Revanna-Kumaranna fight : ರೇವಣ್ಣ- ಕುಮಾರಣ್ಣ ಫೈಟ್ ನೋಡಿ ಸೈಲೆಂಟ್ ಆದ ದೇವೇಗೌಡ್ರು: ಬಂಡಾಯ ಬಾವುಟ ಹಾರಿಸಿದ ಭವಾನಿ

ಬೆಂಗಳೂರು : (Revanna-Kumaranna fight) ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಹಾಸನ ಟಿಕೇಟ್ ಫೈಟ್ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಮನವರಿಕೆ, ಬೇಡಿಕೆ ಯಾವುದಕ್ಕೂ ತಲೆಬಾಗದ ಕುಮಾರ ಸ್ವಾಮಿಯವರನ್ನು ಮಣಿಸಲು ರೇವಣ್ಣ ಫ್ಯಾಮಿಲಿ ಬಂಡಾಯದ ಅಸ್ತ್ರ ಪ್ರಯೋಗಿಸಲು ಸಿದ್ಧವಾದಂತಿದೆ. ಒಂದೊಮ್ಮೆ ಜೆಡಿಎಸ್ ನಿಂದ ಟಿಕೇಟ್ ಸಿಗದೇ ಇದ್ದಲ್ಲಿ ಪಕ್ಷೇತರವಾಗಿ ಕಣಕ್ಕಿಳಿಯಲು ಭವಾನಿ ರೇವಣ್ಣ ಸಜ್ಜಾಗಿದ್ದಾರಂತೆ.

ಹಾಸನದ ಅಂಗಳದಲ್ಲಿ ಆರಂಭವಾದ ಭವಾನಿ ರೇವಣ್ಣ ಹಾಗೂ ಸ್ವರೂಪ್ ನಡುವಿನ ಟಿಕೇಟ್ ಫೈಟ್ ಮಾಜಿ ಪ್ರಧಾನಿ ದೇವೇಗೌಡರ ಅಂಗಳ ತಲುಪಿತ್ತು. ಆದರೆ ದೊಡ್ಡ ಗೌಡರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲೂ ಸಮಸ್ಯೆಬಗೆಹರಿಯಲಿಲ್ಲ. ಭವಾನಿ ರೇವಣ್ಣಗೆ ಟಿಕೆಟ್ ನೀಡಲು ಕುಮಾರಸ್ವಾಮಿ ವಿರೋಧಿಸಿದ್ದು, ಈ ಭಾರಿಯೂ ಕುಟುಂಬದಿಂದಲೇ ಹೆಚ್ಚು ಜನರು ಕಣಕ್ಕಿಳಿದರೇ ಪಕ್ಷಕ್ಕೆ ಮುಜುಗರವಾಗಲಿದೆ ಎಂದು ವಾದಿಸಿದ್ದಾರಂತೆ. ಹೀಗಾಗಿ ಕುಮಾರಸ್ವಾಮಿ ಯವರ ಹಟವನ್ನು ಮಣಿಸಲು ಹಾಗೂ ಕುಮಾರಸ್ವಾಮಿಗೆ ಸೆಡ್ಡು ಹೊಡೆಯಲು ಮತ್ತೊಂದು ಹೆಜ್ಜೆ ಮುಂದೇ ಹೋದ ರೇವಣ್ಣ ಕುಟುಂಬ ಸ್ವತಂತ್ರವಾಗಿ ಸ್ಪರ್ಧಿಸೋದಾದರೂ ಸರಿ ಭವಾನಿ ರೇವಣ್ಣ ಕಣಕ್ಕಿಳೀಯೋದು ಖಚಿತ ಎಂದಿದ್ದಾರಂತೆ.

