ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಅವರಿಗೆ ಅಭಯ ನೀಡಿದ ಪಂಜುರ್ಲಿ ದೈವ

ಕುಂದಾಪುರ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗುತ್ತಿದ್ದಂತೆ, ಪ್ರಚಾರವು ಕೂಡ ಬಿರುಸಿನಿಂದ ಸಾಗುತ್ತಿದೆ. ಆದರೆ ಈ ಭಾರಿ ಕರಾವಳಿಯ ಕುಂದಾಪುರ ಚುನುವಣೆ ವಿಶೇಷವಾಗಿ ಜನರ ಗಮನ ಸೆಳೆದಿದೆ. ಹಾಲಿ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ಬಿಜೆಪಿಯ ಭೀಷ್ಮ ಎ.ಜಿ.ಕೊಡ್ಗಿ ಅವರ ಪುತ್ರ ಕಿರಣ್‌ ಕೊಡ್ಗಿ (Kiran kodgi) ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ (Kundapur BJP candidate Kiran Kodgi) ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಈ ನಡುವೆ ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಅವರಿಗೆ ಪಂಜುರ್ಲಿ ದೈವ ಅಭಯವನ್ನು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇತ್ತೀಚೆಗೆ ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಅವರು ಉಪ್ಲಾಡಿ ಕೋಟ್ಯಾನ್ ಕುಟುಂಬಿಕರ ಸಿರಿ ಸಿಂಗಾರ ಕೋಲದಲ್ಲಿ ಭಾಗಿಯಾಗಿದ್ದರು. ಪಂಜುರ್ಲಿ ದೈವ ದರ್ಶನದಲ್ಲಿ, “ನಿಮ್ಮ ಆಂತರಂಗದ ಬಯಕೆ ಏನು ಉಂಟು ಮಾಯತನಕ್ಕೆ ಗೊತ್ತುಂಟು, ಆ ಪ್ರಕಾರವಾಗಿ ನಿಮ್ಮ ಆಂತರಂಗದ ಆಸೆಯನ್ನು ನಿರಾಸೆಯಾಗದಂತೆ ಕೊಟ್ಟಂತಹ ಫಲ ಕಾಣಿಕೆಯಿಂದ ಧರ್ಮ ಕಾಪಾಡುತ್ತೇನೆ. ಮುಂದೆ ಆರೋಗ್ಯ ಭಾಗ್ಯ ಕೊಟ್ಟು, ನಿಮ್ಮಿಂದ ಹತ್ತು ಜನರಿಗೆ ಸಹಾಯವಾಗುವಂತಹ ವ್ಯಕ್ತಿಯಾಗುವಂತೆ ನೋಡಿಕೊಳ್ಳುತ್ತೇನೆ” ಎಂದು ಹೇಳಿ ಪ್ರಸಾದವನ್ನು ಕೊಟ್ಟು ಅಭಯವನ್ನು ನೀಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ : ಕಡಲ ನಗರಕ್ಕೆ ಇಂದು ಪ್ರಧಾನಿ ಮೋದಿ ಆಗಮನ : ಮೂಲ್ಕಿಯಲ್ಲಿ ಬೃಹತ್‌ ರಾಲಿ, 2.5 ಲಕ್ಷ ಜನ ಭಾಗಿ ಸಾಧ್ಯತೆ

ಇದನ್ನೂ ಓದಿ : Bajrang Dal : ಕೈಗೆ ಮುಳುವಾಯ್ತಾ ಭಜರಂಗದಳ ನಿಷೇಧದ ಘೋಷಣೆ ?

1999 ರಿಂದಲೂ ಬಿಜೆಪಿಯ ಕೈವಶದಲ್ಲಿರುವ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಗೆಲುವು ಸದ್ಯಕ್ಕೆ ಕಬ್ಬಿಣದ ಕಡಲೆ. ಕಾಂಗ್ರೆಸ್‌ನ ಹಳೆಯ ಹುಲಿ ಪ್ರತಾಪ್‌ ಚಂದ್ರ ಶೆಟ್ಟಿ ಅವರಿಗೆ ಸೋಲಿನ ರುಚಿ ತೋರಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಇದುವರೆಗೂ ಸೋಲನ್ನು ಕಂಡಿಲ್ಲ. ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿಯೂ ಭರ್ಜರಿ ಗೆಲುವು ಕಂಡುಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಖುದ್ದು ಹಾಲಾಡಿ ಅವರೇ ಕಿರಣ್‌ ಕೊಡ್ಗಿ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಅಷ್ಟೇ ಅಲ್ಲಾ ತಾನೇ ಕಿರಣ್‌ ಕೊಡ್ಗಿ ಅವರ ಮುಂದೆ ನಿಂತು ಚುನಾವಣೆ ಎದುರಿಸುವುದಾಗಿಯೂ ಘೋಷಿಸಿದ್ದಾರೆ.

ಇದನ್ನೂ ಓದಿ : Basangouda Patil Yatnal‌ : ವಾಜಪೇಯಿ ಕಾಲದಲ್ಲೇ ಮಿನಿಸ್ಟರ್ ನಾನು: ಈಗ್ಯಾಕೆ ಸಿಎಂ ಆಗಬಾರದು ? ಯತ್ನಾಳ್ ಹೊಸಬಾಂಬ್

Panjurli God gave shelter to Kundapur BJP candidate Kiran Kodgi.

Comments are closed.