ಸೋಮವಾರ, ಏಪ್ರಿಲ್ 28, 2025
HomeElectionಮೇ 3 ರಂದು ಕಡಲೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ : ಮಂಗಳೂರು-ಉಡುಪಿ ಮಾರ್ಗ ಬದಲಾವಣೆ

ಮೇ 3 ರಂದು ಕಡಲೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ : ಮಂಗಳೂರು-ಉಡುಪಿ ಮಾರ್ಗ ಬದಲಾವಣೆ

- Advertisement -

ಮಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೂ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಹಿನ್ನಲೆ ಮತದಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯ ಪ್ರವಾಸದಲ್ಲಿದ್ದು ನಾಳೆ (ಮೇ 02, 03) ವಿವಿಧ ಜಿಲ್ಲೆಗಳಲ್ಲಿ ಅಬ್ಬರದ ಪ್ರಚಾರ ಹಾಗೂ ರೋಡ್ ಶೋ ನಡೆಸಲಿದ್ದಾರೆ. ಇನ್ನು ಮೇ 3 ರಂದು ಮಂಗಳೂರಿಗೆ (Prime Minister To Visit Mangalore) ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಮಂಗಳೂರು ಹಾಗೂ ಉಡುಪಿ ರಸ್ತೆ ಮಾರ್ಗ ಬದಲಾವಣೆ ಆಗಲಿದೆ ಎನ್ನಲಾಗಿದೆ.

ಪ್ರಧಾನಿ ಮೋದಿ ಬುಧವಾರ (ಮೇ 03) ಕರಾವಳಿಗೆ ಆಗಮಿಸಲಿದ್ದು, ಬೆಳಗ್ಗೆ 10.30ಕ್ಕೆ ಮಂಗಳೂರಿನ ಮೂಲ್ಕಿಯಲ್ಲಿ ಬಿಜೆಪಿಯ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಎರಡು ಜಿಲ್ಲೆಗಳಿಂದ ಎರಡೂವರೆ ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ.

ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿ ಬೂತ್ ಮಟ್ಟದ ಸಭೆ ನಡೆಸಿದೆ. ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ಗಾಗಿ ಮೂರು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ. ಎನ್‌ಎಂಪಿಎ, ಎಂಆರ್‌ಪಿಎಲ್‌ನಲ್ಲಿ ಎರಡು ಹೆಲಿಪ್ಯಾಡ್‌ಗಳು ಮತ್ತು ಮೂಲ್ಕಿಯ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಒಂದನ್ನು ಸಿದ್ಧಪಡಿಸಲಾಗಿದೆ. ಮೂರು ಹೆಲಿಪ್ಯಾಡ್‌ಗಳಲ್ಲಿ ಒಂದರಲ್ಲಿ ಪ್ರಧಾನಿ ಬಂದಿಳಿಯಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಲಿದ್ದಾರೆ. ಮುಲ್ಕಿ ಹೆಲಿಪ್ಯಾಡ್ ಮತ್ತು ಕಾರ್ಯಕ್ರಮ ನಡೆಯುವ ಸ್ಥಳವು ಸುಮಾರು ಅರ್ಧ ಕಿಲೋಮೀಟರ್ ಅಂತರದಲ್ಲಿದೆ.

ಇದನ್ನೂ ಓದಿ : 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಮಾಸಿಕ 2,000ರೂ. ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಏನೇನಿದೆ ?

ಮಂಗಳೂರು-ಉಡುಪಿ ಹೆದ್ದಾರಿಯಲ್ಲಿ ಪರ್ಯಾಯ ಮಾರ್ಗ:

ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುವ ಎಲ್ಲಾ ಮಾದರಿಯ ವಾಹನಗಳು ಮೂಲ್ಕಿ ವಿಜಯ ಸನ್ನಿಧಿ ಬಳಿ ಎಡಕ್ಕೆ ಸಾಗಿ ಕಿನ್ನಿಗೋಳಿ ಕಟೀಲು ಬಜಪೆ ಕಾವೂರು ಮಾರ್ಗವಾಗಿ ಮಂಗಳೂರು ಕಡೆಗೆ ಸಾಗಬೇಕು. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳು ಕೆಪಿಟಿ ಜಂಕ್ಷನ್‌ನಿಂದ ಕಾವೂರು, ಬಜ್ಪೆ, ಕಟೀಲು, ಕಿನ್ನಿಗೋಳಿ, ಮೂಲ್ಕಿ ಕಡೆಗೆ ಹೋಗಬೇಕು ಅಥವಾ ಕೂಳೂರು ಜಂಕ್ಷನ್‌ನಿಂದ ಬಲಕ್ಕೆ ಕಾವೂರು, ಬಜ್ಪೆ, ಕಟೀಲು, ಕಿನ್ನಿಗೋಳಿ ಕಡೆಗೆ ಮುಲ್ಕಿ ಕಡೆಗೆ ಹೋಗಬೇಕು. ಮಂಗಳೂರು, ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಹಳೆಅಂಗಡಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಪಕ್ಷಿಕೆರೆ ಎಸ್-ಕೋಡಿ ಮಾರ್ಗವಾಗಿ ಮೂಲ್ಕಿ ಕಡೆಗೆ ಸಾಗಬೇಕು.

Prime Minister To Visit Mangalore: Arrival of Prime Minister Narendra Modi in Mangalore on May 3: Mangalore-Udupi Route Changed

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular