಶ್ವರನ ದರ್ಶನ ಪಡೆದು ಜಲಪ್ರಿಯನಾದ ಈಶ್ವರನಿಗೆ ಅಭಿಷೇಕ ನಡೆಸಿ, ಬಿಲ್ವಪತ್ರೆ ಅರ್ಪಿಸಿ ವಿಶೇಷ ಪೂಜೆ ನಡೆಸಿದ್ದಾರೆ. ಅಲ್ಲದೇ ದಕ್ಷಿಣದ ದಂಡಯಾತ್ರೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರಂತೆ.

ಇದನ್ನೂ ಓದಿ : ಬೆಂಗಳೂರಲ್ಲಿಂದು ಪ್ರಧಾನಿ ನರೇಂದ್ರ ಮೋದಿ 2ನೇ ರೋಡ್ ಶೋಗೆ ಕ್ಷಣಗಣನೆ

ಅತ್ಯಂತ ಪವಿತ್ರ ಸ್ಥಳವಾಗಿರುವ ನಂಜುಂಡೇಶ್ವರ ಸನ್ನಿಧಾನದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಕಟ್ಟಿಕೊಳ್ಳುವುದು ವಾಡಿಕೆ. ಕೇವಲ ಹರಕೆ ಮಾತ್ರವಲ್ಲ ಕಾಶಿ ಮಾದರಿಯಲ್ಲೇ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷತೆ. ಹೀಗಾಗಿ ಮೋದಿ ತಮ್ಮ ಎಲ್ಲ ಸಂಕಟ,ಸವಾಲುಗಳನ್ನು ನಂಜುಂಡನಿಗೆ ಅರ್ಪಿಸಿ ಗೆಲುವಿಗೆ ಪ್ರಾರ್ಥಿಸಿದ್ದಾರೆ. ಇತ್ತೀಚಿಗೆ ಕರ್ನಾಟಕದಲ್ಲಿ ಬಿಜೆಪಿ ನೀರಿಕ್ಷಿತ ಸ್ಥಾನಗಳನ್ನು ಪಡೆದು ಸಂಪೂರ್ಣ ಬಹುಮತವನ್ನು ಬಿಜೆಪಿ ಪಡೆದಿಲ್ಲ. ಹೀಗಾಗಿ ಪ್ರದೋಷ ಪೂಜೆ ಮೂಲಕ ಮೋದಿ ನಂಜುಂಡನ ಮೊರೆ ಹೋಗಿ ಬಿಜೆಪಿ ಯಶಸ್ಸಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೋದಿ ದೆಹಲಿಗೆ ಮರಳಿದ್ದು, ಮೋದಿ ರಾಜ್ಯ ಭೇಟಿ ಎಷ್ಟರ ಮಟ್ಟಿಗೆ ಫಲ‌ ನೀಡುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Mysore Nanjangudu Nanjudeshwar : Namo in the presence of Vishakantha: Do you know what is special about Prime Minister Pradosha Puja?

Comments are closed.