ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಅಪ್ರಾಪ್ತನ ಜೊತೆ ಇಬ್ಬರು ಯುವತಿಯರ ಬಂಧನ
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಘಟನೆ ನಡೆದ ಮೊದಲ 15 ಗಂಟೆಗಳಲ್ಲೇ ಪ್ರಕರಣದ
By ಅನಿಲ್ ಗುಂಡ್ಮಿ | Anil Gundmi
1 min read
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಘಟನೆ ನಡೆದ ಮೊದಲ 15 ಗಂಟೆಗಳಲ್ಲೇ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ತನಿಖೆ ಮುಂದುವರಿದಂತೆ ಈ ಸಂಚಿನ ಹಿಂದೆ ದೊಡ್ಡ ಅಪರಾಧ ಜಾಲ ಕಾರ್ಯನಿರ್ವಹಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರನ್ನು ಬಂಧಿಸಲಾಗಿದ್ದು, ಅವರಲ್ಲಿ ಇಬ್ಬರು ಯುವತಿಯರು ಹಾಗೂ ಒಬ್ಬ ಅಪ್ರಾಪ್ತನೂ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ದೆಹಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಧಾ, ಬಬಿತಾ, ಸುಮಿತ್ ಮತ್ತು ಕುನಾಲ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಬಳಿಕ ಅವರನ್ನು ಹೆಚ್ಚಿನ ತನಿಖೆಗಾಗಿ ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ, ದಾಳಿಯಲ್ಲಿ ಬಳಸಲಾದ ಬಂದೂಕುಗಳನ್ನು ಸಾಗಿಸುವಲ್ಲಿ ರಾಧಾ ಮತ್ತು ಬಬಿತಾ ಪ್ರಮುಖ ಪಾತ್ರ ವಹಿಸಿದ್ದರು. ಸುಮಿತ್ ಮತ್ತು ಕುನಾಲ್ ಬಂದೂಕುಗಳನ್ನು ವ್ಯವಸ್ಥೆ ಮಾಡಿ ಇಬ್ಬರು ಯುವತಿಯರಿಗೆ ನೀಡಿದ್ದು, ಅವರು ಅವುಗಳನ್ನು ದೆಹಲಿಯಿಂದ ರೈಲಿನ ಮೂಲಕ ಮುಂಬೈಗೆ ಕೊಂಡೊಯ್ದು ಪ್ರಮುಖ ಶೂಟರ್ಗಳಿಗೆ ತಲುಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂದೂಕುಗಳನ್ನು ಸಾಗಿಸುವ ವೇಳೆ ರಾಧಾ ಮತ್ತು ಬಬಿತಾ ಅವರು ಎನ್ಕ್ರಿಪ್ಟೆಡ್ ಮೆಸೇಜಿಂಗ್ ಅಪ್ಲಿಕೇಶನ್ಗಳ ಮೂಲಕ ಕುನಾಲ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ದಾಳಿಯ ಹೊಣೆ ಹೊತ್ತಿರುವುದಾಗಿ ಹೇಳಿಕೊಂಡಿರುವ ಅನಿಲ್ ಪಂಡಿತ್ ಕೂಡ ಕುನಾಲ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಯಾಚರಣೆಗೆ ಸಂಬಂಧಿಸಿದ ಸೂಚನೆಗಳನ್ನು ನೀಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಯುವತಿಯರಿಗೆ ಅನಿಲ್ ಪಂಡಿತ್ ನೀಡುತ್ತಿದ್ದ ಸೂಚನೆಗಳನ್ನು ಕುನಾಲ್ ತಲುಪಿಸುತ್ತಿದ್ದನು. ಮುಂಬೈ ತಲುಪಿದ ನಂತರ ರಾಧಾ ಮತ್ತು ಬಬಿತಾ ಹೋಟೆಲ್ನಲ್ಲಿ ತಂಗಿ, ಬಳಿಕ ಬಂದೂಕುಗಳಿದ್ದ ಬ್ಯಾಗ್ ಅನ್ನು ಒಬ್ಬ ಅಪ್ರಾಪ್ತನಿಗೆ ಹಸ್ತಾಂತರಿಸಿದ್ದರು. ತನಿಖೆಯ ಪ್ರಕಾರ, ಅದೇ ದಿನ ಸಂಜೆ ಗುಂಡಿನ ದಾಳಿ ನಡೆಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ರಾಧಾ ಮತ್ತು ಬಬಿತಾ ಉತ್ತರ ಪ್ರದೇಶದ ನಿವಾಸಿಗಳಾಗಿದ್ದು, ಬಂದೂಕುಗಳನ್ನು ವ್ಯವಸ್ಥೆ ಮಾಡಿದ್ದ ಸುಮಿತ್ ಮತ್ತು ಕುನಾಲ್ ಹರಿಯಾಣ ಮೂಲದವರಾಗಿದ್ದಾರೆ. ರಾಧಾ ಮತ್ತು ಬಬಿತಾರನ್ನು ದೆಹಲಿಯಲ್ಲಿ ಬಂಧಿಸಲಾಗಿದ್ದರೆ, ಸುಮಿತ್ ಮತ್ತು ಕುನಾಲ್ ಅವರನ್ನು ಹರಿಯಾಣದ ಸೋನಿಪತ್ನಲ್ಲಿ ಬಂಧಿಸಲಾಗಿದೆ.
Topics
ಸಂಬಂಧಿತ ಸುದ್ದಿಗಳು
entertainment
Kota : ಟೈಗರ್ ಶ್ರಾಫ್ ಮೇಲೆ ದಾಳಿ ಪ್ರಕರಣ ; ಕೋಟಾದಲ್ಲಿ ಮೂವರು ಅರೆಸ್ಟ್
entertainment
ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಮೂವರ ವಿರುದ್ಧ ಎಫ್ಐಆರ್ ದಾಖಲು
entertainment
ಬಿಗ್ಬಾಸ್ ಸ್ಪರ್ಧಿ ಪ್ರಶಾಂತ್ಗೆ ಕಿಚ್ಚನಿಂದ ಕ್ಲಾಸ್ : ಪಿಸುಗುಟ್ಟಿದರೆ 1 ವಾರ ಮೈಕ್ ಕಟ್ ಎಂದ ಸುದೀಪ್
entertainment

