ಚುನಾವಣೆ ಹೊತ್ತಲ್ಲಿ ಮಾತುತಪ್ಪಿದ ಬಿಜೆಪಿ ಸರ್ಕಾರ: ಮಹಿಳೆಯರಿಗೆ ಇನ್ನೂ ಸಿಕ್ಕಿಲ್ಲ ಫ್ರೀ ಪಾಸ್

ಬೆಂಗಳೂರು : (No Free pass for ladies) ಚುನಾವಣೆಯ ಹೊತ್ತಿನಲ್ಲಿ‌ ಜನರನ್ನು ಮನವೊಲಿಸಲು ಒಂದಿಷ್ಟು ಯೋಜನೆಗಳನ್ನು ಘೋಷಿಸಿದ್ದ ಸರ್ಕಾರದ ಅಸಲಿ ಬಣ್ಣ ಈಗ ಬಯಲಾಗುತ್ತಿದೆ. ರಾಜ್ಯದ 30 ಲಕ್ಷ ಅಸಂಘಟಿತ ವಲಯದಲ್ಲಿ ಕೆಲಸ ಮಾಡ್ತಿರುವ ಮಹಿಳೆಯರಿಗೆ ಬಸ್ ಪಾಸ್ ಭರವಸೆ ನೀಡಿದ್ದ ಭರವಸೆ ಕೇವಲ ಭರವಸೆಯಾಗಿ ಉಳಿದಿದ್ದು, ಪಾಸ್  ವಿತರಿಸದ ಕಾರಣಕ್ಕೆ ಕಾರ್ಮಿಕ ಮಹಿಳೆಯರು ಹಣ ಪಾವತಿಸಿ ಸಂಚರಿಸುತ್ತಿದ್ದಾರೆ.

ಸರಕಾರ ಕಾರ್ಮಿಕ ಮಹಿಳೆಯರಿಗೆ ಫ್ರೀ ಪಾಸ್ ಘೋಷಿಸಿತ್ತು. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಸಿಎಂ ಬೊಮ್ಮಾಯಿ, ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದರು. ಆದರೆ ಸಿಎಂ ಹೇಳಿದ ನಿಯಮದಂತೆ  ಇಂದಿನಿಂದ ಉಚಿತ ಬಸ್ ಪಾಸ್ ವಿತರಣೆ ಆಗಬೇಕಿತ್ತು. ಇಂದಿನಿಂದ ಅಂದ್ರೇ ಏಪ್ರಿಲ್ 1 ರಿಂದ  ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕಿತ್ತು. ಆದರೆ ಕೊಟ್ಟ ಮಾತಿನಂತೆ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿಲ್ಲ.

ಉಚಿತ ಬಸ್ ಪಾಸ್ ಗೆ ಬಜೆಟ್ ನಲ್ಲಿ 1 ಸಾವಿರ ಕೋಟಿ ಮೀಸಲಿಸಲಾಗಿತ್ತು.ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿಗೆ ಉಚಿತ ಪಾಸ್ ಬಗ್ಗೆ ಇನ್ನೂ  ಆದೇಶ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಪಾಸ್ ವಿತರಣೆಯಾಗಿಲ್ಲ. ಮಹಿಳೆಯರಿಗೆ ಗೌರವ ಮತ್ತು ಆರ್ಥಿಕ ಸ್ವಾವಲಂಭನೆ ತಂದು ಕೊಡುವ ಯೋಜನೆ ಎಂದಿದ್ದ ಸಿಎಂ,ಕಾರ್ಮಿಕ ಮಹಿಳೆಯರ ಕಲ್ಯಾಣಕ್ಕಾಗಿ  ಉಚಿತ ಪಾಸ್ ನೀಡುತ್ತೇವೆ ಎಂದಿದ್ದರು.   ಆದರೆ ಇಂದು ಎಂದಿನಂತೆ ಬಸ್ ನಲ್ಲಿ ಹಣ ನೀಡಿ ಸಂಚರಿಸುತ್ತಿರುವ ಮಹಿಳೆಯರು ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ : ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ, ಮಧ್ಯ ಮಾರಾಟ ನಿಷೇಧ

ಮಹಿಳೆಯರ ಸಬಲೀಕರಣಕ್ಕೆ ಗೃಹಿಣಿ ಶಕ್ತಿ‌ಯೋಜನೆ ರೂಪಿಸಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಸರ್ಕಾರ, ಗಾರ್ಮೆಂಟ್ಸ್ ಸೇರಿದಂತೆ ವಿವಿಧ ಖಾಸಗಿ ಸೆಕ್ಟರ್ ನಲ್ಲಿ ಕೆಲಸ ಮಾಡ್ತಿರೋ ಕಾರ್ಮಿಕ ಮಹಿಳೆಯರಿಗೆ ಈ ಯೋಜನೆ ಅನ್ವಯವಾಗಲಿದೆ. ತಮ್ಮ ಕೆಲಸದ ಗುರುತಿನ ಪತ್ರ, ಕೆಲಸ ಮಾಡುವ ಸ್ಥಳದಿಂದ ಧೃಡೀಕರಣ ಪತ್ರ ಹಾಗೂ ಒಂದು ಐಡೆಂಟಿಟಿ ಕಾರ್ಡ್ ಆಧರಿಸಿ ಪಾಸ್ ವಿತರಿಸಲು ಸೂಚಿಸಲಾಗಿತ್ತು. ಮೆಜೆಸ್ಟಿಕ್, ಶಾಂತಿನಗರ ಸೇರಿದಂತೆ ಹಲವೆಡೆ  ಈ ಫ್ರೀ ಪಾಸ್ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿತ್ತು.

No Free pass for ladies: BJP government misspoke during the elections: Women have not got free pass yet

Comments are closed.