ವರಮಹಾಲಕ್ಷ್ಮಿ ಹಬ್ಬದ ಸಡಗರ: ‘ಟಾಕ್ಸಿಕ್’ ಕೆಲಸಗಳಲ್ಲಿ ಯಶ್ ಬ್ಯುಸಿ, ಒಂಟಿಯಾಗಿಯೇ ಪೂಜೆ ನೆರವೇರಿಸಿದ ರಾಧಿಕಾ
ಸ್ಯಾಂಡಲ್‌ವುಡ್‌ನ ಮುದ್ದಾದ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಈ ಬಾರಿಯ ವರಮಹಾಲಕ್ಷ್ಮಿ ಹಬ್ಬವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
By Meghana Pranuth | ಮೇಘನಾ ಪ್ರಣೂತ್
1 min read
ಸ್ಯಾಂಡಲ್‌ವುಡ್‌ನ ಮುದ್ದಾದ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಈ ಬಾರಿಯ ವರಮಹಾಲಕ್ಷ್ಮಿ ಹಬ್ಬವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.ಪ್ರತಿ ವರ್ಷದಂತೆ ಈ ಬಾರಿಯೂ ರಾಧಿಕಾ ಪಂಡಿತ್ ತಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ವಿಜ್ರಂಭಣೆಯಿಂದ ನೆರವೇರಿಸಿದ್ದಾರೆ.
ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ರಾಧಿಕಾ, ದೇವಿಯ ಅಲಂಕಾರ ಹಾಗೂ ಪೂಜೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಕೂಡ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಇನ್ನೊಂದೆಡೆ, ರಾಕಿ ಭಾಯ್ ಯಶ್ ತಮ್ಮ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾದ ಕೆಲಸಗಳಲ್ಲಿ ತೀವ್ರ ನಿರತರಾಗಿದ್ದಾರೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಹಾಗೂ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಯಶ್ ತಮ್ಮ ಸಂಪೂರ್ಣ ಸಮಯವನ್ನು ಈ ಪ್ರಾಜೆಕ್ಟ್‌ಗೆ ನೀಡುತ್ತಿದ್ದಾರೆ.
ಹಬ್ಬದ ದಿನವೂ ಸಿನಿಮಾದ ಜವಾಬ್ದಾರಿಗಳಲ್ಲಿ ತೊಡಗಿಸಿಕೊಂಡಿರುವ ಯಶ್, ಕುಟುಂಬದ ಜೊತೆ ಕೆಲ ಸಮಯ ಕಳೆದು ಮತ್ತೆ ಶೂಟಿಂಗ್ನತ್ತ ಗಮನ ಹರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರಾಧಿಕಾ ಪಂಡಿತ್ ಹಂಚಿಕೊಂಡಿರುವ ಪೂಜೆಯ ಫೋಟೋಗಳಿಗೆ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, 'ಟಾಕ್ಸಿಕ್' ಸಿನಿಮಾದ ಅಪ್ಡೇಟ್ಗಾಗಿ ಕಾತರದಿಂದ ಕಾಯುತ್ತಿದ್ದಾರೆ.
Topics
ಸಂಬಂಧಿತ ಸುದ್ದಿಗಳು
entertainment
‘ಟಾಕ್ಸಿಕ್’ ಟಿಕೆಟ್ಗೆ ಮುಗಿಬಿದ್ದ ಅಭಿಮಾನಿಗಳು; ಬಾಕ್ಸ್ ಆಫೀಸ್ನಲ್ಲಿ ಸೃಷ್ಟಿಯಾಗುತ್ತಾ ಹೊಸ ದಾಖಲೆ?
entertainment
Pavitra Gowda: ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಸಾವು; ಅತಿಯಾದ ಕುಡಿತವೇ ಪ್ರಾಣಕ್ಕೆ ಮುಳ್ಳಾಯ್ತಾ?
entertainment
ತೆಲುಗಿನಲ್ಲಿ'ಮಹಾಕಾಳಿ'ಯಾಗಿ ಆರ್ಭಟಿಸಲು ಸಜ್ಜಾದ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ
entertainment