ಪಕ್ಷೇತರವಾಗಿ ನಾಮಪತ್ರ ಸಲ್ಲಿಸಲು ಭವಾನಿ ರೇವಣ್ಣ ಸಿದ್ದತೆಯಲ್ಲಿ ತೊಡಗಿದ್ದು, ನಿನ್ನೆ ಸಂಧಾನ ಸಭೆ ವಿಫಲಗೊಳ್ಳುತ್ತಿದ್ದಂತೆ ನಿಮ್ಮ ಆಶೀರ್ವಾದ ಇರಲಿ ಮಾವ ಎಂದು ಕಾಲಿಗೆ ಬಿದ್ದು ನಮಸ್ಕರಿಸಿ ಬಂದಿರುವ ಭವಾನಿ ರೇವಣ್ಣ ಈಗಾಗಲೇ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರಂತೆ. ಅಲ್ಲದೇ ರೇವಣ್ಣ ಕೂಡ, ಭವಾನಿಗೆ ಟಿಕೆಟ್ ಬೇಕೆ ಬೇಕು, ಇದು ನನ್ನ ಮರ್ಯಾದೆ ಪ್ರಶ್ನೆ. ಅಪ್ಪಾಜಿ ನೀನು ಈ ಕುಮಾರಸ್ವಾಮಿ ಮಾತು ಕೇಳಬೇಡ, ನಾನು ಗೆಲ್ಲಿಸಿಕೊಂಡು ಬರ್ತೀನಿ, ಸುಮ್ನೆ ಭವಾನಿ ಹೆಸರು ಅನೌನ್ಸ್ ಮಾಡಿ.ಆ ಪ್ರೀತಂಗೌಡನನ್ನ ನಾನು ಸೋಲಿಸಬೇಕು ನನ್ನ ಹೆಂಡತಿ ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ್ದಾನೆ.ನಾನು ಈ ವಿಚಾರದಲ್ಲಿ ಹಿಂದೆ ಸರಿಯಲ್ಲ.ನನ್ನ ಹೆಂಡತಿ, ಮಕ್ಕಳು ಯಾರೂ ಒಪ್ಪುತ್ತಿಲ್ಲ ಎಂದು ದೇವೆಗೌಡರಿಗೆ ಒತ್ತಡ ಹೇರೋ ಕೆಲಸ ಮಾಡಿದ್ದಾರಂತೆ.

ಇದನ್ನೂ ಓದಿ : MLC Ayanur Manjunath: MLC ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್

ಇಬ್ಬರೂ ಮಕ್ಕಳ ಹಟ ನೋಡಿದ ದೇವೇಗೌಡರು ಮೌನವಾಗಿದ್ದು, ಕುಮಾರಸ್ವಾಮಿ ಕೂಡ ರೇವಣ್ಣ ಹಟಕ್ಕೆ ತಲೆಬಾಗಿಲ್ಲವಂತೆ. ಮೂಲಗಳ ಮಾಹಿತಿ ಪ್ರಕಾರ ಭವಾನಿ ರೇವಣ್ಣ ಸ್ಪರ್ಧೆಯಿಂದ ಹಿಂದೆ ಸರಿಯೋ ಮನಸ್ಸು ಮಾಡಿದ್ದರೂ ಪುತ್ರರಾದ ಸೂರಜ್ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ತಾಯಿಯನ್ನು ಬೆಂಬಲಿಸಿದ್ದಾರಂತೆ. ನೀವು ಪಕ್ಷೇತರವಾಗಿ‌ ಸ್ಪರ್ಧಿಸೋ ಸಿದ್ಧತೆ ಮಾಡಿಕೊಳ್ಳಿ, ಅದಕ್ಕೆ ಬೇಕಾದ ದಾಖಲೆ ಸಿದ್ಧಪಡಿಸಿ ನಾವು ಪ್ರಚಾರ ಸೇರಿದಂತೆ ಉಳಿದ ಎಲ್ಲ ಕೆಲಸಗಳನ್ನು ಮಾಡಿ ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ತಾಯಿಗೆ ಇಬ್ಬರೂ ಪುತ್ರರು ವಾಗ್ದಾನ ಮಾಡಿದ್ದಾರಂತೆ. ಹೀಗಾಗಿ ಒಂದೊಮ್ಮೆ ದೇವೇಗೌಡರು ಅನುಮತಿ ನೀಡಿ, ಟಿಕೇಟ್ ಘೋಷಣೆಯಾಗದೇ ಇದ್ದಲ್ಲಿ ಗೌಡ್ರ ಕುಟುಂಬ ಮನೆಯೊಂದು ಮೂರು ಬಾಗಿಲಾಗಲಿದ್ದು, ಭವಾನಿ ರೇವಣ್ಣ ಸ್ವತಂತ್ರ ಸ್ಪರ್ಧೆ ಮೂಲಕ ಕುಮಾರಸ್ವಾಮಿ ಗೆ ಟಕ್ಕರ್ ನೀಡಲಿದ್ದಾರೆ ಎನ್ನಲಾಗ್ತಿದೆ.

Revanna-Kumaranna fight: Dev Goudru became silent after seeing Revanna-Kumaranna fight: Bhavani raised the rebel flag

Comments are closed.